ಬ್ರೇಕಿಂಗ್ ನ್ಯೂಸ್
08-05-23 07:33 pm Source: news18 ಡಿಜಿಟಲ್ ಟೆಕ್
ನಮ್ಮಲ್ಲಿ ಈ ಮೊಬೈಲ್ ಪ್ರಿಯರು ಹೊಸ ಹೊಸ ಮೊಬೈಲ್ ಫೋನ್ ಗಳು ಯಾವಾಗ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತೆ ಅಂತ ತುಂಬಾನೇ ಕಾತುರತೆಯಿಂದ ಕಾಯುತ್ತಾ ಕುಳಿತಿರುತ್ತಾರೆ. ಈಗ ಮತ್ತೊಂದು ಮಧ್ಯಮ ಶ್ರೇಣಿಯ ಫೋನ್ ಬಿಡುಗಡೆಯ ದಿನಾಂಕವನ್ನು ಗೂಗಲ್ ಇಂಡಿಯಾ ತಿಳಿಸಿದೆ. ಹೊಸ ಪಿಕ್ಸೆಲ್ ಫೋನ್ ಮೇ 11 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಇದು ಫ್ಲಿಪ್ಕಾರ್ಟ್ನಲ್ಲಿ ಮೊಬೈಲ್ ಪ್ರಿಯರಿಗೆ ಖರೀದಿಗಾಗಿ ಲಭ್ಯವಿರುತ್ತದೆ ಎಂದು ಟೆಕ್ ದೈತ್ಯ ಗೂಗಲ್ ಇಂಡಿಯಾ ತನ್ನ ಟ್ವಿಟ್ಟರ್ ಖಾತೆಯ ಪುಟದಲ್ಲಿ ಘೋಷಿಸಿದೆ.
ಗೂಗಲ್ ಬಿಡುಗಡೆ ಮಾಡಲಿರುವ ಫೋನ್ ನ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ, ಆದರೆ ಟೀಸರ್ ಮತ್ತು ಬಿಡುಗಡೆಯ ಟೈಮ್ಲೈನ್ ನೋಡಿದ್ರೆ ಪಿಕ್ಸೆಲ್ 7ಎ ಫೋನ್ ಈ ತಿಂಗಳು ಭಾರತದಲ್ಲಿ ಲಾಂಚ್ ಆಗಲಿದೆ ಅಂತ ಬಲವಾಗಿ ಸೂಚಿಸುತ್ತಿದೆ. ಗೂಗಲ್ ಹಂಚಿಕೊಂಡ ಅಧಿಕೃತ ಫೋಟೋ ಪಿಕ್ಸೆಲ್ ಎ ಮತ್ತು ಫ್ಲ್ಯಾಗ್‌ಶಿಪ್ ಫೋನ್ ಗಳಲ್ಲಿ ನಾವು ನೋಡುತ್ತಿರುವ ವಿನ್ಯಾಸವನ್ನು ತೋರಿಸುತ್ತದೆ.
ಟೆಕ್ ದೈತ್ಯ, ಪಿಕ್ಸೆಲ್ 7ಎ ಅನ್ನು ಮೇ 10 ರಂದು ನಡೆಯಲಿರುವ ತನ್ನ ಮುಂಬರುವ ಗೂಗಲ್ ಐ/ ಒ ಈವೆಂಟ್ ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆಯಂತೆ. ಆದ್ದರಿಂದ, ಬಿಡುಗಡೆಯಾದ ಮರುದಿನವೇ ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಾಗುವಂತೆ ಮಾಡುವುದು ಕಂಪನಿಗೆ ಸಂಪೂರ್ಣವಾಗಿ ಅರ್ಥವಾದಂತಿದೆ. ಟೀಸರ್ ಇಮೇಜ್ ಪ್ರಕಾರ ಪಿಕ್ಸೆಲ್ 7ಎ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಹಿಂಭಾಗದ ಫಲಕವು ಸಮತಲ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರುತ್ತದೆ. ಇದು ನಾವು ಅನೇಕ ಪಿಕ್ಸೆಲ್ ಫೋನ್ ಗಳಲ್ಲಿ ನೋಡಿದ ವಿನ್ಯಾಸವಾಗಿದೆ. ಇದು ಪಿಕ್ಸೆಲ್ 6ಎ ಗೆ ತುಂಬಾನೇ ಹೋಲುತ್ತದೆ.
ಸದ್ಯಕ್ಕೆ, ಕಂಪನಿಯು ಬೇರೆ ಯಾವುದೇ ಫೋನ್ ಮೇಲೆ ಕೆಲಸ ಮಾಡುತ್ತಿಲ್ಲ ಮತ್ತು ಇದು ಪಿಕ್ಸೆಲ್ 8 ಸಿರೀಸ್ ಅನ್ನು ಅನಾವರಣಗೊಳಿಸುತ್ತದೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಈ ವರ್ಷದ ಕೊನೆಯಲ್ಲಿ ಬರಲಿದೆ. ಈ ಬ್ರ್ಯಾಂಡ್ ಸಾಮಾನ್ಯವಾಗಿ ತನ್ನ ಕೈಗೆಟುಕುವ ಪಿಕ್ಸೆಲ್ ಎ ಸೀರಿಸ್ ಫೋನ್ ಅನ್ನು ವರ್ಷದ ಮಧ್ಯದಲ್ಲಿ ಅನಾವರಣಗೊಳಿಸುತ್ತದೆ. ಪಿಕ್ಸೆಲ್ 7ಎ ಗೂಗಲ್ ನ ಟೆನ್ಸರ್ ಜಿ 2 ಚಿಪ್ಸೆಟ್ ಅನ್ನು ಬಳಸುತ್ತದೆ ಎಂದು ಇಲ್ಲಿಯವರೆಗೆ ಸೋರಿಕೆಯಾದ ಮಾಹಿತಿಗಳು ಸೂಚಿಸಿದ್ದವು. ಪಿಕ್ಸೆಲ್ 6 ಸೀರಿಸ್ ಫೋನ್ ನ ಬಿಡುಗಡೆಯೊಂದಿಗೆ ಕಂಪನಿಯು ತನ್ನ ಕಂಪನಿಯಲ್ಲಿ ತಯಾರಿಸಿದ ಚಿಪ್ಸೆಟ್ ಅನ್ನು ಬಳಸಲು ಪ್ರಾರಂಭಿಸಿತು. ಇದು ಎಲ್‌ಪಿಡಿಡಿಆರ್ 5 ರ‍್ಯಾಮ್ ಮತ್ತು ಯುಎಫ್ಎಸ್ 3.1 ಸ್ಟೋರೇಜ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
5ಜಿ ಫೋನ್ ಎಫ್ಎಚ್‌ಡಿ ಪ್ಲಸ್ ರೆಸಲ್ಯೂಶನ್ ನೊಂದಿಗೆ 6.1-ಇಂಚಿನ ಒಎಲ್ಇಡಿ ಸ್ಕ್ರೀನ್ ಅನ್ನು ಹೊಂದಿರುತ್ತದೆ. ಈ ಫೋನ್ 90 ಹರ್ಟ್ಜ್ ರಿಫ್ರೆಶ್ ರೇಟ್ ಅನ್ನು ಹೊಂದಿರುತ್ತದೆ, ಇದು ಪಿಕ್ಸೆಲ್ 6ಎ ನ 60 ಹರ್ಟ್ಜ್ ಸ್ಕ್ರೀನ್ ಗಿಂತಲೂ ಸ್ವಲ್ಪ ಅಪ್ಗ್ರೇಡ್ ಆಗಿರುತ್ತದೆ. ಅಷ್ಟೇ ಅಲ್ಲದೆ ಈ ಫೋನ್ 4,410 ಎಂಎಎಚ್ ಬ್ಯಾಟರಿಯನ್ನು ಹೊಂದಿರುತ್ತದೆ ಅಂತ ಸೋರಿಕೆಯಾದ ಮಾಹಿತಿಯಿಂದ ತಿಳಿದು ಬಂದಿದೆ. ಕಂಪನಿಯು 18 ವ್ಯಾಟ್ ವೈರ್ಡ್ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಬೆಂಬಲವನ್ನು ನೀಡುವುದನ್ನು ಮುಂದುವರಿಸಬಹುದು. 64 ಮೆಗಾ ಪಿಕ್ಸೆಲ್ ಸೋನಿ ಐಎಂಎಕ್ಸ್ 787 ಪ್ರೈಮರಿ ಸೆನ್ಸಾರ್ ಸೇರಿದಂತೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಬಹುದು.
google pixel 7a smartphone will be launched in the market in a few days.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm