ಬ್ರೇಕಿಂಗ್ ನ್ಯೂಸ್
12-12-20 02:29 pm Source: GIZBOT Mutthuraju H M ಡಿಜಿಟಲ್ ಟೆಕ್
ಪ್ರಸ್ತುತ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಾಪಾಗೋದೆ ಸರ್ಚ್ ಇಂಜಿನ್ ದೈತ್ಯ ಗೂಗಲ್. ಬಳಕೆದಾರರ ನೆಚ್ಚಿನ ಸರ್ಚ್ ಇಂಜಿನ್ ಆಗಿರುವ ಗೂಗಲ್ ತನ್ನ ಹಲವು ಸೇವೆಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಇದೀಗ ಬಳಕೆದಾರರು ಹೆಚ್ಚು ಪರಿಣಾಮಕಾರಿಯಾಗಿ ಸರ್ಚ್ ಮಾಡಲು ಸಹಾಯ ಮಾಡುವ ಸಲುವಾಗಿ ಗೂಗಲ್ ಡ್ರೈವ್ ಅಪ್ಲಿಕೇಶನ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಹೊಸ ಫೀಚರ್ಸ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಡಿವೈಸ್‌ಗಳಲ್ಲಿಯೂ ಲಭ್ಯವಾಗಲಿದೆ.
ಹೌದು, ಗೂಗಲ್ ತನ್ನ ಗೂಗಲ್ ಡ್ರೈವ್ ಅಪ್ಲಿಕೇಶನ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಫೀಚರ್ಸ್‌ಗಳು ಡೆಸ್ಕ್‌ಟಾಪ್ ಮತ್ತು ಮೊಬೈಲ್ ಸರ್ಚಿಂಗ್ ಅನ್ನು ನೋಡಲು ಮತ್ತು ರಿ ರನ್ ಮಾಡಲು ಅವಕಾಶವನ್ನು ನೀಡಲಿದೆ. ಅಪ್ಲಿಕೇಶನ್‌ನಲ್ಲಿ ಅದೇ ಹುಡುಕಾಟ ಪ್ರಶ್ನೆಗಳನ್ನು ಪುನರಾವರ್ತಿಸುವ ಅಗತ್ಯವನ್ನು ಇದು ನಿವಾರಿಸುತ್ತದೆ. ಇದಲ್ಲದೆ, ಬಳಕೆದಾರರು ಸರ್ಚಿಂಗ್ ಬಾಕ್ಸ್‌ನಲ್ಲಿ ಟೈಪ್ ಮಾಡುವಾಗ ‘ಬುದ್ಧಿವಂತ ಸಲಹೆಗಳನ್ನು' ವೀಕ್ಷಿಸಲು ಮತ್ತು ಆಯ್ಕೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.
ಸದ್ಯ ಗೂಗಲ್ ಡ್ರೈವ್ ಪರಿಚಯಿಸಿರುವ ಹೊಸ ಫೀಚರ್ಸ್ ಮೂಲಕ ಫೈಲ್‌ಗಳನ್ನು ಫೋನ್‌ನಲ್ಲಿ ತ್ವರಿತವಾಗಿ ಕಂಡುಹಿಡಿಯಬಹುದಾಗಿದೆ. ಇದರಿಂದ ಬಳಕೆದಾರರು ತಾವು ಎಲ್ಲಿದ್ದರೂ ಹಂಚಿಕೊಳ್ಳಬಹುದು, ಪರಿಶೀಲಿಸಬಹುದು, ಸಹಕರಿಸಬಹುದು ಮತ್ತು ರಚಿಸಬಹುದು ಎಂದು ಗೂಗಲ್ ಹೇಳಿದೆ. ಇನ್ನು ಗೂಗಲ್ ಡ್ರೈವ್ ಅಪ್ಲಿಕೇಶನ್‌ನಲ್ಲಿ ಹುಡುಕಾಟವನ್ನು ನಿರ್ವಹಿಸುವಾಗ ಬಳಕೆದಾರರು ವೀಕ್ಷಿಸಲು ಮತ್ತು ಆಯ್ಕೆ ಮಾಡಲು ಸಾಧ್ಯವಾಗುವಂತಹ ‘ಬುದ್ಧಿವಂತ ಸಲಹೆಗಳು' ಸಾಕಷ್ಟು ಉಪಯೋಗಕ್ಕೆ ಬರಲಿದೆ. ಇದರಿಂದ ಹಿಂದಿನ ಸರ್ಚ್ ಮತ್ತು ಕೀವರ್ಡ್‌ಗಳಿಗೆ ಸಲಹೆಗಳನ್ನು ಮತ್ತು ಇತ್ತೀಚೆಗೆ ಪ್ರವೇಶಿಸಿದ ಫೈಲ್‌ಗಳನ್ನು ಇದು ತೋರಿಸಲಿದೆ.
ಇನ್ನು ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ಡ್ರೈವ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುವ ಬಳಕೆದಾರರಿಗೆ ಈ ಹೊಸ ಫೀಚರ್ಸ್‌ಗಳು ಲಭ್ಯವಿರುತ್ತವೆ. ಫೀಚರ್ಸ್‌ಗಳು ಕಾರ್ಯನಿರ್ವಹಿಸಲು ‘ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವಿಟಿ' ಯನ್ನು ಸಹ ಸಕ್ರಿಯಗೊಳಿಸಬೇಕು ಎಂದು ಗೂಗಲ್ ಹೇಳಿದೆ. ಇದನ್ನು ಸಕ್ರಿಯಗೊಳಿಸುವುದರಿಂದ Google ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಚಟುವಟಿಕೆಗಳನ್ನು ಉಳಿಸುತ್ತದೆ. ಇದರಿಂದ Google ಸೇವೆಗಳಲ್ಲಿ ವೇಗವಾಗಿ ಸರ್ಚ್ ಮಾಡಲು ಸಾಧ್ಯವಾಗಲಿದೆ.
ಇದಲ್ಲದೆ ಬಳಕೆದಾರರು ತಮ್ಮ ಫೈಲ್‌ಗಳನ್ನು Google ಡ್ರೈವ್‌ನಲ್ಲಿ ಶೀರ್ಷಿಕೆ, ಫೈಲ್ ವಿಷಯಗಳು ಮತ್ತು ಚಿತ್ರಗಳು, ಪಿಡಿಎಫ್‌ಗಳು ಅಥವಾ ಡ್ರೈವ್‌ನಲ್ಲಿ ಸಂಗ್ರಹವಾಗಿರುವ ಇತರ ಫೈಲ್‌ಗಳಲ್ಲಿ ಹುಡುಕುವ ಮೂಲಕ ಹುಡುಕಬಹುದು. ಈ ಹೊಸ ಗೂಗಲ್ ಡ್ರೈವ್ ಅಪ್ಲಿಕೇಶನ್ ಫೀಚರ್ಸ್‌ಗಳು ಗೂಗಲ್ ವರ್ಕ್‌ಪೇಸ್ ಎಸೆನ್ಷಿಯಲ್ಸ್, ಬಿಸಿನೆಸ್ ಸ್ಟಾರ್ಟರ್, ಬಿಸಿನೆಸ್ ಸ್ಟ್ಯಾಂಡರ್ಡ್, ಬಿಸಿನೆಸ್ ಪ್ಲಸ್, ಎಂಟರ್‌ಪ್ರೈಸ್ ಎಸೆನ್ಷಿಯಲ್ಸ್, ಎಂಟರ್‌ಪ್ರೈಸ್ ಸ್ಟ್ಯಾಂಡರ್ಡ್ ಮತ್ತು ಎಂಟರ್‌ಪ್ರೈಸ್ ಪ್ಲಸ್, ಜೊತೆಗೆ ಜಿ ಸೂಟ್ ಬೇಸಿಕ್, ಬಿಸಿನೆಸ್, ಎಜುಕೇಶನ್, ಗಳಲ್ಲಿ ಲಭ್ಯವಾಗಲಿದೆ.
This News Article is a Copy of GIZBOT
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm