ಬ್ರೇಕಿಂಗ್ ನ್ಯೂಸ್
11-01-21 02:31 pm Source: GIZBOT Manthesh ಡಿಜಿಟಲ್ ಟೆಕ್
ಪ್ರಮುಖ ವಿಡಿಯೊ ಕಂಟೆಂಟ್ ತಾಣವಾಗಿರುವ ಯೂಟ್ಯೂಬ್‌ನಲ್ಲಿ ಎಲ್ಲ ವಿಷಯಗಳ ವಿಡಿಯೊ ಮಾಹಿತಿ ಲಭ್ಯ. ವಿಡಿಯೊ ರೂಪದಲ್ಲಿ ಏನೇ ಮಾಹಿತಿ ಬೇಕಿದ್ದರೂ ಥಟ್‌ನೇ ನೆನಪಿಗೆ ಬರುವುದೇ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಅಲ್ಲವೇ. ಆದ್ರೆ ಯೂಟ್ಯೂಬ್‌ನಲ್ಲಿ ಕೆಲವೊಮ್ಮೆ ವಿಡಿಯೊಗಳು ನಿಧಾನಗತಿಯಲ್ಲಿ ಪ್ಲೇ ಆಗುತ್ತಿರುತ್ತವೆ. ಆದರೆ ಸ್ಲೋ ಆಗಿ ಪ್ಲೇ ಆಗುವುದನ್ನು ಸರಿಪಡಿಸಬಹುದಾಗಿದೆ.
ಹೌದು, ಯೂಟ್ಯೂಬ್‌ನಲ್ಲಿ ಕೆಲವು ಬಾರಿ ವಿಡಿಯೊಗಳು ತುಂಬಾ ಸ್ಲೋ ಆಗಿ ಪ್ಲೇ ಆಗುತ್ತಿರುತ್ತವೆ. ನೆಟವರ್ಕ್ ಸರಿಯಿರುತ್ತದೆ, ಡೇಟಾ ಸಹ ಇರುತ್ತದೆ ಅದಾಗ್ಯೂ ವಿಡಿಯೊಗಳು ಸ್ಲೋ ಆಗಿ ಪ್ಲೇ ಆಗುತ್ತಿದ್ದರೇ, ಅಂತಹ ಸಂದರ್ಭದಲ್ಲಿ ಬಳಕೆದಾರರು ಕೆಲವಯ ಅಗತ್ಯ ಕ್ರಮಗಳನ್ನು ಅನುಸರಿಸುವುದು ಉತ್ತಮ.
Cache ಡಾಟಾವನ್ನು ಕ್ಲಿಯರ್ ಮಾಡುವುದು:
1.ಫೋನ್ ನಲ್ಲಿ, ಡೆಸ್ಕ್ ಟಾಪ್ ಅಥವಾ ಟ್ಯಾಬ್ಲೆಟ್ ನಲ್ಲಿ ಕ್ರೋಮ್ ಬ್ರೌಸರ್ ನ್ನು ತೆರೆಯಿರಿ.
2.ಮೂರು ಲೈನಿನ ಆಯ್ಕೆಯನ್ನು ಮೆನುವನ್ನು ಟ್ಯಾಪ್ ಮಾಡಿ.
3.ಫೋನಿನಲ್ಲಿ ಹಿಸ್ಟರಿ > ಕ್ಲಿಯರ್ ಬ್ರೌಸಿಂಗ್ ಡಾಟಾವನ್ನು ಟ್ಯಾಪ್ ಮಾಡಿ. ಡೆಸ್ಕ್ ಟಾಪ್ ನಲ್ಲಾದರೆ ಮೋರ್ ಟೂಲ್ಸ್> ಕ್ಲಿಯಪ್ ಬ್ರೌಸಿಂಗ್ ಡಾಟಾವನ್ನು ಕ್ಲಿಕ್ಕಿಸಿ.
4.ಆಂಡ್ರಾಯ್ಡ್, ಮ್ಯಾಕ್ ಮತ್ತು ಪಿಸಿ ಬಳಕೆದಾರರು ಡಾಟಾ ಡಿಲೀಟ್ ಮಾಡುವುದಕ್ಕೆ ಸಮಯದ ರೇಂಜ್ ನ್ನು ಕೂಡ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಐಫೋನ್ ನಲ್ಲಿ ಇದು ಲಭ್ಯವಿರುವುದಿಲ್ಲ.
5.ಆಪ್ಶನ್ಸ್- ಕುಕ್ಕೀಸ್ ಮತ್ತು ಸೈಟ್ ಡಾಟಾ ಮತ್ತು ಸ್ಯಾಚೇ ಇಮೇಜ್ ಗಳು ಮತ್ತು ಫೈಲ್ ಗಳನ್ನು ಸೆಲೆಕ್ಟ್ ಮಾಡಿ.
6.ಕ್ಲಿಯರ್ ಡಾಟಾವನ್ನು ಟ್ಯಾಪ್ ಮಾಡಿ.
ವಿಡಿಯೊ ಕ್ವಾಲಿಟಿಯನ್ನು ಬದಲಾವಣೆ ಮಾಡುವುದು
1.ಯುಟ್ಯೂಬ್ ಸ್ಕ್ರೀನಿನ ಬಲಭಾಗದ ಕಾರ್ನರ್ ನಲ್ಲಿ ಅಥವಾ ಮೇಲ್ಬಾಗದ ಬಲ ಕಾರ್ನರ್ ನಲ್ಲಿರುವ ಗಿಯರ್ ಐಕಾನ್ ನ್ನು ಟ್ಯಾಪ್ ಮಾಡುವ ಮೂಲಕ ನೀವು ಯುಟ್ಯೂಬ್ ವೀಡಿಯೋ ಕ್ವಾಲಿಟಿಯನ್ನು ಬದಲಾವಣೆ ಮಾಡಿಕೊಳ್ಳಬಹುದು.
2.ನೀವು ಕಡಿಮೆ ರೆಸಲ್ಯೂಷನ್ನಿಗೆ ಸ್ವಿಚ್ ಆಗಿದ್ದೇ ಆದಲ್ಲಿ ವೀಡಿಯೋ ಲೋಡ್ ಆಗುವಿಕೆ ವೇಗವಾಗುತ್ತದೆ.
3.ಡೆಸ್ಕ್ ಟಾಪ್ ನಲ್ಲೂ ಕೂಡ ಈ ಫೀಚರ್ ಲಭ್ಯವಿದೆ.
ಯುಟ್ಯೂಬ್ ಪ್ರೀಮಿಯಂಗೆ ಚಂದಾದಾರರಾಗುವುದು:
1.ಆನ್ ಲೈನ್ ನಲ್ಲಿ ಇನ್ನೂ ಕೂಡ ನೀವು ಸರಿಯಾಗಿ ವೀಡಿಯೋ ವೀಕ್ಷಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಯುಟ್ಯೂಬ್ ಪ್ರೀಮಿಯಂಗೆ ಚಂದಾದಾರರಾಗುವುದರಿಂದಾಗಿ ಡೌನ್ ಲೋಡ್ ಆಯ್ಕೆಗೆ ಅವಕಾಶವಿರುತ್ತದೆ. ಆಫ್ ಲೈನ್ ಮೂಲಕ ಕೂಡ ನೀವು ವೀಡಿಯೋ ವೀಕ್ಷಣೆ ಮಾಡುವುದಕ್ಕೆ ಇದರಲ್ಲಿ ಅವಕಾಶವಿರುತ್ತದೆ.
2.ಡೆಸ್ಕ್ ಟಾಪ್ ನ ಯುಟ್ಯೂಬ್ ವೀಡಿಯೋದಲ್ಲಿ ಬಲಕ್ಲಿಕ್ ಮಾಡಿ ಮತ್ತು ‘Stats for nerds'ನ್ನು ಆಯ್ಕೆ ಮಾಡಿ.
3.ನೆಟ್ ವರ್ಕ್ ಸ್ಪೀಡ್, ಫ್ರೇಮ್ಸ್, ಆಪ್ಶನಲ್ ರೆಸಲ್ಯೂಷನ್, ನೆಟ್ ವರ್ಕ್ ಆಕ್ಟಿವಿಟಿ, ಬಫರ್ ಹೆಲ್ತ್ ಮತ್ತು ಇತ್ಯಾದಿಯನ್ನು ಪಾಪ್ ಅಪ್ ವಿಂಡೋ ಮೂಲಕ ಚೆಕ್ ಮಾಡಿ. ಇದು ಸ್ಕ್ರೀನಿನ ಕಾರ್ನರ್ ನಲ್ಲಿ ಲಭ್ಯವಾಗುತ್ತದೆ. ಯುಟ್ಯೂಬ್ ಆಪ್ ನಲ್ಲೂ ಕೂಡ ಇದನ್ನು ಆಕ್ಸಿಸ್ ಮಾಡುವುದಕ್ಕೆ ಅವಕಾಶವಿರುತ್ತದೆ.
4.ಐಫೋನ್ ನಲ್ಲಿ ಆಪ್ ನ ಒಳಗಿರುವ ಸೆಟ್ಟಿಂಗ್ಸ್ ನ್ನು ಕ್ಲಿಕ್ಕಿಸಿ ಮತ್ತು ‘Enable stats for nerds' ಆಯ್ಕೆಯನ್ನು ಅನೇಬಲ್ ಮಾಡಿ.
5.ಆಂಡ್ರಾಯ್ಡ್ ನಲ್ಲಿ ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ ಮತ್ತು ಜನರಲ್ ಮತ್ತು Stats for nerds ನ್ನು ಅನೇಬಲ್ ಮಾಡಿದರೆ ಆಯ್ತು.
This News Article is a Copy of MYKHEL
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm