ಬ್ರೇಕಿಂಗ್ ನ್ಯೂಸ್
18-05-23 08:21 pm Source: Gizbot ಡಿಜಿಟಲ್ ಟೆಕ್
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ HTC ಫೋನ್‌ಗಳು ಸಹ ಭಾರೀ ಸದ್ದು ಮಾಡುತ್ತಿದ್ದು, ಇವು ವಿವಿಧ ಸುಧಾರಿತ ಫೀಚರ್ಸ್‌ನೊಂದಿಗೆ ಆಕರ್ಷಕ ನೋಟವನ್ನು ಪಡೆದುಕೊಂಡಿವೆ. ಇದರ ನಡುವೆ HTC ಯು ಹೊಸ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದ್ದು, ಈ ಫೋನ್ 108MP ಮುಖ್ಯ ಕ್ಯಾಮೆರಾ ಆಯ್ಕೆಯೊಂದಿಗೆ ವಿಶೇಷ ಎನಿಸಿದೆ.
ಹೌದು, HTC ಇದೀಗ HTC U23 ಪ್ರೊ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದ್ದು, ಈ ಫೋನ್ ಸ್ನಾಪ್‌ಡ್ರಾಗನ್ 7 ಜನ್ 1 SoC ಪ್ರೊಸೆಸರ್ ಬಲ ಪಡೆದುಕೊಂಡಿದ್ದು, 12GB RAM ಆಯ್ಕೆ ಹೊಂದಿದೆ. ಜೊತೆಗೆ 30W ವೇಗದ ಚಾರ್ಜಿಂಗ್ ಹಾಗೂ 15W ವಾಯರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲ ಸಹ ಇದೆ. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿದುಕೊಳ್ಳಿ.
![]()
HTC U23 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ 6.7 ಇಂಚಿನ ಫುಲ್‌ಹೆಚ್‌ಡಿ+ OLED ಡಿಸ್‌ಪ್ಲೇ ಹೊಂದಿದ್ದು, 2400 x 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಜೊತೆಗೆ 20:9 ಆಕಾರ ಅನುಪಾತದೊಂದಿಗೆ 120Hz ರಿಫ್ರೆಶ್ ರೇಟ್ ಸೌಲಭ್ಯ ಇದರಲ್ಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಮೂಲಕ ರಕ್ಷಣೆ ಪಡೆದುಕೊಂಡಿದೆ.
HTC U23 ಪ್ರೊ ಪ್ರೊಸೆಸರ್ ಮಾಹಿತಿ: ಇದರ ಪ್ರಸೆಸರ್ ವಿಚಾರಕ್ಕೆ ಬರುವುದಾದರೆ ಈ ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 7 ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಅಡ್ರಿನೊ 644GPU ಬಲ ಪಡೆದುಕೊಂಡಿದೆ. ಜೊತೆಗೆ 8GB/12GB RAM ಹಾಗೂ 256GB ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದ್ದು, ಬಳಕೆದಾರರು ಇನ್ನೂ ಹೆಚ್ಚಿನ ಸ್ಟೋರೇಜ್ ಬೇಕು ಎಂದರೆ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸಿಕೊಡಲಾಗಿದೆ.

HTC U23 ಪ್ರೊ ಕ್ಯಾಮೆರಾ ರಚನೆ: ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 108 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ, 8ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹಾಗೂ 2ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್ ಮತ್ತು 5 ಮೆಗಾಪಿಕ್ಸೆಲ್‌ನ ಮ್ಯಾಕ್ರೋ ಕ್ಯಾಮರಾ ಆಯ್ಕೆ ಇದ್ದು, ಈ ಕ್ಯಾಮೆರಾ ಮೂಲಕ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು ಜೊತೆಗೆ LEDಫ್ಲಾಶ್ ಲೈಟ್ ಆಯ್ಕೆ ಸಹ ಇದೆ. ಇನ್ನು ಸೆಲ್ಫಿ ಉದ್ದೇಶಕ್ಕೆ 32ಮೆಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ.
HTC U23 ಪ್ರೊ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 4600mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದು 30W ವೈರ್ಡ್ ಫಾಸ್ಟ್ ಚಾರ್ಜಿಂಗ್, 15W ವಾಯರ್‌ಲೆಸ್ ಚಾರ್ಜಿಂಗ್ ಹಾಗೂ ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇನ್ನುಳಿದಂತೆ ಈ ಫೋನ್ 5G, ವೈ-ಫೈ 6 802.11 ax, ಬ್ಲೂಟೂತ್ ಆವೃತ್ತಿ 5.2, ಇಪಿಎಸ್, ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ. ಜೊತೆಗೆ IP67 ರೇಟಿಂಗ್ ಪಡೆದುಕೊಂಡಿರುವುದು ವಿಶೇಷ.

HTC U23 ಪ್ರೊ ಬೆಲೆ ಹಾಗೂ ಲಭ್ಯತೆ: ಈ ಫೋನ್‌ನ 8GB+256GB ವೇರಿಯಂಟ್‌ಗೆ TW$ 16,990ಬೆಲೆ ಇದೆ. ಅಂದರೆ ಭಾರತದಲ್ಲಿ ಇದಕ್ಕೆ ಸರಿಸುಮಾರು 45,535 ರೂ.ಗಳ ಬೆಲೆ ಇರಲಿದೆ. ಹಾಗೆಯೇ 12GB+256GB ವೇರಿಯಂಟ್‌ಗೆ ಸರಿಸುಮಾರು 48,215ರೂ.ಗಳ ಬೆಲೆ ಇರಲಿದೆ. ಈ ಫೋನ್ ಕಪ್ಪು ಮತ್ತು ಮುಕ್ಸರ್ ಬಿಳಿ ಬಣ್ಣಗಳಲ್ಲಿ ಕಂಡುಬರುತ್ತದೆ. ಈಗಾಗಲೇ ಈ ಫೋನ್ ತೈವಾನ್‌ನಲ್ಲಿ ಮಾರಾಟಕ್ಕೆ ಲಭ್ಯ ಇದ್ದು, ಇತರೆ ದೇಶಗಳಲ್ಲಿ ಎಂದಿನಿಂದ ಈ ಫೋನ್ ಲಭ್ಯ ಎಂಬುದನ್ನು ಕಾದುನೋಡಬೇಕು.
htc u23 pro with snapdragon 7 gen 1 launched.
29-07-26 09:54 pm
HK News Staffer
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
29-07-26 10:45 pm
HK News Desk
ಕೋರ್ಟ್ ಆವರಣದಲ್ಲಿ ವಕೀಲರಿಂದಲೇ ವ್ಯಕ್ತಿಯ ಮೇಲೆ ಹಲ್...
29-07-26 09:43 pm
Mangalore crime: ಆರೈಕೆ ನೆಪದಲ್ಲಿ ಬಂದ್ಲು ರಾಕ್ಷಸ...
29-07-26 06:51 pm
ಒಮಾನ್ನಲ್ಲಿ ಕೆಲಸದ ವೇಳೆ ದುರಂತ; ವಾಹನದ ಅಡಿಗೆ ಸಿಲ...
29-07-26 05:27 pm
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ, ನೀಟ್ ಪ್...
29-07-26 01:53 pm