ಬ್ರೇಕಿಂಗ್ ನ್ಯೂಸ್
04-12-20 01:22 pm Source: GIZBOT ಡಿಜಿಟಲ್ ಟೆಕ್
ಆಗ್ಮೆಂಟೆಡ್-ರಿಯಾಲಿಟಿ ಮೊಬೈಲ್ ಗೇಮಿಂಗ್ ಸಂಸ್ಥೆ ಕ್ರಿಕಿ, 'ಯಾತ್ರಾ' ಎಂಬ ಹೊಸ ಆಗ್ಮೆಂಟೆಡ್ ರಿಯಾಲಿಟಿ ಗೇಮ್ ಅನ್ನು ಜಿಯೋ ಸಹಯೋಗದೊಡನೆ ಭಾರತದಲ್ಲಿ ಪರಿಚಯಿಸಿದೆ. ಸೀರೀಸ್ ಎ ಫಂಡಿಂಗ್ ಸುತ್ತನ್ನೂ ಮುನ್ನಡೆಸಿದ ಜಿಯೋ, ಕ್ರಿಕಿ ಪಡೆದ ಒಟ್ಟು ಹೂಡಿಕೆಯನ್ನು 22 ಮಿಲಿಯನ್ ಡಾಲರುಗಳಿಗೆ ಕೊಂಡೊಯ್ದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕ್ರಿಕಿ ಸಂಸ್ಥಾಪಕರಾದ ಜಾಹ್ನವಿ ಮತ್ತು ಕೇತಕಿ ಶ್ರೀರಾಮ್, "ತಲ್ಲೀನಗೊಳಿಸುವ ರೀತಿಯಲ್ಲಿ ಸ್ಫೂರ್ತಿ ಮತ್ತು ವಾಸ್ತವವನ್ನು ಒಂದುಗೂಡಿಸುವುದು ಕ್ರಿಕಿಯೊಂದಿಗಿನ ನಮ್ಮ ದೃಷ್ಟಿಕೋನವಾಗಿದೆ. ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ, ನಿಮ್ಮ ಮೊಬೈಲ್ ಫೋನ್‌ನ ಕಿಟಕಿಯ ಮೂಲಕ ಫ್ಯಾಂಟಸಿ ಪ್ರಪಂಚಗಳನ್ನು ನೇರವಾಗಿ ನಿಮ್ಮ ಮನೆಗೆ ತರಲು ನಮಗೆ ಸಾಧ್ಯವಾಗುತ್ತದೆ." ಎಂದು ಹೇಳಿದ್ದಾರೆ.
ಕೇವಲ ತಮ್ಮ ಮೊಬೈಲ್ ಫೋನ್ ಕ್ಯಾಮೆರಾದೊಂದಿಗೆ, ಆಟಗಾರರು ಯಾತ್ರಾದ ಆಕ್ಷನ್-ಸಾಹಸಗಾಥೆಯನ್ನು ಪ್ರವೇಶಿಸಬಹುದು ಮತ್ತು ಮಾನ್‌ಸ್ಟರ್‌ಗಳ ಸೈನ್ಯವನ್ನು ಸೋಲಿಸುವ ಅನ್ವೇಷಣೆಗೆ ಸೇರಬಹುದು. ಬಿಲ್ಲು ಮತ್ತು ಬಾಣ, ಚಕ್ರ, ಮಿಂಚು ಮತ್ತು ಫೈರ್ ಬೋಲ್ಟ್‌ಗಳಂತಹ ಶಸ್ತ್ರಾಸ್ತ್ರಗಳನ್ನು ಬಳಸಿ, ಆಟಗಾರರು ವಿವಿಧ ಹಂತದ ಯುದ್ಧ ಮತ್ತು ಪಜಲ್ ಗೇಮ್‌ಗಳ ಮೂಲಕ ಹೋರಾಡಬಹುದು.
ಬಳಕೆದಾರರು ತಮ್ಮ ಆಟವನ್ನು ಪೂರ್ಣಗೊಳಿಸಿದ ನಂತರ, ವೈಯಕ್ತಿಕಗೊಳಿಸಿದ ವೀಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಇತರ ಬಳಕೆದಾರರು ಪೋಸ್ಟ್ ಮಾಡಿದ ಆಟದ ವೀಡಿಯೊಗಳನ್ನು ನೋಡಲು ವೀಡಿಯೊ ಫೀಡ್‌ಗಳು ಮತ್ತು ಡಿಜಿಟಲ್ ತರಬೇತಿ ಮೈದಾನ ಕೂಡ ಲಭ್ಯವಿದ್ದು, ಮತ್ತೆ ಆಡುವ ಮೊದಲು ಆಟಗಾರರು ಅಲ್ಲಿ ತಮ್ಮ ಬಿಲ್ಲು - ಬಾಣದ ಕೌಶಲವನ್ನು ಅಭ್ಯಾಸ ಮಾಡಬಹುದು. ಜಿಯೋ ಬಳಕೆದಾರರಿಗೆ ಈ ಕೆಳಗಿನ ವಿಶೇಷ ಸೌಲಭ್ಯಗಳು ದೊರಕುತ್ತಿವೆ:
3ಡಿ ಅವತಾರ್ ವೈಶಿಷ್ಟ್ಯ
ಹೆಚ್ಚುವರಿ ಶಸ್ತ್ರಾಸ್ತ್ರಗಳು ಮತ್ತು ಪವರ್‌ಗಳನ್ನು ಅನ್‌ಲಾಕ್ ಮಾಡಲು ಗೇಮ್‌ಪ್ಲೇ ಟೋಕನ್‌ಗಳು
ಗೇಮ್ ಲೆವೆಲ್‌ಗಳು
ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, "ಆಗ್ಮೆಂಟೆಡ್ ರಿಯಾಲಿಟಿಯನ್ನು ಅಂಗೀಕರಿಸಲು ಕ್ರಿಕಿ ಒಂದು ಇಡೀ ಪೀಳಿಗೆಯ ಭಾರತೀಯರನ್ನು ಪ್ರೇರೇಪಿಸಲಿದೆ. ಪ್ರಪಂಚದೆಲ್ಲೆಡೆಯ ಅತ್ಯುತ್ತಮ ಅನುಭವಗಳನ್ನು ಭಾರತಕ್ಕೆ ತರುವುದು ನಮ್ಮ ದೃಷ್ಟಿಕೋನವಾಗಿದೆ ಮತ್ತು ಯಾತ್ರಾದ ಪರಿಚಯವು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ.
ಆಗ್ಮೆಂಟೆಡ್ ರಿಯಾಲಿಟಿ ಗೇಮಿಂಗ್ ಬಳಕೆದಾರರನ್ನು ತನ್ನದೇ ಆದ ಜಗತ್ತಿನೊಳಕ್ಕೆ ಕರೆದೊಯ್ಯುತ್ತದೆ, ಮತ್ತು ಯಾತ್ರಾ ಮೂಲಕ ಆಗ್ಮೆಂಟೆಡ್ ರಿಯಾಲಿಟಿಯನ್ನು (AR) ಅನುಭವಿಸಲು ನಾವು ಜಿಯೋ ಮತ್ತು ಬೇರೆಲ್ಲ ಸೇವೆಗಳ ಪ್ರತಿಯೊಬ್ಬ ಬಳಕೆದಾರರನ್ನೂ ಆಹ್ವಾನಿಸುತ್ತೇವೆ." ಎಂದು ಹೇಳಿದ್ದಾರೆ. ಕ್ರಿಕಿ ಈಗ ಐಒಎಸ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಉಚಿತವಾಗಿ ಲಭ್ಯವಿದೆ.
This News Article is a Copy of GIZBOT
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm