ಬ್ರೇಕಿಂಗ್ ನ್ಯೂಸ್
18-12-20 04:27 pm Source: GIZBOT Mutthuraju H M ಡಿಜಿಟಲ್ ಟೆಕ್
ನವದೆಹಲಿ, ಡಿ. 18: ಪೇಸ್‌ಬುಕ್ ಒಡೆತನದ ವಾಟ್ಸಾಪ್ ಭಾರತದಲ್ಲಿ ಆರೋಗ್ಯ ವಿಮೆ ಮತ್ತು ಮೈಕ್ರೋ ಪಿಂಚಣಿ ಸೇವೆಗಳನ್ನ ಪ್ರಾರಂಭಿಸಲು ಸಿದ್ದತೆ ನಡೆಸಿದೆ. ಫೇಸ್‌ಬುಕ್ ಫ್ಯೂಯಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಫೇಸ್‌ಬುಕ್ ಈ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ದೇಶದ ಮೊಬೈಲ್ ಬಳಕೆದಾರರಿಗೆ "ನಿರ್ಣಾಯಕ ಹಣಕಾಸು ಮತ್ತು ಜೀವನೋಪಾಯ ಸೇವೆಗಳನ್ನು" ತರುವ ನಿಟ್ಟಿನಲ್ಲಿ ವಾಟ್ಸಾಪ್‌ನ ಮಾರ್ಗಸೂಚಿಯನ್ನು ಇನ್ನಷ್ಟು ಉತ್ತಮಗೊಳಿಸಲಿದ್ದೇವೆ ಎಂದು ಫೇಸ್‌ಬುಕ್‌ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿದ್ದಾರೆ.
ವಾಟ್ಸಾಪ್ ಭಾರತದಲ್ಲಿ ಆರೋಗ್ಯ ವಿಮಾ ಉತ್ಪನ್ನಗಳನ್ನು ಪ್ರಾರಂಭಿಸಲು ಎಸ್‌ಬಿಐ ಜನರಲ್‌ನೊಂದಿಗೆ ಕೆಲಸ ಮಾಡುತ್ತಿದೆ. ಇದು ಎಚ್‌ಡಿಎಫ್‌ಸಿ ಪಿಂಚಣಿ ಮತ್ತು ಸಿಂಗಾಪುರ ಮೂಲದ ಪಿನ್‌ಬಾಕ್ಸ್ ಸೊಲ್ಯೂಷನ್ಸ್ ಮೈಕ್ರೋ ಪಿಂಚಣಿ ಪ್ರಾಡಕ್ಟ್‌ಗಳನ್ನು ನೀಡಲು ಮುಂದಾಗಿವೆ. ಇನ್ನು ಈ ಹೊಸ ಪ್ಲ್ಯಾನ್ ವಾಟ್ಸಾಪ್ನ ಡಿಜಿಟಲ್ ಪಾವತಿ ವಾಟ್ಸಾಪ್ ಪೇ ಜೊತೆಗೆ ಬರುತ್ತವೆ ಎನ್ನಲಾಗಿದೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ, ಎಸ್‌ಬಿಐ ಜನರಲ್‌ನಿಂದ ಕೈಗೆಟುಕುವ ಆರೋಗ್ಯ ವಿಮಾ ರಕ್ಷಣೆಯನ್ನು ನೀಡಲು ವಾಟ್ಸಾಪ್ ಸಜ್ಜಾಗಿದೆ ಎಂದು ಹೇಳಲಾಗ್ತಿದೆ.

ಸದ್ಯ ಫೇಸ್‌ಬುಕ್ ಓಡೆತನದ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನ ಪರಿಚಯಿಸಿದೆ. ಇದೀಗ ಹೆಲ್ತ್ ಇನ್ಸೂರೆನ್ಸ್ ಅನ್ನು ಪರಿಚಯಿಸಲಿದೆ. ವಾಟ್ಸಾಪ್ ಮೂಲಕ ಮೈಕ್ರೋ-ಪಿಂಚಣಿ ಪ್ರಾಡಕ್ಟ್‌ಗಳನ್ನು ಫೈಲ್‌ಟ್‌ಗಳು ಪ್ರಾರಂಭಿಸಲು ಎಚ್‌ಡಿಎಫ್‌ಸಿ ಪಿಂಚಣಿ ಮತ್ತು ಪಿನ್‌ಬಾಕ್ಸ್ ಪರಿಹಾರಗಳೊಂದಿಗೆ ವಾಟ್ಸಾಪ್ ಸಹಭಾಗಿತ್ವವನ್ನು ಘೋಷಿಸಲಾಗಿದೆ.

ಇನ್ನು ಈ ವಿಮಾ ಕಂಪನಿಗಳು ಮತ್ತು ಮೈಕ್ರೋ ಪಿಂಚಣಿ ಪ್ರಾಡಕ್ಟ್‌ಗಳನ್ನು ನೀಡುವ ಸಂಸ್ಥೆಗಳಿಗೆ ಸ್ಪರ್ಧಾತ್ಮಕ ವೇದಿಕೆಯಾಗಲು ಮತ್ತು ಹೊಸ ಕ್ರಮದಿಂದ ಭಾರತೀಯ ಹಣಕಾಸು ಕ್ಷೇತ್ರದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ವಾಟ್ಸಾಪ್ ಉದ್ದೇಶಿಸಿದೆ. ಮೆಸೇಜಿಂಗ್ ಅಪ್ಲಿಕೇಶನ್ ಭಾರತೀಯ ಬಳಕೆದಾರರಿಗೆ ಅವರ ಸ್ಥಳ ಮತ್ತು ಆದಾಯವನ್ನು ಲೆಕ್ಕಿಸದೆ ಆರೋಗ್ಯ ವಿಮೆ ಮತ್ತು ಮೈಕ್ರೋ ಪಿಂಚಣಿಗಳನ್ನು ತರಲು ಸುಲಭವಾಗಿಸುತ್ತದೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ.
ವಿಮಾ ಉತ್ಪನ್ನಗಳನ್ನು ನೀಡಲು ವಾಟ್ಸಾಪ್ ತನ್ನ ಯೋಜನೆಗಳನ್ನು ಸಿದ್ದಪಡಿಸಿದೆ. ಸದ್ಯ ಫೋನ್‌ಪೇ ಕಳೆದ ಒಂದು ವರ್ಷದಲ್ಲಿ ತನ್ನ ಪ್ಲಾಟ್‌ಫಾರ್ಮ್ ಮೂಲಕ 11 ಮಿಲಿಯನ್ ವಿಮಾ ಕಂತುಗಳನ್ನು ಪ್ರಕ್ರಿಯೆಗೊಳಿಸಿದೆ.ಇದೀಗ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ 30 ಕ್ಕೂ ಹೆಚ್ಚು ವಿಮೆದಾರರಿಗೆ ವಿಮಾ ಕಂತುಗಳನ್ನು ಪಾವತಿಸುವ ಆಯ್ಕೆಯನ್ನು ನೀಡುತ್ತದೆ. ವರ್ಷದಲ್ಲಿ ಒಟ್ಟು ಪ್ರೀಮಿಯಂಗಳಲ್ಲಿ 80 ಪ್ರತಿಶತ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿನ ಬಳಕೆದಾರರಿಂದ ಬಂದಿದೆ. ಇದೇ ಕಾರಣಕ್ಕೆ ಇದೀಗ ವಾಟ್ಸಾಪ್ ಕೂಡ ತನ್ನ ವಾಟ್ಸಾಪ್ ಪೇ ಮೂಲಕ ಪಿಂಚಣಿ ವ್ಯವಸ್ಥೆಗಳನ್ನ ನೀಡಲು ಸಿದ್ದತೆ ನಡೆಸಿದೆ.
This News Article is a Copy of GIZBOT
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm