ಬ್ರೇಕಿಂಗ್ ನ್ಯೂಸ್
31-05-21 02:54 pm GIZBOT Mutthuraju H M ಡಿಜಿಟಲ್ ಟೆಕ್
ನೌಕರರ ಭವಿಷ್ಯ ನಿಧಿ ಸಂಸ್ಥೆ ಉದ್ಯೋಗಿಗಳ ಪಾಲಿಗೆ ಕಷ್ಟ ಕಾಲದಲ್ಲಿ ಆರ್ಥಿಕ ನೆರವನ್ನು ನೀಡಲಿದೆ. ಸದ್ಯ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಇಪಿಎಫ್‌ಒ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಇನ್ನು ಈ ಹೊಸ ನಿಯಮವು ಪಿಎಫ್ ಖಾತೆಯಲ್ಲಿ ಅಂದರೆ ಜೂನ್ 1, 2021 ರಿಂದ ಅನ್ವಯವಾಗಲಿದೆ. ಈ ಹೊಸ ನಿಯಮದ ಅನ್ವಯ ನೀವು ನಿಮ್ಮ ಖಾತೆಯನ್ನು ಆಧಾರ್ ಅಥವಾ ಯುಎಎನ್‌ನೊಂದಿಗೆ ಲಿಂಕ್ ಮಾಡಬೇಕೆಂದು ಹೇಳಿದೆ.
ಹೌದು, ಭವಿಷ್ಯ ನಿಧಿ ಸಂಸ್ಥೆ ಹೊಸ ನಿರ್ಧಾರವನ್ನು ಕೈ ಗೊಂಡಿದೆ. ಫಿಎಫ್ ಖಾತೆ ಆಧಾರ್ ಅಥವಾ ಯುಎಎನ್ ಜೊತೆಗೆ ಲಿಂಕ್ ಆಗಿರಬೇಕೆಂದು ಹೇಳಿದೆ. ಒಂದು ವೇಳೆ ಲಿಂಕ್ ಮಾಡುವಲ್ಲಿ ವಿಫಲವಾದರೆ ನಿಮ್ಮ ಖಾತೆಗೆ ಜಮೆಯಾಗುವ ಉದ್ಯೋಗದಾತರ ಕೊಡುಗೆಯನ್ನು ನಿಲ್ಲಿಸಬಹುದು. ಆದ್ದರಿಂದ, ನಿಮ್ಮ ಪಿಎಫ್ ಖಾತೆಯನ್ನು ಸಮಯಕ್ಕೆ ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಮುಖ್ಯ. ಹಾಗೆಯೇ ಯುಎಎನ್ ಸಹ ಆಧಾರ್ ಪರಿಶೀಲಿಸಬೇಕು. ಹಾಗಾದ್ರೆ ಇಪಿಎಫ್‌ಒ ನೀಡಿರುವ ಹೊಸ ಆದೇಶ ಏನು? ಅದನ್ನು ಅನುರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಪಿಎಫ್‌ಒ ಹೊಸ ಆದೇಶ ಏನು?
ಸಾಮಾಜಿಕ ಭದ್ರತಾ ಸಂಹಿತೆ 2020 ರ ಸೆಕ್ಷನ್ 142 ರ ಅಡಿಯಲ್ಲಿ ಇಪಿಎಫ್‌ಒ ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಜೂನ್ 1 ರ ನಂತರ, ಯಾವುದೇ ಖಾತೆಯನ್ನು ಆಧಾರ್ ಅಥವಾ ಯುಎಎನ್‌ನೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ ಆಧಾರ್ ಪರಿಶೀಲಿಸದಿದ್ದರೆ, ಅದರ ಇಸಿಆರ್-ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ತುಂಬಬಾರದು ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಪಿಎಫ್ ಖಾತೆದಾರರಿಗೆ ಉದ್ಯೋಗದಾತರ ಕೊಡುಗೆಯನ್ನು ಸಹ ನಿಲ್ಲಿಸಬಹುದು.

ಎಲ್ಲಾ ಉದ್ಯೋಗದಾತರಿಗೆ ಇಪಿಎಫ್‌ಒ ಅಧಿಸೂಚನೆ ಹೊರಡಿಸಿದ್ದು, 2021 ರ ಜೂನ್ 1 ರಿಂದ ಸದಸ್ಯರ ಖಾತೆಯನ್ನು ಆಧಾರ್‌ನೊಂದಿಗೆ ಸಂಪರ್ಕಿಸದಿದ್ದರೆ, ಇಸಿಆರ್ ಸಲ್ಲಿಸಲು ಅನುಮತಿಸುವುದಿಲ್ಲ ಎಂದು ಸುತ್ತೊಲೆಯಲ್ಲಿ ಹೇಳಿದೆ. ಅಲ್ಲದೆ, ಪಿಎಫ್ ಖಾತೆದಾರರ ಖಾತೆಗಳು ಆಧಾರ್‌ನೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ, ಅವರು ಇಪಿಎಫ್‌ಒ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಪಿಎಫ್ ಅನ್ನು ಆಧಾರ್‌ನೊಂದಿಗೆ ಜೋಡಿಸುವ ಕ್ರಮಗಳು ಏನು?
(Kannada Copy of Gizbot Kannada)
30-01-26 05:00 pm
Bangalore Correspondent
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 03:43 pm
Mangalore Correspondent
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm