ಬ್ರೇಕಿಂಗ್ ನ್ಯೂಸ್
29-12-20 04:33 pm Source: GIZBOT Mutthuraju H M ಡಿಜಿಟಲ್ ಟೆಕ್
ಈಗಾಗಲೇ ಕೇಂದ್ರ ಸರ್ಕಾರವು ದೇಶದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗೇಟ್‌ಗಳಲ್ಲಿ ಚಾಲಕರಿಗೆ ಸರದಿಯಲ್ಲಿ ಕಾಯದೆ ತಕ್ಷಣ ಹಣವನ್ನು ಪಾವತಿಸಲು ಫಾಸ್ಟ್ಯಾಗ್ ಅನ್ನು ಪರಿಚಯಿಸಿದೆ. ಈ ಮೂಲಕ ತನ್ನ ಡಿಜಿಟಲೀಕರಣ ವ್ಯವಸ್ಥೆಯನ್ನ ಟೋಲ್ ಗೇಟ್‌ಗಳಲ್ಲೂ ಪರಿಚಯಿಸಿದೆ. ಆದರೂ ಇನ್ನು ಕೂಡ ಕೆಲವು ವಾಹನ ಚಾಲಕರು ಫಸ್ಟ್ಯಾಗ್ ಅನ್ನು ಬಳಸುತ್ತಿಲ್ಲ. ಇದೇ ಕಾರಣಕ್ಕೆ ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 2021 ರ ಜನವರಿ 1 ರ ಒಳಗೆ ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್ ಅನ್ನು ಹೊಂದಿರಬೇಕು ಎಂದು ಘೋಷಿಸಿದ್ದಾರೆ.
ಹೌದು, ಕೇಂದ್ರ ಸರ್ಕಾರ ಜನವರಿ 1, 2021 ರಿಂದು ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್ ಹೊಂದಿರಬೇಕು ಎಂದು ಘೋಷಿಸಿದೆ. ಇದೀಗ ನೀವು ಕಡ್ಡಾಯವಾಗಿ ಫಾಸ್ಟ್ಯಾಗ್ ಅನ್ನು ಪಡೆಯಲೇಬೇಕಾಗಿದೆ. ನೀವು ಫಾಸ್ಟ್ಯಾಗ್ ಅನ್ನು ಪಡೆದು ನಿಮ್ಮ ವಾಹನದ ವಿಂಡ್ ಸ್ಕ್ರೀನ್‌ಗೆ ಅಂಟಿಸಿದ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಗೇಟ್‌ಗಳಲ್ಲಿ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಸಾಧ್ಯವಾಗುತ್ತದೆ. ದ್ವಿಚಕ್ರ ಹೊರತುಪಡಿಸಿ ತ್ರಿಚಕ್ರ, ಕಾರ್, ಲಾರಿ ಸೇರಿ ಎಲ್ಲ ವಾಹನಗಳಿಗೂ ಫಾಸ್ಟ್ಯಾಗ್ ಅಳವಡಿಕೆ ಮಾಡಬೇಕಿದೆ. ಈಗಾಗಲೇ, ಫಾಸ್ಟ್ಯಾಗ್ 20 ಕ್ಕೂ ಹೆಚ್ಚು ಬ್ಯಾಂಕುಗಳೊಂದಿಗೆ ಕೈಜೋಡಿಸಿದೆ. ಇದನ್ನು ಬ್ಯಾಂಕುಗಳು, ಯುಪಿಐ ಅಥವಾ ಇ-ವ್ಯಾಲೆಟ್‌ಗಳ ಮೂಲಕ ಮಾಡಬಹುದು. Google Pay, PhonePe, ಮತ್ತು BHIM UPI ಯಿಂದ FASTag ಅನ್ನು ರೀಚಾರ್ಜ್ ಮಾಡುವುದು ಹೇಗೆ?

ಟೋಲ್ ಪ್ಲಾಜಾಗಳಲ್ಲಿನ ಚಾಲಕರಿಗೆ ಸರದಿಯಲ್ಲಿ ಕಾಯದೆ ತಕ್ಷಣ ಹಣವನ್ನು ಪಾವತಿಸಲು ಫಾಸ್ಟ್ಯಾಗ್ ಸಹಾಯ ಮಾಡುತ್ತದೆ. ಅವರು ನೇರವಾಗಿ ಬ್ಯಾಂಕಿನಿಂದ ಹಣವನ್ನು ಪಾವತಿಸುವ ಮೂಲಕ ಇದನ್ನು ಮಾಡಬಹುದು. ಯಾವುದೇ ವಾಹನದ ಮಾಲಿಕ ತನ್ನ ಬ್ಯಾಂಕ್ ಖಾತೆ ಇರುವುದಕ್ಕೆ ಫಾಸ್ಟ್ಯಾಗ್ ಲಿಂಕ್ ಮಾಡಿಸಬಹುದಾಗಿದೆ. ಇಲ್ಲವೇ ಪ್ರತ್ಯೇಕ ಹಣ ಜಮೆ ಮಾಡಿಕೊಳ್ಳಬಹುದು. ಅಲ್ಲದೆ Google Pay, PhonePe, ಮತ್ತು BHIM UPI ಮೂಲಕ FASTag ಅನ್ನು ರೀಚಾರ್ಜ್ ಮಾಡಬಹುದಾಗಿದ್ದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಸಿರಿ.

PhonePe ಬಳಸಿ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?
ಹಂತ:1 PhonePe ಅಪ್ಲಿಕೇಶನ್ ತೆರೆಯಿರಿ ಮತ್ತು FASTag ಐಕಾನ್ ಕ್ಲಿಕ್ ಮಾಡಿ.
ಹಂತ:2 ವಿತರಿಸುವ ಬ್ಯಾಂಕುಗಳ ಪಟ್ಟಿಯಿಂದ, ನಿಮ್ಮ ಫಾಸ್ಟ್ಯಾಗ್ ನೀಡುವ ಬ್ಯಾಂಕ್ ಅನ್ನು ಆರಿಸಿ.
ಹಂತ:3 ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ.
ಹಂತ:4 ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ಪಾವತಿ ಮಾಡಿ.

Google Pay ಬಳಸಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?
ಹಂತ:1 Google Pay ತೆರೆಯಿರಿ ಮತ್ತು ಹೊಸದನ್ನು ಆರಿಸಿ.
ಹಂತ:2 ಮೆನುವಿನಿಂದ, ಇನ್ನಷ್ಟು ಕ್ಲಿಕ್ ಮಾಡಿ ಮತ್ತು ಫಾಸ್ಟ್ಯಾಗ್ ರೀಚಾರ್ಜ್ ಆಯ್ಕೆಮಾಡಿ.
ಹಂತ:3 ನಿಮ್ಮ ಫಾಸ್ಟ್ಯಾಗ್ ನೀಡುವ ಬ್ಯಾಂಕ್ ಅನ್ನು ಆರಿಸಿ.
ಹಂತ:4 ಎಲ್ಲಾ ವಿವರಗಳನ್ನು ಒದಗಿಸುವ ಮೂಲಕ ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಿ ಮತ್ತು ಪಾವತಿ ಮಾಡಿ.
BHIM ಬಳಸಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?
ಹಂತ:1 BHIM ಅಪ್ಲಿಕೇಶನ್ ತೆರೆಯಿರಿ ಮತ್ತು ಮುಖಪುಟ ಪರದೆಯಿಂದ ಕಳುಹಿಸು ಆಯ್ಕೆಮಾಡಿ.
ಹಂತ:2 NETC FASTag UPI ID ಅನ್ನು ನಮೂದಿಸಿ.
ಹಂತ:3 ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ರೀಚಾರ್ಜ್ ಮೊತ್ತ ಮತ್ತು ಪಿನ್ ಅನ್ನು ನಮೂದಿಸಿ.
ಈ ಎಲ್ಲಾ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಫಾಸ್ಟ್‌ಟ್ಯಾಗ್ ಅನ್ನು ತಕ್ಷಣ ರೀಚಾರ್ಜ್ ಮಾಡಬಹುದು ಮತ್ತು ಟೋಲ್ ಪ್ಲಾಜಾಗಳ ಮೂಲಕ ಅನುಕೂಲಕರವಾಗಿ ಪ್ರಯಾಣಿಸಬಹುದು.
This News Article is a Copy of GIZBOT
29-07-26 09:54 pm
HK News Staffer
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
29-07-26 10:45 pm
HK News Desk
ಕೋರ್ಟ್ ಆವರಣದಲ್ಲಿ ವಕೀಲರಿಂದಲೇ ವ್ಯಕ್ತಿಯ ಮೇಲೆ ಹಲ್...
29-07-26 09:43 pm
Mangalore crime: ಆರೈಕೆ ನೆಪದಲ್ಲಿ ಬಂದ್ಲು ರಾಕ್ಷಸ...
29-07-26 06:51 pm
ಒಮಾನ್ನಲ್ಲಿ ಕೆಲಸದ ವೇಳೆ ದುರಂತ; ವಾಹನದ ಅಡಿಗೆ ಸಿಲ...
29-07-26 05:27 pm
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ, ನೀಟ್ ಪ್...
29-07-26 01:53 pm