ಬ್ರೇಕಿಂಗ್ ನ್ಯೂಸ್
27-01-21 04:20 pm Source: GIZBOT Mutthuraju H M ಡಿಜಿಟಲ್ ಟೆಕ್
ವಾಟ್ಸಾಪ್ ಹೊಸ ಸೇವಾ ನಿಯಮ ವಿವಾದದ ನಂತರ ಹೆಚ್ಚಿನ ಜನರು ಇತರೆ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಕಡೆಗೆ ಒಲವು ತೋರುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಜನರು ಸಿಗ್ನಲ್, ಟೆಲಿಗ್ರಾಮ್ ಅಪ್ಲಿಕೇಶನ್‌ಗಳನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಟೆಲಿಗ್ರಾಮ್ ಮತ್ತು ಸಿಗ್ನಲ್ ಎರಡೂ ಅಪ್ಲಿಕೇಶನ್‌ಗಳು ವಾಟ್ಸಾಪ್ ಗಿಂತ ಉತ್ತಮ ಗೌಪ್ಯತೆ ಫೀಚರ್ಸ್‌ಗಳನ್ನು ಹೊಂದಿವೆ. ಈ ಎರಡೂ ಅಪ್ಲಿಕೇಶನ್‌ಗಳು ಫೇಸ್‌ಬುಕ್ ಒಡೆತನದ ವಾಟ್ಸಾಪ್‌ಗೆಗೆ ಹೋಲಿಸಿದರೆ ಕಡಿಮೆ ಬಳಕೆದಾರ ಡೇಟಾವನ್ನು ಸಂಗ್ರಹಿಸುತ್ತವೆ.
ಹೌದು, ವಾಟ್ಸಾಪ್ ಹೊಸ ಗೌಪ್ಯತೆ ನೀತಿ ಜನರಲ್ಲಿ ಅಸಮಾಧಾನ ಉಂಟುಮಾಡಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ವಾಟ್ಸಾಪ್ ತ್ಯಜಿಸಿ ಟೆಲಿಗ್ರಾಮ್ ಅಪ್ಲಿಕೇಶನ್ ಕಡೆಗೆ ಮುಖ ಮಾಡಿದ್ದಾರೆ. ವಾಟ್ಸಾಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿತ್ತು. ಅದೇ ರೀತಿ ಟೆಲಿಗ್ರಾಮ್ ನಲ್ಲೂ ಕೂಡ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಬಳಸಬಹುದು.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಟೆಲಿಗ್ರಾಮ್‌ನಲ್ಲಿ ಡೀಫಾಲ್ಟ್ ಫೀಚರ್ಸ್‌ಅಲ್ಲ. ಟೆಲಿಗ್ರಾಮ್‌ನಲ್ಲಿ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳು ಸಾಮಾನ್ಯ ಚಾಟ್‌ಗಳಂತೆ ಇರಲಿವೆ. ನೀವು ಯಾವ ಚಾಟ್‌ನಲ್ಲಿದ್ದೀರಿ ಎಂಬುದನ್ನು ಖಚಿತಪಡಿಸಲು, ನಿಮ್ಮ ಚಾಟ್ ಪಾಲುದಾರರ ಹೆಸರು ಅಥವಾ ಫೋನ್ ಸಂಖ್ಯೆಯ ಪಕ್ಕದಲ್ಲಿ ಪ್ಯಾಡ್‌ಲಾಕ್ ಐಕಾನ್ ನೋಡಿ. ಅದು ಇದ್ದರೆ, ಚಾಟ್ ರಹಸ್ಯವಾಗಿರುತ್ತದೆ. ಇಲ್ಲದಿದ್ದರೆ ಅದು ಸಾಮಾನ್ಯ ಚಾಟ್ ಆಗಿರಲಿದೆ. ಇದಲ್ಲದೆ ಟೆಲಿಗ್ರಾಮ್‌ನ ಸಿಕ್ರೆಟ್ ಚಾಟ್ ಫೀಚರ್ಸ್ ಐಒಎಸ್, ಆಂಡ್ರಾಯ್ಡ್ ಮತ್ತು ಮ್ಯಾಕೋಸ್ ಅಪ್ಲಿಕೇಶನ್‌ಗಳಲ್ಲಿ ಮಾತ್ರ ಲಭ್ಯವಿದೆ. ವೆಬ್ ಆವೃತ್ತಿ ಮತ್ತು ವಿಂಡೋಸ್ ಅಪ್ಲಿಕೇಶನ್ ಸಿಕ್ರೆಟ್ ಚಾಟ್‌ಗಳನ್ನು ಬೆಂಬಲಿಸುವುದಿಲ್ಲ. ಹಾಗಾದ್ರೆ ಟೆಲಿಗ್ರಾಮ್‌ನಲ್ಲಿ ಸಿಕ್ರೆಟ್ ಚಾಟ್ ಸಕ್ರಿಯೊಳಿಸುವುದು ಹೇಗೆ ಅನ್ನೊದನ್ನ ಮುಂದಿನ ಹಂತಗಳಲ್ಲಿ ತಿಳಿಯಿರಿ.

ಟೆಲಿಗ್ರಾಮ್‌ನಲ್ಲಿ ಸಿಕ್ರೆಟ್ ಚಾಟ್ ಅನ್ನು ಕ್ರಿಯೆಟ್ ಮಾಡುವುದು ಹೇಗೆ?
ಟೆಲಿಗ್ರಾಮ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿದೆ. ನೀವು ಅದನ್ನು ಸಕ್ರಿಯಗೊಳಿಸಬೇಕಾಗಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆನ್ ಮಾಡಿದ ಟೆಲಿಗ್ರಾಮ್ ಕರೆಗಳನ್ನು ಸೀಕ್ರೆಟ್ ಚಾಟ್ಸ್ ಎಂದು ಕರೆಯಲಾಗುತ್ತದೆ. ಇದಕ್ಕಾಗಿ ನೀವು ಈ ಹಂತಗಳನ್ನ ಅನುಸರಿಸಬೇಕಾಗುತ್ತದೆ.
ಹಂತ:1 ಸಿಕ್ರೆಟ್ ಚಾಟ್ ಕ್ರಿಯೆಟ್ ಮಾಡಲು ನೀವು ಚಾಟ್ ಪ್ರಾರಂಭಿಸಲು ಬಯಸುವ ವ್ಯಕ್ತಿಯ ಪ್ರೊಫೈಲ್ ತೆರೆಯಿರಿ.
ಹಂತ:2 ವ್ಯಕ್ತಿಯ ಪ್ರೊಫೈಲ್ ಫೋಟೋದ ಕೆಳಗೆ ಮೂರು ಚುಕ್ಕೆಗಳನ್ನು ಹೊಂದಿರುವ ಐಕಾನ್ ಕ್ಲಿಕ್ ಮಾಡಿ.
ಹಂತ:3 "ಸ್ಟಾರ್ಟ್ ಸೀಕ್ರೆಟ್ ಚಾಟ್" ಆಯ್ಕೆಮಾಡಿ.

ಹಂತ:4 ಇದೀಗ ಸಂದೇಶಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ವಯವಾಗುವ ಚಾಟ್ ಅನ್ನು ಇದು ತೆರೆಯುತ್ತದೆ, ಪ್ರಾರಂಭದಲ್ಲಿ ಚಾಟ್ ವಿಂಡೋದಲ್ಲಿ ಗೋಚರಿಸುವ ಅಧಿಸೂಚನೆಯನ್ನು ನೀವು ನೋಡುತ್ತೀರಿ.
ಹಂತ:5 ನಂತರ ಮೆಸೇಜ್ ಇನ್ಪುಟ್ ಬಾಕ್ಸ್‌ನಲ್ಲಿರುವ ಗಡಿಯಾರ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಅಥವಾ ಕ್ಲಿಕ್ ಮಾಡುವ ಮೂಲಕ ಈ ಸಿಕ್ರೆಟ್ ಚಾಟ್‌ನಲ್ಲಿನ ಮೆಸೇಜ್‌ಗಳನ್ನು ಅಳಿಸುವ ಸಮಯವನ್ನು ಸಹ ನೀವು ಸೆಟ್ ಮಾಡಬಹುದು.
ಹಂತ:6 ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸುವುದರಿಂದ ನಿಮ್ಮ ಚಾಟ್ ಪಾಲುದಾರ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದನ್ನು ತಡೆಯುವುದಿಲ್ಲ, ಆದರೆ ಅವರು ಹಾಗೆ ಮಾಡಿದರೆ, ಚಾಟ್‌ನಲ್ಲಿ ಇದರ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.
This News Article is a Copy of GIZBOT
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm