ಬ್ರೇಕಿಂಗ್ ನ್ಯೂಸ್
10-05-23 07:31 pm Source: news18 ಡಿಜಿಟಲ್ ಟೆಕ್
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಸದೇ ಇರುವವರು ಬಹುಶಃ ಯಾರೂ ಇರಲಿಕ್ಕಿಲ್ಲ. ಹೌದು, ವಾಟ್ಸಾಪ್ ಅನ್ನೋದು ನಮ್ಮಲ್ಲಿ ಬಹಳಷ್ಟು ಜನರಿಗೆ ಸರಳವಾಗಿ, ವೇಗವಾಗಿ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ವಿಶ್ವಾದ್ಯಂತ ಶತಕೋಟಿ ಬಳಕೆದಾರರನ್ನು ಹೊಂದಿದೆ. ಆದಾಗ್ಯೂ ಈ ಅಪ್ಲಿಕೇಶನ್ ಬಳಕೆದಾರರಲ್ಲಿ ಅನೇಕರು ಮೋಸ ಹೋಗುತ್ತಿದ್ದಾರೆ. ಇತ್ತೀಚಿಗೆ ವಾಟ್ಸಾಪ್‌ನಿಂದ ಅನೇಕರು ಹಣವನ್ನು ಕಳೆದುಕೊಳ್ಳುತ್ತಿರುವ, ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಹೌದು, ವಾಟ್ಸಾಪ್‌ನಿಂದ ಹಣ ಲೂಟಿ ಮಾಡುವಂತಹ, ವಂಚಿಸುವಂತಹ ಹೊಸ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿ ವರದಿಯಾಗುತ್ತಿವೆ. ಇದರಲ್ಲಿ ಜನರು ನೀಲಿ ಬಣ್ಣದಿಂದ ಅಂತರಾಷ್ಟ್ರೀಯ ಸಂಖ್ಯೆಗಳಿಂದ ಕರೆಗಳನ್ನು ಪಡೆಯುತ್ತಿದ್ದಾರೆ. ಈ ಕರೆಗಳು ಇಥಿಯೋಪಿಯಾ (+251), ಮಲೇಷ್ಯಾ (+60), ಇಂಡೋನೇಷ್ಯಾ (+62), ಕೀನ್ಯಾ (+254), ವಿಯೆಟ್ನಾಂ (+84) ಮುಂತಾದ ದೇಶಗಳ ಕೋಡ್ ಹೊಂದಿರುತ್ತವೆ. ಆದಾಗ್ಯೂ, ಈ ಕರೆಗಳು ಬೇರೆ ದೇಶದ ಕೋಡ್‌ನಿಂದ ಪ್ರಾರಂಭವಾಗುವುದರಿಂದ ಕರೆಯ ಮೂಲವು ವಾಸ್ತವವಾಗಿ ಆ ದೇಶವಾಗಿದೆ ಎಂದು ಅರ್ಥವಲ್ಲ. ಅಂದಹಾಗೆ ವಾಟ್ಸಾಪ್ ಕರೆಗಳು ಇಂಟರ್ನೆಟ್ ಮೂಲಕ ರವಾನೆಯಾಗುವುದು ನಮಗೆಲ್ಲರಿಗೂ ತಿಳಿದಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ನಿಮ್ಮದೇ ನಗರಗಳಿಂದ ವಾಟ್ಸಾಪ್ ಕರೆಗಳಿಗಾಗಿ ಅಂತರರಾಷ್ಟ್ರೀಯ ಸಂಖ್ಯೆಗಳನ್ನು ಮಾರಾಟ ಮಾಡುವ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ, ಸೆಲ್ಯುಲಾರ್ ಕರೆಯಲ್ಲಿ ಉಂಟಾಗುವ ಯಾವುದೇ ಅಂತರರಾಷ್ಟ್ರೀಯ ಕರೆ ಶುಲ್ಕಗಳ ಬಗ್ಗೆ ಚಿಂತಿಸದೆ ಯಾರಾದರೂ ಅಂತಹ ಸಂಖ್ಯೆಗಳಿಂದ ಕರೆ ಮಾಡಬಹುದು.
ಉದ್ಯೋಗ ಆಫರ್ ವಂಚನೆ: ವಾಟ್ಸಾಪ್ ಸಂದೇಶಗಳ ಮೂಲಕ ಉದ್ಯೋಗ ಆಫರ್‌ಗಳನ್ನು ಸ್ವೀಕರಿಸುವ ವಂಚನೆಯ ಇನ್ನೊಂದು ವಿಧ ವರದಿಯಾಗುತ್ತಿದೆ. ಸ್ಕ್ಯಾಮರ್‌ಗಳು ಪ್ರತಿಷ್ಠಿತ ಕಂಪನಿಯಿಂದ ಬಂದವರಂತೆ ಪೋಸ್ ನೀಡುತ್ತಾರೆ. ಅವರು ನಿಮಗೆ ಅರೆಕಾಲಿಕ ಕೆಲಸವನ್ನು ನೀಡಬಹುದು ಎಂದು ಹೇಳುತ್ತಾರೆ. ಅಲ್ಲದೇ ಮನೆಯಿಂದಲೇ ಕೆಲಸ ಮಾಡಬಹುದು ಎಂಬಂತಹ ಸೌಕರ್ಯವನ್ನೂ ನೀಡುತ್ತೇವೆ ಎಂದು ಹೇಳಬಹುದು. ಇನ್ನೂ ಹೆಚ್ಚಿನ ಸಂದರ್ಭಗಳಲ್ಲಿ, ಸ್ಕ್ಯಾಮರ್‌ಗಳು ಮೊದಲು ಕೆಲಸವನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಣ್ಣ ಬಹುಮಾನವನ್ನು ನೀಡುವ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಬಳಕೆದಾರರು ತಮ್ಮ ಹಣವನ್ನು ಪಡೆದ ನಂತರ, ಅವರು ಸ್ಕ್ಯಾಮರ್‌ಗಳನ್ನು ನಂಬಲು ಪ್ರಾರಂಭಿಸುತ್ತಾರೆ. ಮುಂದೆ ಹೋದಂತೆ ಹೆಚ್ಚು-ದೊಡ್ಡ ಸ್ಕ್ಯಾಮ್‌ಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇದರಿಂದ ಅವರು ಹೆಚ್ಚು ಹೆಚ್ಚು ಹಣವನ್ನು ಕಳೆದುಕೊಳ್ಳಬಹುದು.
ಬೇರೆ ದೇಶದ ನಂಬರ್‌ಗಳಿಂದ ಕರೆ ಬಂದಾಗ ಏನು ಮಾಡಬೇಕು?: ನಿಮಗೆ ಯಾವುದೇ ಗೊತ್ತಿಲ್ಲದ ನಂಬರ್ ಅಥವಾ ಗೊತ್ತಿಲ್ಲದ ಅಂತರರಾಷ್ಟ್ರೀಯ ಕರೆಗಳಿಗೆ ಪ್ರತಿಕ್ರಿಯಿಸದಿರುವುದು ಉತ್ತಮ ಮಾರ್ಗವಾಗಿದೆ. ಈ ಕರೆಗಳು ಸಾಮಾನ್ಯವಾಗಿ ನೀಲಿ ಬಣ್ಣದಿಂದ ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ನೀವು ಹಠಾತ್ ಅಂತರಾಷ್ಟ್ರೀಯ ಸಂಖ್ಯೆಯಿಂದ ಕರೆಯನ್ನು ಪಡೆದರೆ, ಹೆಚ್ಚುವರಿ ಸುರಕ್ಷತೆಗಾಗಿ ಅದನ್ನು ತಿರಸ್ಕರಿಸುವುದು ಮತ್ತು ಸಂಖ್ಯೆಯನ್ನು ಬ್ಲಾಕ್ ಮಾಡುವುದು ಉತ್ತಮ. ಈ ಕರೆ ಮಾಡಿದಂತಹ ಸ್ಕ್ಯಾಮರ್‌ಗಳು ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆಯಲು ಪ್ರಯತ್ನಿಸುವುದರಿಂದ ಹಿಡಿದು ನಿಮ್ಮ ಹಣವನ್ನು ಕದಿಯುವವರೆಗೆ ಅನೇಕ ದುರುದ್ದೇಶಗಳನ್ನು ಹೊಂದಿರಬಹುದು. ಅಂದಹಾಗೆ, ನಮಗೆಲ್ಲ ತಿಳಿದಿರುವಂತೆ ಇಂಟರ್ನೆಟ್ ಎರಡು ಮುಖಗಳನ್ನು ಹೊಂದಿದೆ. ನೀವು ಆನ್‌ಲೈನ್‌ನಲ್ಲಿ ಯಾರೊಂದಿಗೆ ಸಂವಹನ ನಡೆಸುತ್ತೀರೋ ಅವರು ವಿಶ್ವಾಸಾರ್ಹ ವ್ಯಕ್ತಿ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಅಂತಹ ವಂಚನೆಗಳಿಂದ ದೂರವಿರುವುದು ಉತ್ತಮ.
whatsapp users beware messages and calls received from these numbers can be a big scam
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am