ಬ್ರೇಕಿಂಗ್ ನ್ಯೂಸ್
26-01-21 05:12 pm Source: GIZBOT Mutthuraju H M ಡಿಜಿಟಲ್ ಟೆಕ್
ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಟಿಕ್‌ಟಾಕ್ ಈಗಾಗಲೇ ಭಾರತದಲ್ಲಿ ಬ್ಯಾನ್ ಆಗಿದೆ. ಇದರ ಜೊತೆಗೆ ಚೀನಾ ಮೂಲದ ಅನೇಕ ಆಪ್‌ಗಳನ್ನ ಬ್ಯಾನ್ ಮಾಡಲಾಗಿದೆ. ಇದರಲ್ಲಿ ಟಿಕ್‌ಟಾಕ್, ವೀಚಾಟ್ ಮತ್ತು ಚೀನಾದ ಕಂಪನಿಗಳ ಒಟ್ಟು 59 ಆಪ್‌ಗಳನ್ನು ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಶಾಶ್ವತವಾಗಿ ನಿಷೇಧಿಸಿದೆ ಎಂದು ವರದಿಗಳು ತಿಳಿಸಿವೆ. ಬ್ಯಾನ್ ಆಗಿರುವ ಟಿಕ್‌ಟಾಕ್ ಮತ್ತೆ ಬಳಕೆಗೆ ಲಭ್ಯವಾಬಹುದು ಎನ್ನುವ ಭರವಸೆ ಹೊಂದಿದ್ದ ಟಿಕ್‌ಟಾಕ್ ಪ್ರಿಯರು ಇನ್ಮುಂದೆ ಟಿಕ್‌ಟಾಕ್ ಅನ್ನೇ ಮರೆತುಬಿಡುವುದು ಉತ್ತಮವಾಗಿದೆ.
ಹೌದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಭಾರತದಲ್ಲಿ ಬ್ಯಾನ್ ಆಗಿರುವ ಚೀನೀ ಅಪ್ಲಿಕೇಶನ್‌ಗಳು ಮತ್ತೆ ಭಾರತದಲ್ಲಿ ಪುನರಾಗಮನ ಮಾಡುವುದು ಅಸಾಧ್ಯ ಎನ್ನಲಾಗ್ತಿದೆ. ಈ ಅಪ್ಲಿಕೇಶನ್‌ಗಳಿಂದ ಭಾರತದ ರಕ್ಷಣೆ, ರಾಜ್ಯದ ಭದ್ರತೆಗೆ ದಕ್ಕೆ ಆಗಲಿದೆ ಎಂದು ಬ್ಯಾನ್ ಮಾಡಲಾಗಿದೆ. ಇದೇ ಕಾರಣಕ್ಕೆ ಈ ಆಪ್‌ಗಳನ್ನು ಭಾರತದಲ್ಲಿ ಶಾಶ್ವತವಾಗಿ ಬ್ಯಾನ್ ಮಾಡಲಾಗಿದೆ. ಅದರಲ್ಲೂ ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳು ಭಾರತಕ್ಕೆ ಹಿಂತಿರುಗುವುದಿಲ್ಲ ಎಂದು ಹೇಳಲಾಗ್ತಿದೆ.
ಭಾರತ ಸರ್ಕಾರ ಈಗಾಗಲೇ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ದೃಷ್ಟಿಯಿಂದ ಚೀನಾ ಮೂಲದ 200 ಕ್ಕೂ ಹೆಚ್ಚು ಆಪ್‌ಗಳನ್ನು ನಿಷೇಧಿಸಿದೆ. ಈ ಪೈಕಿ ಕನಿಷ್ಠ 59 ಅಪ್ಲಿಕೇಶನ್‌ಗಳನ್ನು ದೇಶದಲ್ಲಿ ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ಹೇಳಲಾಗಿದೆ. ಅದರಲ್ಲೂ ಲೈವ್‌ಮಿಂಟ್‌ನ ವರದಿಯ ಪ್ರಕಾರ, ಟಿಕ್‌ಟಾಕ್ ಭಾರತದಲ್ಲಿ ಮತ್ತೆ ಎಂದಿಗೂ ಕೂಡ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಈ ಅಪ್ಲಿಕೇಶನ್‌ಗಳು ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಮರ್ಪಕವಾದ ಉತ್ತರವನ್ನು ನೀಡಿಲ್ಲ ಎನ್ನಲಾಗಿದೆ.
ಇನ್ನು ಈ ಆಪ್ ತಯಾರಕರು ಭಾರತ ಸರ್ಕಾರಕ್ಕೆ ನಿಡಿರುವ ಉತ್ತರ ತಯಾರಕರು ಸಲ್ಲಿಸಿದ ಪ್ರತಿಕ್ರಿಯೆಗಳಿಂದ ಭಾರತ ಸರ್ಕಾರವು ತೃಪ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ, ಟಿಕ್‌ಟಾಕ್ ಸೇರಿದಂತೆ ಕೆಲವು ಅಪ್ಲಿಕೇಶನ್‌ಗಳು ದೇಶದಲ್ಲಿ ಶಾಶ್ವತ ನಿಷೇಧವನ್ನು ಪಡೆಯುವ ಸಾಧ್ಯತೆಯಿದೆ. ಈಗಿನಂತೆ, ಮೊದಲ ಹಂತದಿಂದ ನಿಷೇಧಿಸಲ್ಪಟ್ಟ ಎಲ್ಲಾ 59 ಅಪ್ಲಿಕೇಶನ್‌ಗಳಿಗೆ ಶಾಶ್ವತ ನಿಷೇಧ ಸಿಗುತ್ತದೆಯೇ ಅಥವಾ ಕಳೆದ ಕೆಲವು ತಿಂಗಳಲ್ಲಿ ದೇಶದಿಂದ ನಿಷೇಧಿಸಲ್ಪಟ್ಟ 200 ಪ್ಲಸ್ ಅಪ್ಲಿಕೇಶನ್‌ಗಳನ್ನು ಶಾಶ್ವತವಾಗಿ ನಿಷೇದ ಮಾಡಲಾಗುತ್ತದೆಯೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಇದಲ್ಲದೆ ಭಾರತದಲ್ಲಿ PUBG ಮೊಬೈಲ್ ಗೇಮ್ ಮತ್ತೆ ಶುರುವಾಗಲಿದೆ ಎಂಬ ಭರವಸೆ ಇತ್ತು. ಆದರೆ ಆರ್‌ಟಿಐನಲ್ಲಿ ಬಹಿರಂಗವಾದ ಮಾಹಿತಿ ಪ್ರಕಾರ ಪಬ್‌ಜಿ ಆಪ್ ಮತ್ತೆ ಶುರುವಾಗುವುದಕ್ಕೆ ಭಾರತ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ ಎನ್ನಲಾಗಿದೆ. ಈ ಮೂಲಕ ಭಾರತದಲ್ಲಿ ಚೀನಾ ಮೂಲದ ಅಪ್ಲಿಕೇಶನ್‌ಗಳು ಮತ್ತೆ ಪ್ರಾರಂಭವಾಗುವುದಿಲ್ಲ ಎನ್ನಲಾಗಿದೆ.
This News Article is a Copy of GIZBOT
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am