ಬ್ರೇಕಿಂಗ್ ನ್ಯೂಸ್
06-01-21 03:54 pm Source: GIZBOT Mutthuraju H M ಡಿಜಿಟಲ್ ಟೆಕ್
ಟೆಕ್ ವಲಯದ ಎಲೆಕ್ಟ್ರಾನಿಕ್ಸ್ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಹೊಸ ಇಯರ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಎಲ್‌ಜಿ ಟೋನ್ ಫ್ರೀ HBS-FN6 ಮತ್ತು HBS-FN7 ಟ್ರೂಲಿ ವಾಯರ್‌ಲೆಸ್ ಸ್ಟಿರಿಯೊ ಎಂಬ ಎರಡು ಇಯರ್‌ಫೋನ್‌ಗಳನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದರ ಬೆಲೆ ರೂ. 24,990 ಮತ್ತು ರೂ. 29,990 ಬೆಲೆಯನ್ನು ಹೊಂದಿದ್ದು, ಚಾರ್ಜಿಂಗ್ ಕೇಸಿಂಗ್‌ನಲ್ಲಿ ಇಯರ್‌ಪೀಸ್‌ಗಳ ಯುವಿ ಸ್ಯಾನಿಟೈಸೇಶನ್ ಅನ್ನು ಹೊಂದಿವೆ. ಜೊತೆಗೆ ಎಲ್‌ಜಿ ಟೋನ್ ಫ್ರೀ HBS-FN7 ಸಹ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಹೊಂದಿದೆ.
ಹೌದು, ಎಲ್‌ಜಿ ಸಂಸ್ಥೆ ತನ್ನ ಹೊಸ ಎರಡು ಇಯರ್‌ಫೋನ್‌ಗಳನ್ನ ಭಾರತದಲ್ಲಿ ಪರಿಚಯಿಸಿದೆ. ಈ ಇಯರ್‌ಫೋನ್‌ಗಳು ಟೋನ್ ಫ್ರೀ TWS ಇಯರ್‌ಫೋನ್‌ಗಳಾಗಿದ್ದು, ಬ್ರಿಟಿಷ್ ಲೌಡ್‌ಸ್ಪೀಕರ್ ಮೇಕರ್ ಮೆರಿಡಿಯನ್ ಆಡಿಯೋ ಸಹಯೋಗದೊಂದಿಗೆ ಸೌಂಡ್ ಟ್ಯೂನಿಂಗ್ ಅನ್ನು ಸಹ ಹೊಂದಿವೆ.
ಎಲ್‌ಜಿ ಟೋನ್ ಫ್ರೀ HBS-FN6
ಈ ಇಯರ್‌ಫೋನ್ ಇಯರ್‌ಪೀಸ್‌ಗಳಿಗೆ ಯುವಿ ಸ್ಯಾನಿಟೈಸೇಶನ್ ಸಿಸ್ಟಮ್ ಅನ್ನು ನೀಡಲಾಗಿದೆ. ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿದಾಗ, ಇದು ಇಯರ್‌ಪೀಸ್‌ಗಳನ್ನು ಸ್ವಚ್ಚಗೊಳಿಸಲು ಯುವಿ ಬೆಳಕನ್ನು ಬಳಸುತ್ತದೆ. ಅಲ್ಲದೆ ಇಯರ್‌ಪೀಸ್‌ಗಳ ಒಳ ಜಾಲರಿಯ ಮೇಲಿನ ಸಾಮಾನ್ಯ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ ಎಂದು ಹೇಳಲಾಗಿದೆ. ಈ ಇಯರ್‌ಫೋನ್‌ಗಳು ಎಸ್‌ಬಿಸಿ ಮತ್ತು ಎಎಸಿ ಬ್ಲೂಟೂತ್ ಕೋಡೆಕ್‌ಗಳನ್ನು ಬೆಂಬಲಿಸುತ್ತವೆ ಮತ್ತು ಮೆರಿಡಿಯನ್ ಆಡಿಯೊ ಸಹಯೋಗದೊಂದಿಗೆ ಟ್ಯೂನ್ ಮಾಡುತ್ತವೆ. ಜೊತೆಗೆ ಆರು ಗಂಟೆಗಳ ಬ್ಯಾಟರಿ ಅವಧಿಯನ್ನು ಕಂಪನಿಯು ಭರವಸೆ ನೀಡಿದೆ.
ಎಲ್‌ಜಿ ಟೋನ್ ಫ್ರೀ HBS-FN7
ಎಲ್‌ಜಿ ಕಂಪೆನಿಯ HBS-FN7 ಇಯರ್‌ಫೋನ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಹೆಚ್ಚುವರಿ ಫೀಚರ್ಸ್ ಅನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್ ಐದು ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ಮತ್ತು ಚಾರ್ಜಿಂಗ್ ಕೇಸ್‌ನಿಂದ ಇನ್ನೂ ಎರಡು ಚಾರ್ಜ್‌ಗಳನ್ನು ಹೊಂದಿದ್ದು, ಕಾರ್ಯಾಚರಣೆಯಲ್ಲಿ ಸಕ್ರಿಯ ಶಬ್ದ ರದ್ದತಿಯನ್ನು ಒಳಗೊಂಡಿದೆ. ಇದಲ್ಲದೆ ಎಲ್‌ಜಿ ಟೋನ್ ಫ್ರೀ HBS-FN7 ಪ್ರತಿ ಇಯರ್‌ಪೀಸ್‌ನಲ್ಲಿ ಮೂರು ಮೈಕ್ರೊಫೋನ್‌ಗಳನ್ನು ಹೊಂದಿರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್ 5 ಅನ್ನು ಬಳಸುತ್ತದೆ ಮತ್ತು 6mm ಡೈನಾಮಿಕ್ ಡ್ರೈವರ್‌ಗಳಿಂದ ನಿಯಂತ್ರಿಸಲ್ಪಡುತ್ತದೆ.
ಬೆಲೆ ಮತ್ತು ಲಭ್ಯತೆ
ಎಲ್‌ಜಿ ಟೋನ್ ಫ್ರೀ HBS-FN6 ಇಯರ್ ಫೋನ್ ಬೆಲೆ 24,990 ರೂ ಹೊಂದಿದೆ. ಹಾಗೇಯೆ ಎಲ್‌ಜಿ ಟೋನ್ ಫ್ರೀ HBS-FN7 ಇಯರ್‌ಫೋನ್ 29,990 ರೂ. ಬೆಲೆಯನ್ನು ಹೊಂದಿದೆ. ಎಲ್‌ಜಿ ಟೋನ್ ಫ್ರೀ ಶ್ರೇಣಿ ಈಗಾಗಲೇ ಎಲ್‌ಜಿ ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಿದೆ. ಸದ್ಯ ಮುಂದಿನ ವಾರದಿಂದ ಆಫ್‌ಲೈನ್ ರಿಟೇಲ್ ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ಮಾರಾಟವಾಗಲಿದೆ.
This News Article is a Copy of GIZBOT
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm