ಬ್ರೇಕಿಂಗ್ ನ್ಯೂಸ್
18-05-21 02:17 pm GIZBOT : Mantesh ಡಿಜಿಟಲ್ ಟೆಕ್
ಭಾರತದ ಮುಂಚೂಣಿ 4ಜಿ ಮತ್ತು ಮೊಬೈಲ್ ಬ್ರಾಡ್‌ಬ್ಯಾಂಡ್ ಡಿಜಿಟಲ್ ಸೇವಾ ಪೂರೈಕೆದಾರ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. (ಜಿಯೋ), ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಅತಿ ದೊಡ್ಡ ಅಂತಾರಾಷ್ಟ್ರೀಯ ಜಲಾಂತರ್ಗಾಮಿ (ಸಬ್‌ಮೆರಿನ್) ಕೇಬಲ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ವಿವಿಧ ಪ್ರಮುಖ ಜಾಗತಿಕ ಪಾಲುದಾರರು ಮತ್ತು ವಿಶ್ವದರ್ಜೆಯ ಜಲಾಂತರ್ಗಾಮಿ ಕೇಬಲ್ ಪೂರೈಕೆದಾರ ಸಬ್‌ಕಾಮ್ ಸಹಯೋಗದೊಂದಿಗೆ ಜಿಯೋ ಪ್ರಸ್ತುತ ಪ್ರದೇಶದೆಲ್ಲೆಡೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಡೇಟಾ ಬೇಡಿಕೆಗೆ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಮುಂದಿನ ತಲೆಮಾರಿನ ಎರಡು ಕೇಬಲ್ ವ್ಯವಸ್ಥೆಗಳನ್ನು ಅಳವಡಿಸುತ್ತಿದೆ.
ಇಂಡಿಯಾ-ಏಷ್ಯಾ-ಎಕ್ಸ್‌ಪ್ರೆಸ್ (ಐಎಎಕ್ಸ್) ವ್ಯವಸ್ಥೆಯು, ಭಾರತವನ್ನು ಪೂರ್ವಾಭಿಮುಖವಾಗಿ ಸಿಂಗಪುರ ಹಾಗೂ ಅದರಾಚೆಗೂ ಸಂಪರ್ಕಿಸುತ್ತದೆ. ಇಂಡಿಯಾ-ಯುರೋಪ್-ಎಕ್ಸ್‌ಪ್ರೆಸ್ (ಐಇಎಕ್ಸ್) ವ್ಯವಸ್ಥೆಯು, ಪಶ್ಚಿಮಾಭಿಮುಖವಾಗಿ ಭಾರತವನ್ನು ಮಧ್ಯಪ್ರಾಚ್ಯ ಹಾಗೂ ಯುರೋಪ್ ಜತೆ ಸಂಪರ್ಕಿಸಲಿದೆ. ಈ ವ್ಯವಸ್ಥೆ ತಡೆರಹಿತ ಅಂತರ್ ಸಂಪರ್ಕ ಹೊಂದಿರಲಿದೆ. ಜತೆಗೆ ಸೇವೆಯನ್ನು ಜಾಗತಿಕವಾಗಿ ವಿಸ್ತರಿಸಲು ಜಗತ್ತಿನ ಪ್ರಮುಖ ಅಂತರ್ ವಿನಿಮಯ ಬಿಂದುಗಳು ಮತ್ತು ವಿಚಾರ ಕೇಂದ್ರಗಳನ್ನು ಸಂಪರ್ಕಿಸಲಿದೆ. ಭಾರತದ ಒಳಗೆ-ಹೊರಗೆ ಮಾಹಿತಿ ಹಾಗೂ ಕ್ಲೌಡ್ ಸೇವೆಗಳಿಗೆ ಗ್ರಾಹಕ ಮತ್ತು ಉದ್ಯಮ ಬಳಕೆದಾರರ ಸಾಮರ್ಥ್ಯವನ್ನು ಐಎಎಕ್ಸ್ ಮತ್ತು ಐಇಎಕ್ಸ್ ವೃದ್ಧಿಸಲಿವೆ.

ಫೈಬರ್ ಆಪ್ಟಿಕ್ ಸಬ್‌ಮೆರಿನ್ ಟೆಲಿಕಮ್ಯುನಿಕೇಷನ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ನೆಟ್‌ವರ್ಕ್ ನಕ್ಷೆಯಲ್ಲಿ ಭಾರತವನ್ನು ಕೇಂದ್ರವನ್ನಾಗಿಸಿವೆ. 2016ರಲ್ಲಿ ಜಿಯೋ ಸೇವೆಗಳು ಆರಂಭವಾದಾಗಿನಿಂದ ಭಾರತಕ್ಕೆ ಹೆಚ್ಚಿದ ಪ್ರಾಮುಖ್ಯ, ಬೆರಗು ಮೂಡಿಸುವ ಬೆಳವಣಿಗೆ ಮತ್ತು ಡೇಟಾ ಬಳಕೆಯಲ್ಲಿನ ಬೃಹತ್ ಬದಲಾವಣೆಯನ್ನು ಇದು ಗುರುತಿಸಿದೆ. ಈ ಅಧಿಕ ಸಾಮರ್ಥ್ಯದ ಮತ್ತು ಅಧಿಕ ವೇಗದ ವ್ಯವಸ್ಥೆಗಳು 16,000 ಕಿಮೀಗೂ ಅಧಿಕ ದೂರದವರೆಗೆ 200 ಟಿಬಿಪಿಎಸ್‌ಗಿಂತಲೂ ಹೆಚ್ಚು ಸಾಮರ್ಥ್ಯವನ್ನು ಒದಗಿಸಲಿವೆ.

'ಡಿಜಿಟಲ್ ಸೇವೆಗಳು ಮತ್ತು ಡೇಟಾ ಬಳಕೆಯಲ್ಲಿನ ಭಾರತದ ಸ್ಫೋಟಕ ಪ್ರಗತಿಯಲ್ಲಿ ಜಿಯೋ ಮುಂಚೂಣಿಯಲ್ಲಿದೆ. ವಿಡಿಯೋ ಸ್ಟ್ರೀಮಿಂಗ್, ರಿಮೋಟ್ ವರ್ಕ್‌ಫೋರ್ಸ್, 5ಜಿ, ಐಒಟಿ ಹಾಗೂ ಮುಂತಾದ ಬೇಡಿಕೆಗಳನ್ನು ಈಡೇರಿಸಲು, ತನ್ನ ಪ್ರಪ್ರಥಮ ಭಾರತ-ಕೇಂದ್ರಿತ ಐಎಎಕ್ಸ್ ಮತ್ತು ಐಇಎಕ್ಸ್ ಸಬ್‌ಸೀ ವ್ಯವಸ್ಥೆಯನ್ನು ನಿರ್ಮಿಸಲು ಮುಂದಾಳತ್ವ ತೆಗೆದುಕೊಳ್ಳುತ್ತಿದೆ' ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಶ್ರೀ ಮ್ಯಾಥ್ಯೂ ಊಮ್ಮೆನ್ ಹೇಳಿದ್ದಾರೆ. 'ಈಗಿನ ಜಾಗತಿಕ ಸಾಂಕ್ರಾಮಿಕದ ನೆರಳಿನಲ್ಲಿ ಈ ಮಹತ್ವದ ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಸವಾಲಾಗಿದೆ. ಆದರೆ, ಪ್ರಸ್ತುತದ ಸಾಂಕ್ರಾಮಿಕವು ಡಿಜಿಟಲ್ ಪರಿವರ್ತನೆಗೆ ವೇಗವರ್ಧಕವಾಗಿ ಪರಿಣಮಿಸಿದೆ. ಉದ್ಯಮಗಳು ಹಾಗೂ ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸಲು ಅಧಿಕ ದಕ್ಷತೆಯ ಜಾಗತಿಕ ಸಂಪರ್ಕ ಅಗತ್ಯವಾಗಿದೆ' ಎಂದು ಅವರು ತಿಳಿಸಿದ್ದಾರೆ.
(Kannada Copy of Gizbot Kannada)
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm