ಬ್ರೇಕಿಂಗ್ ನ್ಯೂಸ್
02-03-23 07:20 pm Source: Vijayakarnataka ಡಿಜಿಟಲ್ ಟೆಕ್
ZTE ಒಡೆತನದ ಜನಪ್ರಿಯ ಟೆಕ್ ಬ್ರ್ಯಾಂಡ್ Nubia ಜಾಗತಿಕ ಮಾರುಕಟ್ಟೆಗೆ ವಿಶ್ವದ ಮೊಟ್ಟಮೊದಲ 3D ಟ್ಯಾಬ್ಲೆಟ್ ಬಿಡುಗಡೆ ಮಾಡುವ ಮೂಲಕ ಗಮನಸೆಳೆದಿದೆ. ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2023 ಈವೆಂಟ್‌ನಲ್ಲಿ ಹಲವು ಅಚ್ಚರಿಯ ಡಿವೈಸ್‌ಗಳು ಅನಾವರಣಗೊಳ್ಳುತ್ತಿದ್ದು, ಈ ವೇಳೆ Nubia ಪರಿಚಯಿಸಿರುವ ವಿಶ್ವದ ಮೊದಲ ಗ್ಲಾಸ್ ಫ್ರೀ 3D ವಿಶ್ಯುಯಲ್ಸ್ Nubia Pad 3D ಪ್ರೀಮಿಯಂ ಟ್ಯಾಬ್ಲೆಟ್ ಎಲ್ಲರ ಗಮನಸೆಳೆದಿದೆ. ಹಾಗಾದರೆ, 2.560x1,600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 12.4-ಇಂಚಿನ ಡಿಸ್‌ಪ್ಲೇ, ಸ್ಪೋರ್ಟ್ಸ್ ಮತ್ತು ಡಾಲ್ಬಿ ಸೌಂಡ್ ಸಪೋರ್ಟ್ ಮತ್ತು Snapdragon 888 ಪ್ರೊಸೆಸರ್ ಸೇರಿದಂತೆ ಬಿಡುಗಡೆಯಾಗಿರುವ ವಿಶ್ವದ ಮೊದಲ ಗ್ಲಾಸ್ ಫ್ರೀ 3D ವಿಶ್ಯುಯಲ್ಸ್ Nubia Pad 3D ಟ್ಯಾಬ್ಲೆಟ್ ಹೇಗಿದೆ ನೋಡೋಣ ಬನ್ನಿ.
Nubia Pad 3D ಟ್ಯಾಬ್ಲೆಟ್ ವೈಶಿಷ್ಟ್ಯಗಳು ಯಾವುವು?
ವಿಶ್ವದ ಮೊದಲ ಗ್ಲಾಸ್ ಫ್ರೀ 3D ವಿಶ್ಯುಯಲ್ಸ್ ಪ್ರೀಮಿಯಂ ಟ್ಯಾಬ್ಲೆಟ್ Nubia Pad 3D ನಲ್ಲಿ 3D ಲೈಟ್‌ಫೀಲ್ಡ್ ತಂತ್ರಜ್ಞಾನವನ್ನು ನೀಡಲು ಕಂಪನಿಯು eyewear-free 3D ಡೆವಲಪರ್ ಲಿಯಾ ಇಂಕ್ ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಪಾಲುದಾರಿಕೆಯಲ್ಲಿ ತಯಾರಿಸಲಾಗಿರುವ ಈ ಟ್ಯಾಬ್ಲೆಟ್ 3D ಕಂಟೆಂಟ್ ಪ್ರದರ್ಶಿಸುವುದು ಮಾತ್ರವಲ್ಲದೇ, ರಿಯಲ್ ಟೈಂನಲ್ಲಿ 2D ಕಂಟೆಂಟ್ ಅನ್ನು 3D ಕಂಟೆಂಟ್ ಆಗಿ ಪರಿವರ್ತಿಸಬಹುದಾದ ಸಾಮರ್ಥ್ಯ ಹೊಂದಿದೆ. ಇದರಿಂದ 3D ಗೇಮ್ಸ್ ಆಡುವ ಜೊತೆಗೆ ಬಳಕೆದಾರರು ವೀಡಿಯೋವನ್ನು ಸಹ 3D ಕಂಟೆಂಟ್ ನಲ್ಲಿ ವೀಕ್ಷಿಸಬಹುದು. ಇಷ್ಟೇ ಅಲ್ಲದೇ, Nubia Pad 3D ಟ್ಯಾಬ್ಲೆಟ್‌ನಲ್ಲಿ ಗೇಮ್‌ಗಳು ಮತ್ತು ಲಿಯಾದಿಂದ ಶೈಕ್ಷಣಿಕ ಅಪ್ಲಿಕೇಶನ್ ಹೊಂದಿರುವ ಆಪ್ ಸ್ಟೋರ್ ಸಹ ಇದ್ದು, ಇದು ಗ್ಲಾಸ್ ಫ್ರೀ 3D ವಿಶ್ಯುಯಲ್ಸ್ ಅನುಭವವನ್ನು ಮತ್ತಷ್ಟು ಹೆಚ್ಚಿಸಲಿದೆ.
ಹಾರ್ಡ್‌ವೇರ್ ವಿಭಾಗದಲ್ಲಿ, Nubia Pad 3D ಟ್ಯಾಬ್ಲೆಟ್ 2.560x1,600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 12.4-ಇಂಚಿನ ಡಿಸ್‌ಪ್ಲೇ ಹೊಂದಿದೆ. 16:10 ರಚನೆಯ ಅನುಪಾತದಲ್ಲಿರುವ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಬೆಂಬಲ, DLB ಲೇಯರ್ ಮತ್ತು ಲೀಯಾದಿಂದ 3D ಲೈಟ್‌ಫೀಲ್ಡ್ ಮೋಡ್ ಟೆಕ್ನಾಲಜಿಯೊಂದಿಗೆ ರೂಪುಗೊಂಡಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, Adreno 660 GPU ಜೊತೆಗೆ Snapdragon 888 ಪ್ರೊಸೆಸರ್ ಹೊಂದಿರುವ ಈ Nubia Pad 3D ಟ್ಯಾಬ್ಲೆಟ್ 256GB ಸ್ಟೋರೇಜ್ ಹೊಂದಿದೆ. ಇನ್ನು ಈ ಟ್ಯಾಬ್ಲೆಟ್ ಸ್ಟೋರೇಜ್ ಅನ್ನು ಎಸ್‌ಡಿ ಕಾರ್ಡ್ ಸಹಾಯದಿಂದ 1TB ವರೆಗೆ ಹೆಚ್ಚಿಸಲು ಅವಕಾಶವಿದೆ. ಜೊತೆಗೆ, AI ಫೇಸ್ ಟ್ರ್ಯಾಕಿಂಗ್ ಮತ್ತು ಡಾಲ್ಬಿ ಸರೌಂಡ್ ಸೌಂಡ್ ಎಫೆಕ್ಟ್‌ನೊಂದಿಗೆ ನಾಲ್ಕು ಸಮ್ಮಿತೀಯ ಸ್ಪೀಕರ್‌ಗಳನ್ನು ಸಹ ಈ ಡಿವೈಸ್ ಒಳಗೊಂಡಿದೆ.
Nubia Pad 3D ಟ್ಯಾಬ್ಲೆಟ್‌ನಲ್ಲಿ ಎಲ್ಇಡಿ ಫ್ಲ್ಯಾಷ್ ನೊಂದಿಗೆ ಡ್ಯುಯಲ್ 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ, ಮುಂಭಾಗದಲ್ಲಿ ಡ್ಯುಯಲ್ 8 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. Nubia Pad 3D ಟ್ಯಾಬ್ಲೆಟ್ 9,070mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯವನ್ನು ಮಾತ್ರ ಇದೀಗ ಹೆಸರಿಸಲಾಗಿದೆ.
Nubia Pad 3D ಟ್ಯಾಬ್ಲೆಟ್ ಬೆಲೆ ಮತ್ತು ಲಭ್ಯತೆ.
2023ರ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ವಿಶ್ವದ ಮೊದಲ ಗ್ಲಾಸ್ ಫ್ರೀ 3D ವಿಶ್ಯುಯಲ್ಸ್ Nubia Pad 3D ಟ್ಯಾಬ್ಲೆಟ್ ಮಾರುಕಟ್ಟೆಗೆ ಪರಿಚಯವಾಗಿದ್ದರೂ ಸಹ ಈ ಟ್ಯಾಬ್ಲೆಟ್ ಬೆಲೆ ಎಷ್ಟು ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪೆನಿಯು ಬಹಿರಂಗಪಡಿಸಿಲ್ಲ. ಆದರೆ, ಈ Nubia Pad 3D ಟ್ಯಾಬ್ಲೆಟ್ ಇದೇ ಮಾರ್ಚ್ 23 ರಿಂದ ಕೆಲ ಆಯ್ದ ಮಾರುಕಟ್ಟೆಗಳಲ್ಲಿ ಪ್ರೀ ಬುಕಿಂಗ್‌ಗೆ ಲಭ್ಯವಾಗಲಿದ್ದು, ಏಪ್ರಿಲ್ 11 ರಿಂದ ಮಾರಾಟಕ್ಕೆ ಬರಲಿದೆ ಎಂದು ವರದಿಯಾಗಿದೆ. ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.
mwc 2023 nubia pad 3d tablet with glass-free 3d visuals launched.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am