ಬ್ರೇಕಿಂಗ್ ನ್ಯೂಸ್
15-01-21 04:17 pm Source: GIZBOT Mutthuraju H M ಡಿಜಿಟಲ್ ಟೆಕ್
ಪ್ರತಿ ವರ್ಷದಂತೆ ಈ ವರ್ಷ ಕೂಡ CES(ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ)2021 ರಲ್ಲಿ ಹೊಸ ಮಾದರಿಯ ಸ್ಮಾರ್ಟ್ ಗ್ಯಾಡ್ಜೆಟ್ಸ್‌ಗಳು ಪ್ರದರ್ಶನ ಗೊಂಡಿವೆ. ಗ್ರಾಹಕರ ನಿರೀಕ್ಷೆಯನ್ನು ಮೀರಿದ ಹಲವು ಗ್ಯಾಡ್ಜೆಟ್ಸ್‌ಗಳು ಈ ಬಾರಿಯ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಬಿಡುಗಡೆ ಆಗಿವೆ. ಅಲ್ಲದೆ ಹಲವು ಅಚ್ಚರಿ ಡಿವೈಸ್‌ಗಳು ಕೂಡ ಈ ಶೋ ನಲ್ಲಿ ಗ್ರಾಹಕರ ಮನಗೆದ್ದಿವೆ. ಇದಲ್ಲದೆ ಹಲವು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಕೂಡ ಅನಾವರಣಗೊಂಡಿವೆ.
ಹೌದು, ಟೆಕ್ ವಲಯದ ಪ್ರಮುಖ ಈವೆಂಟ್‌ಗಳಲ್ಲಿ ಒಂದಾದ CES 2021ಗೆ ನೆನ್ನೆ ತೆರೆ ಬಿದ್ದಿದೆ. ಇನ್ನು ಈ ವರ್ಷದ ಶೋ ಎಂದಿನಂತೆ ಸಾಕಷ್ಟು ಬಿನ್ನ ಮಾದರಿಯ ಸ್ಮಾರ್ಟ್ ಡಿವೈಸ್ ಗಳು ಪ್ರದರ್ಶನಗೊಂಡಿವೆ. ಇನ್ನು ಈ ಭಾರಿಯ ಶೋ ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿವೆ.
TCL 20 5G ಮತ್ತು TCL 20SE
ಈ ಬಾರಿಯ CES 2021 ನಲ್ಲಿ ಬಿಡುಗಡೆ ಆದ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ TCL 20 ಸರಣಿ ಪ್ರಮುಖವಾಗಿದೆ. ಟಿಸಿಎಲ್ ಸಂಸ್ಥೆ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆ ಆಗಿರುವ TCL 20 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 690 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಆದರೆ TCL 20 SE ಸ್ನಾಪ್‌ಡ್ರಾಗನ್ 460 SoC ಪ್ರೊಸೆಸರ್ ಅನ್ನು ಹೊಂದಿದೆ. ಇದಲ್ಲದೆ ಟಿಸಿಎಲ್ 20 5G ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆದರೆ ಟಿಸಿಎಲ್ 20SE ಸ್ಮಾರ್ಟ್‌ಫೋನ್ 6.82-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. TCL 20 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದರೆ, TCL 20SE ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
LG ರೋಲೆಬಲ್
ಇನ್ನು CES 2021 ನಲ್ಲಿ ಬಿಡುಗಡೆ ಆದ ಪ್ರಮುಖ ಗ್ಯಾಡ್ಜೆಟ್ಸ್‌ಗಳಲ್ಲಿ ಎಲ್ಜಿಯ ರೋಲೆಬಲ್ ಕೂಡ ಒಂದಾಗಿದೆ. ಹೆಸರೇ ಸೂಚಿಸುವಂತೆ ಈ ಡಿವೈಸ್ ಅನ್ನು ಮಡಿಸಬಹುದಾಗಿದೆ. ಸದ್ಯ ಸಿಇಎಸ್‌ನಲ್ಲಿ ಎಲ್‌ಜಿ ರೋಲೆಬಲ್ ನ ಅತ್ಯುತ್ತಮ ನೋಟವನ್ನು ನೀಡಿದೆ. ಅಲ್ಲದೆ ಅದರ ಅಧಿಕೃತ ಹೆಸರನ್ನು ದೃಡಪಡಿಸಿದೆ. ಇನ್ನು ಈ ಎಲ್‌ಜಿ ರೋಲೆಬಲ್ ಫೋನ್ ಅನ್ನು ಟ್ಯಾಬ್ಲೆಟ್ ಮಾದರಿಯಲ್ಲಿ ಬಳಸಬಹುದಾಗಿದೆ. ಇದು ಮೊಬೈಲ್ ತಂತ್ರಜ್ಞಾನದಲ್ಲಿ ಬಹುನಿರೀಕ್ಷಿತ ಮಾದರಿ ಬದಲಾವಣೆಯನ್ನು ತರಬಹುದೆಂದು ಎಲ್ಜಿ ಸಂಸ್ಥೆ ಹೇಳಿಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿ
ಇನ್ನು ದಕ್ಷಿಣ ಕೋರಿಯಾದ ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆ ತನ್ನ ಗ್ಯಾಲಕ್ಸಿ s21 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು CES 2021 ನಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. ಈ ಎಲ್ಲಾ ಮೂರು ಮಾದರಿಗಳು ಹೊಂದಾಣಿಕೆಯ 120Hz ರಿಫ್ರೆಶ್ ರೇಟ್ ಅನ್ನು ಹೊಂದಿವೆ. ಇನ್ನು ಸರಣಿಯಲ್ಲಿನ ಗ್ಯಾಲಕ್ಸಿ ಎಸ್ 21 ಮತ್ತು ಗ್ಯಾಲಕ್ಸಿ ಎಸ್ 21 + ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಆದರೆ ಗ್ಯಾಲಕ್ಸಿ ಎಸ್ 21 ಅಲ್ಟ್ರಾ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಕ್ಯೋಸೆರಾ ಡುರಾಫೋರ್ಸ್ ಅಲ್ಟ್ರಾ 5G UW
ಕ್ಯೋಸೆರಾ ಡುರಾಫೋರ್ಸ್ ಅಲ್ಟ್ರಾ 5G UW ಗೇಮಿಂಗ್ ಮಾದರಿಯ ಡಿವೈಸ್ ಆಗಿದೆ. ದೀರ್ಘಕಾಲದ ಬಾಳಿಕೆಗೆ ಬೇಡಿಕೆಯಿರುವ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನು ಹೆಸರೇ ಸೂಚಿಸುವಂತೆ, ಈ ಹೊಸ ಕ್ಯೋಸೆರಾ ಡಿವೈಸ್ ವೆರಿಜೋನ್‌ನ mmವೇವ್ (ಯುಡಬ್ಲ್ಯೂಬಿ) ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 5G ಯ ಪ್ರಜ್ವಲಿಸುವ-ವೇಗದ ಆವೃತ್ತಿಯಾಗಿದ್ದು, ಇದು ಗೋಪುರದೊಂದಿಗೆ ನೇರ ರೇಖೆಯ ಮೇಲೆ ಅವಲಂಬಿತವಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವ್ಯಾಪ್ತಿ ಸೀಮಿತವಾಗಿದೆ ಮತ್ತು ಮುಂದಿನ ವರ್ಷಗಳಲ್ಲಿ ಹಾಗೆಯೇ ಇರುತ್ತದೆ.
ವಿವೋ X60 ಪ್ರೊ
ವಿವೋ ಕಂಪನಿ ಈ ಬಾರಿಯ CES 2021 ನಲ್ಲಿ ವಿವೋ X60 ಸ್ಮಾರ್ಟ್‌ಫೋನ್ ಸರಣಿಯನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಇದು ಹೊಸ ವರ್ಷಕ್ಕೂ ಮುನ್ನವೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಇನ್ನು ಈ ಸರಣಿಯು ವಿವೋ X60 ಮತ್ತು ವಿವೋ X60 ಪ್ರೊ ಹೆಸರಿನ ಸ್ಮಾರ್ಟ್‌ಫೋನ್ ವೇರಿಯಂಟ್‌ಗಳನ್ನು ಹೊಂದಿದೆ. ಈ ಎರಡು ಫೋನ್‌ಗಳು Exynos 1080 SoC ಪ್ರೊಸೆಸರ್ ಹಾಗೂ Zeiss ಆಪ್ಟಿಕಲ್ ಹೊಂದಿದ್ದು, ವಿವೋ X60 ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ ವಿವೋ X60 ಪ್ರೊ ಕ್ವಾಡ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದಲ್ಲದೆ ಸೆಕೆಂಡ್-ಜನ್ ಮೈಕ್ರೋ-ಗಿಂಬಾಲ್ ಸೆಟಪ್ ಅನ್ನು ಸಹ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ.
This News Article is a Copy of GIZBOT
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am