ಬ್ರೇಕಿಂಗ್ ನ್ಯೂಸ್
22-05-23 07:49 pm Source: Gizbot ಡಿಜಿಟಲ್ ಟೆಕ್
ಆಪಲ್ ಕಂಪೆನಿಯ ಯಾವುದೇ ಡಿವೈಸ್ ಆದರೂ ಕಾಲಕ್ಕೆ ತಕ್ಕಂತೆ ವಿಶೇಷವಾದ ಫೀಚರ್ಸ್ ಅನ್ನು ಹೊಂದಿರುತ್ತವೆ. ಅದರಲ್ಲೂ ಐಫೋನ್‌ಗಳ ವಿಚಾರಕ್ಕೆ ಬರುವುದಾದರೆ ಈ ಫೋನ್‌ಗಳು ಮಾರುಕಟ್ಟೆಯಲ್ಲಿ ಸಂಚಲನವನ್ನೇ ಉಂಟು ಮಾಡಿವೆ.ಈ ಕಾರಣಕ್ಕೆ ಭಾರತದಲ್ಲಿ ಮುಂದಿನ ಐಫೋನ್ ಸರಣಿ ಜೋಡಣೆಗೆ ಎಲ್ಲಾ ಸಿದ್ಧತೆ ಸಹ ನಡೆದಿದೆ. ಈ ನಡುವೆ ಐಫೋನ್14,ಐಫೋನ್13,ಐಫೋನ್12 ಗಳಿಗೆ ಭಾರೀ ಬೇಡಿಕೆ ನಿರ್ಮಾಣ ಆಗಿದೆ.
ಹೌದು, ಆಪಲ್ ಇನ್ನೇನು ಕೆಲವು ತಿಂಗಳಲ್ಲಿ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ ಆಗಿರುವ ಐಫೋನ್ 15 ಅನ್ನು ಅನಾವರಣ ಮಾಡಲು ಮುಂದಾಗಿದೆ. ವಿಷಯ ಏನೆಂದರೆ ಕೆಲವು ವರದಿಗಳ ಪ್ರಕಾರ ಈ ಫೋನ್ ಸ್ವಲ್ಪ ದುಬಾರಿಯಾಗಲಿದೆ ಎನ್ನಲಾಗಿದೆ. ಈ ನಡುವೆ ನೀವು ಅತ್ಯುತ್ತಮ ಐಫೋನ್ ಖರೀದಿ ಮಾಡಬೇಕೆಂದುಕೊಂಡಿದ್ದು, ಐಫೋನ್ 14, ಐಫೋನ್ 13, ಐಫೋನ್ 12 ಗಳಲ್ಲಿ ಯಾವುದು ಉತ್ತಮ ಎಂಬ ಗೊಂದಲದಲ್ಲಿ ಇದ್ದರೆ ಇಲ್ಲಿದೆ ಪರಿಹಾರ.
ಈ ವರ್ಷ ಲಾಂಚ್ ಆಗಲಿದೆ ಐಫೋನ್ 15: ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಭಾರೀ ಕುತೂಹಲ ಉಂಟುಮಾಡಿರುವ ಐಫೋನ್ 15 ಈ ವರ್ಷದ ಒಳಗೆ ಲಾಂಚ್ ಆಗಲಿದೆ ಎನ್ನಲಾಗಿದೆಯಾದರೂ ಇದರ ಲಾಂಚ್ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಐಫೋನ್ 15ನ ಪೂರ್ವವರ್ತಿ ಆಗಿರುವ ಐಫೋನ್ 14 ಗಿಂತ ಹೆಚ್ಚು-ಅಪ್‌ಗ್ರೇಡ್ ಆವೃತ್ತಿಯಾಗಿರಲಿದೆ ಎಂದು ನಿರೀಕ್ಷಿಸಲಾಗಿದ್ದು, ಈ ಮೂಲಕ ಹೆಚ್ಚಿನ ಬೆಲೆ ಸಹ ಹೊಂದಿರಲಿದೆ ಎನ್ನಲಾಗಿದೆ. ಅಂದರೆ ಇದರ ಬೆಲೆ 80,000ರೂ.ಗಳಿಂದ ಆರಂಭ ಆಗಲಿದೆಯಂತೆ.
ಈ ವೇಳೆ ನೀವೇನಾದರೂ ಹೊಸ ಐಫೋನ್ ಮಾದರಿಯನ್ನು ಖರೀದಿಸಲು ಬಯಸುತ್ತಿದ್ದು, ಹೆಚ್ಚು ಬಜೆಟ್ ಇಲ್ಲದಿದ್ದರೆ, ಈಗಾಗಲೇ ಟ್ರೆಂಡಿಂಗ್‌ನಲ್ಲಿ ಇರುವ ಹಾಗೂ ಭಾರೀ ಬೇಡಿಕೆ ಇರುವ ಈ ಮೂರು ಐಫೋನ್‌ಗಳಲ್ಲಿ ಒಂದನ್ನು ಖರೀದಿ ಮಾಡಬಹುದು. ಅದಾಗ್ಯೂ ಈ ಮೂರು ಐಫೋನ್‌ಗಳಲ್ಲಿ ಯಾವುದು ಉತ್ತಮ ಎಂದು ನಿಮಗೆ ಗೊಂದಲ ಉಂಟಾಗಿದ್ದರೆ ಇದಕ್ಕೆ ನಾವು ಪರಿಹಾರ ಸೂಚಿಸುತ್ತೇವೆ.
ಐಫೋನ್ 14 vs ಐಫೋನ್ 13: ಐಫೋನ್ 14 ಫೋನ್ ಸದ್ಯಕ್ಕೆ ಭಾರತದಲ್ಲಿ ಲಭ್ಯವಿರುವ ಇತ್ತೀಚಿನ ಮತ್ತು ಅತ್ಯಂತ ದುಬಾರಿ ಐಫೋನ್ ಆಗಿದೆ. ಅಂದರೆ, ಈ ಫೋನ್ 80,000ರೂ.ಗಳಿಂದ ಪ್ರಾರಂಭವಾಗುತ್ತದೆ. ಆದರೆ, ಐಫೋನ್14 ಐಫೋನ್13 ನಂತೆಯೇ ಬಹುತೇಕ ಎಲ್ಲಾ ರೀತಿಯ ಫೀಚರ್ಸ್ ಹೊಂದಿದೆ. ಎರಡೂ ಫೋನ್‌ಗಳಲ್ಲೂ ಸಹ ಅದೇ ಚಿಪ್,ಕ್ಯಾಮೆರಾ ಮತ್ತು ವಿನ್ಯಾಸವನ್ನು ನೀಡಲಾಗಿದೆ.ಈ ಮೂಲಕ ನೀವು ಸ್ವಲ್ಪ ಬಜೆಟ್ ಸಮಸ್ಯೆ ಇದ್ದರೆ ಐಫೋನ್ 13 ಅನ್ನು ಖರೀದಿಸುವುದು ಉತ್ತಮ ಎನಿಸುತ್ತದೆ.
ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್, ಫ್ಲಿಪ್‌ಕಾರ್ಟ್, ಕ್ರೋಮಾ ಮತ್ತು ಇನ್ನೂ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಐಫೋನ್ 13 ಭಾರೀ ರಿಯಾಯಿತಿ ಪಡೆದುಕೊಂಡಿದೆ.ಜೊತೆಗೆ ವಿನಿಮಯ ಆಫರ್ ಸಹ ಲಭ್ಯ ವಿದ್ದು, ನೀವು ನಿಮ್ಮ ಹಳೆಯ ಆಂಡ್ರಾಯ್ಡ್ ಫೋನ್ ಅಥವಾ ಐಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಬಯಸಿದರೆ ಐಫೋನ್ 13 ಅನ್ನು ಕೊಂಡುಕೊಳ್ಳುವುದು ಹೆಚ್ಚು ಸೂಕ್ತ ಎನಿಸುತ್ತದೆ.
ನಮಗೆ ಯಾವುದೇ ಬಜೆಟ್ ಸಮಸ್ಯೆಯಿಲ್ಲ.ಆದರೆ,ಅತ್ಯುತ್ತಮ ಫೋನ್ ಹಾಗೂ ಇತ್ತೀಚಿನ ಆವೃತ್ತಿಯ ಫೋನ್ ಬೇಕು ಎಂದರೆ ಮಾತ್ರ ಐಫೋನ್14 ಖರೀದಿಸಿ.ಆದರೆ,ಐಫೋನ್13 ಗೆ ಇದನ್ನು ಹೋಲಿಕೆ ಮಾಡಿಕೊಂಡರೆ ಬದಲಾಗಿರೋದು ಹೆಚ್ಚುವರಿ ವರ್ಷಗಳ ಓಎಸ್ ನವೀಕರಣಗಳು ಮಾತ್ರ ಎಂಬುದು ಗೊತ್ತಿರಲಿ.ಯಾಕೆಂದರೆ ಆಪಲ್ ಸಾಮಾನ್ಯವಾಗಿ ಸುಮಾರು5-6ವರ್ಷಗಳ ಸಾಫ್ಟ್‌ವೇರ್ ನವೀಕರಣಗಳನ್ನು ನೀಡುತ್ತದೆ. ಐಫೋನ್ 14 ಅದರ ಪೂರ್ವವರ್ತಿಯಾದ ಐಫೋನ್ 13ಗೆ ಹೋಲಿಸಿದರೆ ಹೆಚ್ಚಿನ ವರ್ಷಗಳ ಓಎಸ್ ನವೀಕರಣಗಳನ್ನು ಪಡೆದಿದೆ.
ಈ ಎರಡೂ ಐಫೋನ್‌ಗಳು A15 ಬಯೋನಿಕ್ ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, 12 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾಗಳು, 6.1 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ ಮತ್ತು ಇನ್ನೂ ಹಲವು ಫೀಚರ್ಸ್ ಅನ್ನು ಪಡೆದುಕೊಂಡಿವೆ. ಈ ಮೂಲಕ ಇವೆರಡೂ ಸಹ ಒಂದೇ ರೀತಿಯಲ್ಲಿ ಕಾಣಿಸಿಕೊಂಡಿವೆ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಸೈಲಿಯಲ್ಲೂ ಸಹ ಯಾವುದೇ ಬದಲಾವಣೆ ಕಾಣಿಸುವುದಿಲ್ಲ.
ಇನ್ನು ಐಫೋನ್ 12 ವಿಚಾರಕ್ಕೆ ಬರೋಣ. ನೀವು ಕಡಿಮೆ ಬಜೆಟ್ ಹೊಂದಿದ್ದರೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್ ಫೀಚರ್ಸ್ ಹಾಗೂ ವಿನ್ಯಾಸದಲ್ಲಿ ಇತರೆ ರಾಜಿ ಮಾಡಿಕೊಂಡಿಲ್ಲ. ಜೊತೆಗೆ ಶಕ್ತಿಯುತ ಕಾರ್ಯಕ್ಷಮತೆಯೊಂದಿಗೆ ಐಫೋನ್13 ಮತ್ತು 14ರಂತೆಯೇ ಕಾಣುತ್ತದೆ. ಇದು A14 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, A15ಚಿಪ್‌ಗಿಂತ ಸ್ವಲ್ಪ ಕಡಿಮೆ ಶಕ್ತಿ ಹೊಂದಿದೆ. ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹಾಗೂ 6.1ಇಂಚಿನ ಡಿಸ್‌ಪ್ಲೇ ಆಯ್ಕೆ ಇದರಲ್ಲಿದೆ.
ಈ ಫೋನ್ ನ ಕೊರತೆಯ ವಿಷಯ ಏನೆಂದರೆ ಕಡಿಮೆ ಅವಧಿಯ ಓಎಸ್ ನವೀಕರಣ ಸೌಲಭ್ಯ. ಇನ್ನು ಐಫೋನ್ 12 ಅನ್ನು 2020 ರಲ್ಲಿ ಮತ್ತೆ ಲಾಂಚ್ ಮಾಡಲಾಗಿದ್ದು, ನೀವು ಸಾಮಾನ್ಯವಾಗಿ 2-3 ವರ್ಷಗಳಲ್ಲಿ ನಿಮ್ಮ ಫೋನ್ ಅನ್ನು ಬದಲಾಯಿಸುತ್ತೀರಿ ಎಂದಾದರೆ ಈ ಫೋನ್ ಉತ್ತಮ ಆಯ್ಕೆ ಎನ್ನಬಹುದು. ಇದರ ಆರಂಭಿಕ ಬೆಲೆ 59,900ರೂ.ಗಳಾಗಿದೆ. ಜೊತೆಗೆ ಈ ಫೋನ್ ಮೇಲೆ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಇತರೆ ಇ-ಕಾಮರ್ಸ್ ಸೈಟ್‌ಗಳಲ್ಲಿ ಡಿಸ್ಕೌಂಟ್ ಸಹ ಲಭ್ಯ ಇದೆ.
which is the best in iphone 14 iphone 13 iphone 12 to buy details.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am