ಬ್ರೇಕಿಂಗ್ ನ್ಯೂಸ್
03-02-21 05:46 pm Source: GIZBOT Manthesh ಡಿಜಿಟಲ್ ಟೆಕ್
ಪ್ರಸ್ತುತ ಚಾಟಿಂಗ್ ಆಪ್ಸ್ ಜೊತೆಗೆ ಡೇಟಿಂಗ್ ಅಪ್ಲಿಕೇಶನ್‌ಗಳು ಭಾರೀ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಬಳಕೆದಾರರು ತಮ್ಮ ಭಾವನೆ ಮತ್ತು ಅಭಿರುಚಿಗಳಿಗೆ ಸರಿ ಹೊಂದುವಂತಹ ಆಪ್ತರನ್ನು ಹುಡಕಲು ಡೇಟಿಂಗ್ ಆಪ್‌ನತ್ತ ಹೊರಳುತ್ತಿದ್ದಾರೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಡೇಟಿಂಗ್ ಆಪ್‌ಗಳು ಲಭ್ಯವಿದ್ದು, ಯುವಜನತೆ ಡೇಟಿಂಗ್ ಆಪ್‌ಗಳತ್ತ ಹೆಚ್ಚು ವಾಲುತ್ತಿದೆ. ಇದರಿಂದ ಡೇಟಿಂಗ್ ಆಪ್‌ಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಭಾರೀ ಜನಪ್ರಿಯಗೊಳ್ಳುತ್ತಿವೆ.
ಹೌದು, ಸಮಾನ ವಯಸ್ಸು ಮತ್ತು ಒಂದೇ ಅಭಿರುಚಿಗಳು ಪರಸ್ಪರ ನಡುವೆ ಆಪ್ತತೆಯನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿ ಡೇಟಿಂಗ್ ಆಪ್‌ಗಳಲ್ಲಿ ಅಭಿರುಚಿಗಳನ್ನು ನಮೂದಿಸುವ ಮೂಲಕ ನಿಮ್ಮ ಪ್ರೊಫೇಲ್ ರಚಿಸಿಕೊಳ್ಳವುದಕ್ಕೆ ಅವಕಾಶ ನೀಡಲಾಗಿರುವುದು ಆ ಆಧಾರದ ಮೇಲೆ ನಿಮಗೆ ಸರಿಹೊಂದುವ ಆಪ್ತರ ಆಯ್ಕೆಗಳನ್ನು ಆಪ್‌ನಲ್ಲಿ ಒದಗಿಸಲಾಗುತ್ತದೆ.

ಟಿಂಡರ್ ಅಪ್ಲಿಕೇಶನ್ (Tinder)
ಭಾರತದಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಈ ಟಿಂಡರ್ ಡೇಟಿಂಗ್ ಆಪ್ ಉಚಿತವಾಗಿದ್ದು, ನಿಮ್ಮ ಲೋಕೆಶನ್ ಆಧಾರದ ಮೇಲೆ ಸುತ್ತಮುತ್ತಲಿನ ಇತರೆ ಫ್ರೊಫೇಲ್‌ಗಳ ಆಯ್ಕೆ ಬರುತ್ತವೆ. ಎಡಕ್ಕೆ ಸರಿಸುತ್ತಾ ಮುಂದಿನ ಪ್ರೋಫೇಲ್‌ಗಳನ್ನು ನೋಡಬಹುದು. ಬಳಕೆದಾರರು ಒಂದು ದಿನಕ್ಕೆ ನಿಯಮಿತ ಪ್ರೋಫೇಲ್‌ಗಳನ್ನು ಮಾತ್ರ ನೋಡಬಹುದಾಗಿದ್ದು, ಹೆಚ್ಚಿನ ಪ್ರೋಫೇಲ್ ನೋಡಲು ಇಚ್ಚಿಸಿದರೇ ದರ ನೀಡಬೇಕಾಗುತ್ತದೆ. ಓಕೆ ಆದ ಪ್ರೋಫೇಲ್ ಬಳಕೆದಾರರೊಂದಿಗೆ ಚಾಟ್ ಮಾಡಲು ಅನುಮತಿ ಸಿಗುತ್ತದೆ. ಇನ್ನೂ ಈ ಆಪ್‌ಗೆ ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಲಾಗ್‌ಇನ್ ಆಗಬಹುದು ಅಥವಾ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬಹುದು.

ಟ್ರೂಲೀ ಮ್ಯಾಡ್ಲೀ ಅಪ್ಲಿಕೇಶನ್ (TrulyMadly)
ಟ್ರೂಲೀ ಮ್ಯಾಡ್ಲೀ ಉತ್ತಮ ಡೇಟಿಂಗ್ ಆಪ್ ಆಗಿದ್ದು, ಬಳಕೆದಾರರು ನೀಡಿರುವ ಪ್ರೋಫೇಲ್‌ಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಪ್ರೋಫೇಲ್‌ಗಳ ಖಚಿತತೆಗಾಗಿ ಗುರುತಿನ ಪುರಾವೆಯನ್ನು ಕೇಳಲಾಗುತ್ತದೆ. ನಿಮ್ಮ ಪ್ರೋಫೇಲ್ ಆಧಾರದ ಮೇಲೆ ನಿಮಗೆ ಸರಿಹೊಂದುವಂತಹ ಪ್ರೊಫೇಲ್‌ಗಳನ್ನು ನೀಡುತ್ತಾರೆ, ನಿಮ್ಮ ಅಭಿರುಚುಗೆ ಮ್ಯಾಚ್ ಆದ ಬಳಕೆದಾರರೊಂದಿಗೆ ಪ್ರತ್ಯಕವಾಗಿ ಸಂದೇಶ ಮಾಡಲು ಅನುಮತಿ ಪಡೆಯುತ್ತಿರಿ. ನಿಮ್ಮ ಪ್ರೋಫೇಲ್ ಸುರಕ್ಷತೆ ಇದ್ದು, ಯಾರು ಡೌನಲೋಡ್ ಮಾಡಿಕೊಳ್ಳಲು ಅವಕಾಶ ನೀಡಿಲ್ಲ. ಅನುಚಿತ ವರ್ತನೆಗೆ ತೋರಿಸಬಾರದೆಂದು ಬಳಕೆದಾರರ ಮೇಲೆ ನಿಗಾ ಇಡಲಾಗಿರುತ್ತದೆ.

ಹ್ಯಾಪನ್ ಅಪ್ಲಿಕೇಶನ್
ಈ ಹ್ಯಾಪನ್ ಸಹ ಲೋಕೆಷನ್ ಆಧಾರಿತ ಡೇಟಿಂಗ್ ಆಪ್ ಆಗಿದ್ದು, ಇದರ ಫ್ರೋಫೇಲ್ ಮ್ಯಾಚಿಂಗ್ ಸ್ವಲ್ಪ ಭಿನ್ನವಾಗಿದೆ. ನಿಮ್ಮ ನಿಜ ಜೀವನದಲ್ಲಿ ಕಂಡಿರುವ ವ್ಯಕ್ತಿಗಳು ಹ್ಯಾಪನ್ ಆಪ್‌ನಲ್ಲಿ ಪ್ರೋಫೇಲ್ ಹೊಂದಿದ್ದಾರಾ ಎಂದು ತಿಳಿಯಬಹುದು, ಹೊಂದಿದ್ದರೆ ನೀವು ಅವರಿಗೆ ಹ್ಯಾಪನ್ ಆಪ್ ಮೂಲಕ ರೀಕ್ವೆಸ್ಟ್ ಕಳುಹಿಸಬಹುದು ನಿಮ್ಮ ರೀಕ್ವೆಸ್ಟ್ ಅವರು ಸ್ವೀಕರಿಸಿದರೇ ನೀವು ಅವರೊಂದಿಗೆ ಮಾತಾಡುವ ಅವಕಾಶ ಇದೆ.
This News Article is a Copy of GIZBOT
29-01-26 11:03 pm
Bangalore Correspondent
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ...
29-01-26 01:16 pm
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm