ಬ್ರೇಕಿಂಗ್ ನ್ಯೂಸ್
04-03-23 07:01 pm Source: Vijayakarnataka ಡಿಜಿಟಲ್ ಟೆಕ್
Vivo ಕಂಪೆನಿ ಇತ್ತೀಚಿಗಷ್ಟೇ ತನ್ನ ಜನಪ್ರಿಯ V-ಸರಣಿಯಲ್ಲಿ ಹೊಸದಾಗಿ ಪರಿಚಯಿಸಿರುವ Vivo V27 Pro ಸ್ಮಾರ್ಟ್‌ಫೋನ್ ಮೇಲೆ ಪ್ರೀ-ಬುಕ್ಕಿಂಗ್ ಕೊಡುಗೆಯನ್ನು ಪ್ರಕಟಿಸಲಾಗಿದೆ. ಇದೇ ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಯಿಂದ ಮಾರಾಟಕ್ಕೆ ಬರಲಿರುವ Vivo V27 Pro ಸ್ಮಾರ್ಟ್‌ಫೋನನ್ನು ಪ್ರೀ-ಬುಕ್ ಮಾಡಲು Vivo ಕಂಪೆನಿ ಅವಕಾಶ ಒದಗಿಸಿದ್ದು, ಮೊದಲೇ Vivo V27 Pro ಸ್ಮಾರ್ಟ್‌ಫೋನ್ ಬುಕ್ಕಿಂಗ್ ಮಾಡುವ ಆನ್‌ಲೈನ್ ಗ್ರಾಹಕರಿಗೆ (HDFC, ICICI ಮತ್ತು Kotak Mahindra ಗ್ರಾಹಕರಿಗೆ) 3,000 ರೂ. ಫ್ಲಾಟ್ ರಿಯಾಯಿತಿ ಹಾಗೂ ಆಫ್‌ಲೈನ್ ಗ್ರಾಹಕರಿಗೆ(ICICI ಗ್ರಾಹಕರಿಗೆ) 3,500 ರೂ. ವರೆಗೆ ಕ್ಯಾಶ್‌ಬ್ಯಾಕ್ ಘೋಷಿಸಿದೆ. ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಹಾಗೂ ಕಂಪೆನಿಯ ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಗ್ರಾಹಕರು Vivo V27 Pro ಸ್ಮಾರ್ಟ್‌ಫೋನನ್ನು ಬ್ಯಾಂಕ್ ಕೊಡುಗೆಯ ಜೊತೆಗೆ ಪ್ರೀ -ಬುಕ್ ಮಾಡಬಹುದು ಎಂದು Vivo ಕಂಪೆನಿ ತಿಳಿಸಿದೆ.
ಇದೇ ಮಾರ್ಚ್ 1 ರಂದು Vivo ತನ್ನ ಬಹುನಿರೀಕ್ಷಿತ Vivo V27 ಸರಣಿಯಲ್ಲಿ VIVO V27 ಮತ್ತು Vivo V27 Pro ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ Vivo V27 ಸ್ಮಾರ್ಟ್ಫೋನ್ 8GB RAM + 128 GB ಮತ್ತು 12GB RAM + 256 GB ಎರಡು ಮಾದರಿಗಳಲ್ಲಿ ಕ್ರಮವಾಗಿ 32,999 ರೂ. ಮತ್ತು 36,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದೀಗ ಮೊದಲು ಪ್ರೀ-ಬುಕ್ ಮಾಡಲು ಲಭ್ಯವಿರುವ Vivo V27 Pro ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಮಾದರಿಗಳಲ್ಲಿ ಬಿಡುಗಡೆಯಾಗಿದ್ದು, ಇದರ 8GB + 128GB ಮಾದರಿಯು 37,999 ರೂ. 8GB + 256GB ಮಾದರಿಯು 39,999 ರೂ. ಮತ್ತು 12GB + 256GB ಮಾದರಿಯು 42,999 ಬೆಲೆಯಲ್ಲಿ ಬಿಡುಗಡೆಯಾಗಿದೆ. ಹಾಗಾದರೆ, ದೇಶದ ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೂತನ Vivo V27 ಮತ್ತು Vivo V27 Pro ಎರಡು ಸ್ಮಾರ್ಟ್‌ಫೋನ್‌ಗಳು ಹೇಗಿವೆ ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.
VIVO V27 ಮತ್ತು Vivo V27 Pro ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳು.
Vivo V27 ಸರಣಿಯಲ್ಲಿ ಬಿಡುಗಡೆಯಾಗಿರುವ ಹೊಸ Vivo V27 ಮತ್ತು Vivo V27 Pro ಎರಡೂ ಸ್ಮಾರ್ಟ್‌ಫೋನ್‌ಗಳು ಹಲವಾರು ವೈಶಿಷ್ಟ್ಯಗಳಲ್ಲಿ ಸಾಮ್ಯತೆಗಳನ್ನು ಹೊಂದಿವೆ. ಇದರಲ್ಲಿ Vivo V27 ಮತ್ತು Vivo V27 Pro ಎರಡೂ ಸ್ಮಾರ್ಟ್‌ಫೋನ್‌ಗಳು 3D ಕರ್ವ್ ಎಡ್ಜ್ ವಿನ್ಯಾಸದ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 1300 nits ಬ್ರೈಟ್‌ನೆಸ್ ಸಾಮರ್ಥ್ಯವನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲೂ ಸಹ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 50 ಮೆಗಾಪಿಕ್ಸೆಲ್ ಸೋನಿ IMX766V ಮುಖ್ಯ ಲೆನ್ಸ್, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಹೊಂದಿದ್ದರೆ, ಸೆಲ್ಫಿಗಳಿಗಾಗಿ, 50 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ.
ಬ್ಯಾಟರಿ ವಿಭಾಗದಲ್ಲಿ, Vivo V27 ಮತ್ತು Vivo V27 Pro ಎರಡೂ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್-ಎಂಜಿನ್ 66W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 4,600mAh ಸಾಮರ್ಥ್ಯದ ಬ್ಯಾಟರಿ ಹೊಂದಿವೆ .ಹಾಗೂ ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ Android 13 ಪ್ಲಾಟ್‌ಫಾರ್ಮ್ ಆಧರಿಸಿದ Funtouch OS13 ನಲ್ಲಿ ಕಾರ್ಯನಿರ್ವಹಿಸುತ್ತವೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿನ ವ್ಯತ್ಯಾಸ ಎಂದರೆ, Vivo V27 ಸ್ಮಾರ್ಟ್‌ಫೋನ್ ಮೊದಲ ಬಾರಿಗೆ MediaTek Dimensity 7200 5G ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಗಿದ್ದರೆ, Vivo V27 Pro ಸ್ಮಾರ್ಟ್‌ಫೋನಿನಲ್ಲಿ ಇದಕ್ಕಿಂತಲೂ ಶಕ್ತಿಯುತವಾದ ಮೀಡಿಯಾ ಟೆಕ್‌ನ ಹೈಪರ್‌ಇಂಜಿನ್ 5.0 ನೊಂದಿಗಿನ ಮುಖ ದರ್ಜೆಯ 4nm ಚಿಪ್ MediaTek Dimensity 8200 ಪ್ರೊಸೆಸರ್ ಅಳವಡಿಸಲಾಗಿದೆ.
ಇನ್ನುಳಿದಂತೆ, Vivo V27 ಮತ್ತು Vivo V27 Pro ಎರಡೂ ಸ್ಮಾರ್ಟ್‌ಫೋನ್‌ಗಳು LPDDR5 RAM ಮತ್ತು UFS 3.1 ಮೆಮೊರಿ ಜೊತೆಗೆ ವಿಸ್ತೃತ RAM 3.0 ತಂತ್ರಜ್ಞಾನವನ್ನು ಹೊಂದಿದ್ದು, ಇದು ವರ್ಚುವಲ್ RAM ಅನ್ನು 8 GB ವರೆಗೆ ಹೆಚ್ಚಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳ ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಡ್ಯುಯಲ್ ಸಿಮ್ ಬೆಂಬಲ, 5ಜಿ ಬೆಂಬಲ, ಬ್ಲೂಟೂತ್ 5.3, ಡ್ಯುಯಲ್-ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೈಪ್-ಸಿ ಜೊತೆಗೆ ಇತ್ತೀಚಿನ ಎಲ್ಲಾ ಸಂಪರ್ಕ ವೈಶಿಷ್ಟ್ಯಗಳಿವೆ. ಕಳೆದ ವಾರ ಬಿಡುಗಡೆಯಾದ Vivo Y100 ಸ್ಮಾರ್ಟ್‌ಫೋನಿನಂತೆಯೇ, ಈ Vivo V27 ಮತ್ತು Vivo V27 Pro ಎರಡೂ ಸ್ಮಾರ್ಟ್‌ಫೋನ್‌ಗಳು ಬಣ್ಣ ಬದಲಾಯಿಸುವ ಪ್ಯಾನಲ್ ಹೊಂದಿವೆ. ಈ ಫೋನ್‌ಗಳಲ್ಲಿ ಹಿಂಭಾಗದಲ್ಲಿರುವ ಪ್ಯಾನಲ್ ಬಣ್ಣವು ಸೂರ್ಯನ ಕಿರಣದ ಆಧಾರದ ಮೇಲೆ ಬದಲಾಗುತ್ತದೆ.
vivo v27 pro india price, specifications, availability and offers details.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 01:40 pm
Ocean Pearl
Forensic Expert Dr Mahabala Shetty, Dharmasth...
01-08-25 10:02 pm
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm