ಬ್ರೇಕಿಂಗ್ ನ್ಯೂಸ್
26-12-20 05:45 pm Source: GIZBOT ಡಿಜಿಟಲ್ ಟೆಕ್
ನೀವು ಜಿಯೋ ಕಾಲರ್ ಟ್ಯೂನ್ ಸೆಟ್ ಮಾಡ ಬಯಸಿದರೇ, ಕಾಲರ್ ಟ್ಯೂನ್ ಸೆಟ್ ಮಾಡಲು ನಾಲ್ಕು ಮಾರ್ಗಗಳಿವೆ. ರಿಲಯನ್ಸ್ ಜಿಯೋ ಬಳಕೆದಾರರು ಮೈಜಿಯೊ ಅಪ್ಲಿಕೇಶನ್, IVR ಅಥವಾ SMS ಬಳಸಿ ಕಾಲರ್ ಟ್ಯೂನ್ ಹೊಂದಿಸಬಹುದು. ಹಾಗೆಯೇ ಮತ್ತೊಬ್ಬ ಜಿಯೋ ಗ್ರಾಹಕರಿಂದ ಜಿಯೋ ಟ್ಯೂನ್ ಅನ್ನು ನಕಲಿಸಲು ಸಹ ಟೆಲಿಕಾಂ ಅನುಮತಿಸುತ್ತದೆ. ಒಂದು ವೇಳೆ ನೀವು ಮೈಜಿಯೊ ಅಪ್ಲಿಕೇಶನ್‌ನಲ್ಲಿ ನಿರ್ದಿಷ್ಟ ಹಾಡನ್ನು ಸರ್ಚ್ ಮಾಡಲು ಸಾಧ್ಯವಾಗದೆ ಇದ್ದಲ್ಲಿ, ನಂತರ ನೀವು ಜಿಯೋಸಾವನ್ ಅಪ್ಲಿಕೇಶನ್ ಬಳಸಿ ಕಾಲರ್ ಟ್ಯೂನ್ ಹೊಂದಿಸಲು ಪ್ರಯತ್ನಿಸಬಹುದು. ಹಾಗೆಯೇ ಕಾಲರ್ ಟ್ಯೂನ್ ಸೇವೆ ನಿಲ್ಲಿಸಲು ಅವಕಾಶ ನೀಡಲಾಗಿದೆ.
ಹೌದು, ರಿಲಾಯನ್ಸ್ ಜಿಯೋ ಕಂಪನಿಯು ತನ್ನ ಜಿಯೋ ಟ್ಯೂನ್ಸ್ ಲೈಬ್ರರಿಯಲ್ಲಿ 4 ಲಕ್ಷ ಜೊತೆಗೆ ಹಾಡುಗಳ ಸಂಗ್ರಹವನ್ನು ಹೊಂದಿದೆ. ಇದರಿಂದ ನಿಮ್ಮ ಜಿಯೋ ಟ್ಯೂನ್ ಅನ್ನು ನೀವು ಆಯ್ಕೆ ಮಾಡಬಹುದು. ಹಾಗೆಯೇ ಹೆಲೋ ಟ್ಯೂನ್ ಸೆಟ್ ಮಾಡಿದ ನಂತರ ಈ ಸೇವೆ ಬೇಡವಾದಲ್ಲಿ ತೆಗೆದು ಹಾಕಬಹುದು/ ಸೇವೆಯನ್ನು ನಿಲ್ಲಿಸಬಹುದಾಗಿದೆ. ಹಾಗಾದರೇ ಜಿಯೋದ ಹೆಲೋ/ ಕಾಲರ್ ಟ್ಯೂನ್ ಅನ್ನು ಹೇಗೆ ನಿಲ್ಲಿಸುವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಜಿಯೋ ಕಾಲರ್ ಟ್ಯೂನ್ ಸೇವೆಯನ್ನು ಸ್ಥಗಿತ ಮಾಡಲು ಮೂರು ಆಯ್ಕೆಗಳು ಇವೆ. ಅವುಗಳು ಕ್ರಮವಾಗಿ ಎಸ್‌ಎಮ್‌ಎಸ್ ಮೂಲಕ, ಮೈ ಜಿಯೋ ಆಪ್ ಮೂಲಕ ಹಾಗೂ IVR ಮೂಲಕ. ಬಳಕೆದಾರರು ಈ ಮೂರು ಆಯ್ಕೆಗಳಲ್ಲಿ ಒಂದು ಅನುಕೂಲಕರ ವಿಧಾನದ ಮೂಲಕ ಕಾಲರ್ ಟ್ಯೂನ್ ಸೇವೆ ನಿಲ್ಲಿಸಬಹುದಾಗಿದೆ.

SMS ವಿಧಾನದ ಮೂಲಕ
*ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೆಸೇಜ್ ಆಪ್ ತೆರೆಯಿರಿ. *ಮೆಸೇಜ್‌ನಲ್ಲಿ ಸ್ಟಾಪ್ ಎಂದು ಟೈಪ್ ಮಾಡಿ 56789 ಗೆ ಕಳುಹಿಸಿ.
*ನಿಷ್ಕ್ರಿಯಗೊಳಿಸುವಿಕೆಯನ್ನು ದೃಢೀಕರಿಸಲು 1 ಎಂದು ಪ್ರತ್ಯುತ್ತರಿಸಿ.
*ಇದಾದ ನಂತರ ಜಿಯೋ ಟ್ಯೂನ್ಸ್ ಸೇವೆ ಸ್ಥಗಿತವಾಗುತ್ತದೆ. ಮತ್ತು ನಿಷ್ಕ್ರಿಯದ ಬಗ್ಗೆ ದೃಢೀಕೃತ SMSನ್ನು ಬಳಕೆದಾರರು ಸ್ವೀಕರಿಸುತ್ತಾರೆ.

ಮೈ ಜಿಯೋ ಆಪ್ ವಿಧಾನದ ಮೂಲಕ
*ಮೈ ಜಿಯೋ ಆಪ್ ತೆರೆಯಿರಿ.
*ಮೆನುವಿನಲ್ಲಿ 'ಜಿಯೋ ಟ್ಯೂನ್ಸ್' ಆಯ್ಕೆಯನ್ನು ಕ್ಲಿಕ್ ಮಾಡಿ.
*'ಮೈ ಸಬ್‌ಸ್ಕ್ರೈಬರ್ ಪುಟ'ಕ್ಕೆ ಹೋಗಿ ಮತ್ತು ಕೆಳಭಾಗದಲ್ಲಿರುವ 'ಜಿಯೋ ಟ್ಯೂನ್ ನಿಷ್ಕ್ರಿಯಗೊಳಿಸಿ' ಆಯ್ಕೆ ಟ್ಯಾಪ್ ಮಾಡಿ. *ದೃಢೀಕರಣ ಪುಟದಲ್ಲಿ 'ಹೌದು' ಎಂಬುದನ್ನು ಟ್ಯಾಪ್ ಮಾಡಿ

IVR ವಿಧಾನದ ಮೂಲಕ
*ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾಲ್ ಡಯಲರ್ ಆಪ್ ತೆರೆಯಿರಿ
*ಜಿಯೋ ಸಂಖ್ಯೆಯಿಂದ 155223 ಗೆ ಕಾಲ್ ಮಾಡಿ
*ಇಂಗ್ಲಿಷ್‌ಗಾಗಿ 1 ಮತ್ತು ಹಿಂದಿಗಾಗಿ 2 ಒತ್ತುವ ಮೂಲಕ ಆದ್ಯತೆಯ ಭಾಷೆ ಆರಿಸಿ.
*ಈಗ, ಐವಿಆರ್ ನಿಮ್ಮ ಜಿಯೋ ಸಂಖ್ಯೆಯಲ್ಲಿರುವ ಎಲ್ಲಾ ಸಕ್ರಿಯ ಮೌಲ್ಯವರ್ಧಿತ ಸೇವೆಗಳನ್ನು ಕೇಳುತ್ತದೆ
This News Article is a Copy of GIZBOT
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm