ಬ್ರೇಕಿಂಗ್ ನ್ಯೂಸ್
10-01-21 03:04 pm Source: GIZBOT Mutthuraju H M ಡಿಜಿಟಲ್ ಟೆಕ್
ಪ್ರಸ್ತುತ ವಾಟ್ಸಾಪ್‌ನ ಸೇವಾ ನಿಯಮದ ಬಗ್ಗೆಯೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅಷ್ಟೆ ಅಲ್ಲ ವಾಟ್ಸಾಪ್ ಬದಲಿಗೆ ಸಿಗ್ನಲ್ ಆಪ್ ಬಳಸಿ ಎಂಬ ಎಲೋನ್ ಮಸ್ಕ್ ಟ್ವೀಟ್ ಕೂಡ ಹೆಚ್ಚು ಸೌಂಡ್ ಮಾಡ್ತಿದೆ. ಸದ್ಯ ವಾಟ್ಸಾಪ್ ನ ಸೇವಾ ನಿಯಮವನ್ನು ವಿರೋದಿಸುತ್ತಿರುವ ಹೆಚ್ಚಿನ ಮಂದಿ ಟೆಲಿಗ್ರಾಮ್ ಹಾಗೂ ಸಿಗ್ನಲ್ ಆಪ್ ಕಡೆಗೆ ಗಮನ ಹರಿಸುತ್ತಿದ್ದಾರೆ. ಇದರಲ್ಲಿ ಸಿಗ್ನಲ್ ಗೌಪ್ಯತೆಯ ಮೇಲೆ ಹೆಚ್ಚಿನ ಗಮನವನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದು ಕೂಡ ವಾಟ್ಸಾಪ್‌ನಂತೆಯೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸೇವೆಯಾಗಿದೆ.
ಹೌದು, ವಾಟ್ಸಾಪ್ ಗೆ ಪರ್ಯಾಯವಾಗಿರುವ ಸಿಗ್ನಲ್ ಆಪ್ ಕಳೆದ ಎರಡು ದಿನಗಳಿಂದ ಹೆಚ್ಚು ಸುದ್ದಿಯಲ್ಲಿದೆ. ಇನ್ನು ಸಿಗ್ನಲ್ ಆಪ್ ಆಂಡ್ರಾಯ್ಡ್, ಐಒಎಸ್ ಮತ್ತು ಕ್ರೋಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಇದು ವೆಚ್ಚವಿಲ್ಲದೆ ಮತ್ತು ಇತರ ಮೆಸೆಂಜರ್ ಅಪ್ಲಿಕೇಶನ್‌ಗಳಂತೆಯೇ ಫೀಚರ್ಸ್‌ಗಳನ್ನು ಒಳಗೊಂಡಿರುವ ಆಪ್ ಆಗಿದೆ. ಅಷ್ಟೇ ಅಲ್ಲ ನಿಮ್ಮ ವಾಟ್ಸಾಪ್‌ನಲ್ಲಿರುವ ಗ್ರೂಪ್ ಚಾಟ್‌ಗಳನ್ನು ಸಹ ಸಿಗ್ನಲ್ ಆಪ್‌ಗೆ ವರ್ಗಾವಣೆ ಮಾಡಬಹುದಾಗಿದೆ.

ಸಿಗ್ನಲ್ ಅಪ್ಲಿಕೇಶನ್ ನ್ನು ಸುರಕ್ಷಿತ ಅಪ್ಲಿಕೇಶನ್ ಎಂದು ಹೇಳಿಕೊಳ್ಳಲಾಗಿದೆ . ಅಪ್ಲಿಕೇಶನ್ ಯಾವುದೇ ಬಳಕೆದಾರ ಡೇಟಾವನ್ನು ಸಂಗ್ರಹಿಸದ ಕಾರಣ ನಾವು ಹೇಳುತ್ತೇವೆ. ಸಿಗ್ನಲ್ ನೋಂದಣಿಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಮಾತ್ರ ಕೇಳುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ನಿಮ್ಮ ಸಂಖ್ಯೆಯನ್ನು ನಿಮ್ಮ ಬಳಕೆದಾರ ಖಾತೆಗೆ ಲಿಂಕ್ ಮಾಡಲು ಅಪ್ಲಿಕೇಶನ್ ನಿಮ್ಮನ್ನು ಕೇಳುವುದಿಲ್ಲ ಎನ್ನಲಾಗಿದೆ. ಇನ್ನು ನೀವು ವಾಟ್ಸಾಪ್‌ನಲ್ಲಿ ನಿಮ್ಮದೇ ಆದ ಗ್ರೂಪ್ ಚಾಟ್‌ಗಳನ್ನು ಹೊಂದಿರುತ್ತಿರಿ. ಇಂತಹ ಗ್ರೂಪ್ ಚಾಟ್‌ಗಳನ್ನು ನೀವು ಕಳೆದುಕೊಳ್ಳುವುದಕ್ಕೆ ಇಚ್ಚಿಸಿದ್ದರೆ ನಿಮ್ಮ ವಾಟ್ಸಾಪ್ ಕಂಟ್ಯಾಕ್ಟ್‌ಗಳನ್ನ ಸಿಗ್ನಲ್ ಅಪ್ಲಿಕೇಶನ್‌ಗೆ ವರ್ಗಾವನೆ ಮಾಡಿಕೊಳ್ಳಬಹುದು. ಅದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಾಟ್ಸಾಪ್ ಚಾಟ್‌ಗಳನ್ನು ಸಿಗ್ನಲ್ ಅಪ್ಲಿಕೇಶನ್‌ಗೆ ವರ್ಗಾಯಿಸುವುದು ಹೇಗೆ?
ಹಂತ 1: ಮೊದಲು ನೀವು ಸಿಗ್ನಲ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಹಂತ 2: ನಂತರ ಅಪ್ಲಿಕೇಶನ್ ಅನ್ನು ಸೆಟ್ ಮಾಡಿ. ನಿಮ್ಮ ಫೋನ್ ಸಂಖ್ಯೆಯನ್ನು ಸೇರಿಸಿ.
ಹಂತ 3: ಈಗ, ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಲಂಬ ಚುಕ್ಕೆಗಳನ್ನು ಕ್ಲಿಕ್ ಮಾಡುವ ಮೂಲಕ ಆಕ್ಷನ್ ಮೆನು ಆಯ್ಕೆಮಾಡಿ.
ಹಂತ 4: ‘New group' ಆಯ್ಕೆಮಾಡಿ.

ಹಂತ 5: ಈಗ, ಸಿಗ್ನಲ್‌ನಲ್ಲಿ ಗ್ರೂಪ್ ಅನ್ನು ಸೆಟ್ ಮಾಡಲು ನೀವು ಕನಿಷ್ಠ ಒಂದು ಸಂಪರ್ಕವನ್ನು ಸೇರಿಸಬೇಕು. ನಂತರ ಪ್ರಾರಂಭಿಸಲು ಆ ಸಂಪರ್ಕವನ್ನು ಆರಿಸಿ. ಮುಂದುವರೆಯಲು ಬಾಣದ ಮೇಲೆ ಟ್ಯಾಪ್ ಮಾಡಿ.
ಹಂತ 6: ಗ್ರೂಪ್‌ಗೆ ಹೆಸರನ್ನು ನೀಡಿ ಮತ್ತು ‘ಕ್ರಿಯೆಟ್' ಕ್ಲಿಕ್ ಮಾಡಿ.
ಹಂತ 7: ನಂತರ, ಗ್ರೂಪ್ ವಿಂಡೋದಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಲಂಬ ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಹಂತ 8: ‘ಗ್ರೂಪ್ ಸೆಟ್ಟಿಂಗ್ಸ್' ಕ್ಲಿಕ್ ಮಾಡಿ ಮತ್ತು ‘ಗ್ರೂಪ್ ಲಿಂಕ್' ಟ್ಯಾಪ್ ಮಾಡಿ.

ಹಂತ 9: ಗ್ರೂಪ್‌ಗೆ ಶೇರ್‌ಮಾಡಬಹುದಾದ ಲಿಂಕ್ ಪಡೆಯಲು ‘ಗ್ರೂಪ್ ಲಿಂಕ್' ಅನ್ನು ‘ಆನ್' ಗೆ ಟಾಗಲ್ ಮಾಡಿ ಮತ್ತು ನಂತರ ‘ಶೇರ್' ಟ್ಯಾಪ್ ಮಾಡಿ.
ಹಂತ 10: ನೀವು ಈ ಲಿಂಕ್ ಅನ್ನು ಕಾಪಿ ಮಾಡಬಹುದು ಮತ್ತು ಅದನ್ನು ಗ್ರೂಪ್‌ನಲ್ಲಿ ನೀವು ಬಯಸುವ ಇತರರೊಂದಿಗೆ ಶೇರ್ ಮಾಡಿಕೊಳ್ಳಬಹುದು.
ಹಂತ 11: ಈ ಲಿಂಕ್ ಅನ್ನು ನಿಮಗೆ ಅನುಕೂಲಕರವಾಗಿರುವಲ್ಲಿ ನೀವು ಕಾಪಿ ಮಾಡಬಹುದು ಮತ್ತು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಸಿಗ್ನಲ್ ಗ್ರೂಪ್‌ಗೆ ಸೇರಿಕೊಳ್ಳುವುದು.
This News Article is a Copy of GIZBOT
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm