ಬ್ರೇಕಿಂಗ್ ನ್ಯೂಸ್
18-02-23 09:42 pm Source: Vijayakarnataka ಡಿಜಿಟಲ್ ಟೆಕ್
ಕಳೆದ ವರ್ಷ ಚೀನಾದಲ್ಲಿ Xiaomi ಪರಿಚಯಿಸಿದ್ದ ಬಜೆಟ್ ಬೆಲೆಯ ಜನಪ್ರಿಯ Redmi 12C ಸ್ಮಾರ್ಟ್‌ಫೋನ್ ಇದೇ ಫೆಬ್ರವರಿಯಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಭರ್ಜರಿ ಸಿಹಿಸುದ್ದಿಯೊಂದು ದೊರೆತಿದೆ. ಇದೇ ಫೆಬ್ರವರಿ 28 ರಂದು ಆಯೋಜನೆಯಾಗಿರುವ MWC 2023 ಕಾರ್ಯಕ್ರಮಕ್ಕೂ ಮೊದಲೇ ದೇಶದಲ್ಲಿ Redmi 12C ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿರುವ ಬಗ್ಗೆ ಮಾಹಿತಿ ದೊರೆತಿದ್ದು, ಜನಪ್ರಿಯ ಟಿಪ್‌ಸ್ಟರ್ ಪರಾಸ್ ಗುಗ್ಲಾನಿ (@passionategeekz) ಅವರು ಇದೇ ಫೆಬ್ರವರಿ 26 ರಂದು ಜಾಗತಿಕವಾಗಿ Redmi 12C ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.!
ದೇಶದಲ್ಲಿ ಹಲವಾರು ಸರ್ಟಿಫಿಕೇಶನ್‌ಗಳನ್ನು ಪಡೆಯುವ ಮೂಲಕ Redmi 12C ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ಕುರಿತು ಈ ಮೊದಲೇ ಸೂಚನೆ ದೊರೆತಿತ್ತು. ಇದೀಗ ಪರಾಸ್ ಗುಗ್ಲಾನಿ ಅವರು ಹೇಳುವಂತೆ ಫೆಬ್ರವರಿ 26 ರಂದು Redmi 12C ಸ್ಮಾರ್ಟ್‌ಫೋನ್ ಬಿಡುಗಡೆಯಾಗಬಹುದು ಎನ್ನಲಾಗಿದೆ. ಈ Redmi 12C ಸ್ಮಾರ್ಟ್‌ಫೋನ್ ಚೀನಾದಲ್ಲಿ ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್, 5,000mAh ಬ್ಯಾಟರಿ ಮತ್ತು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆಟಪ್‌ನಂತಹ ವೈಶಿಷ್ಟ್ಯಗಳನ್ನು ಹೊತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿತ್ತು. ಇದೀಗ ದೇಶದ ಮಾರುಕಟ್ಟೆಯಲ್ಲಿ ಬಹುನಿರೀಕ್ಷೆ ಹುಟ್ಟಿಸಿದೆ.
Redmi 12C ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ಕಡಿಮೆ ಬೆಲೆಯಲ್ಲಿ ಪರಿಚಯಿಸಲಾಗಿರುವ ಹೊಸ Redmi 12C ಸ್ಮಾರ್ಟ್‌ಫೋನ್ ಟಿನ್ನಿ ಡಿವ್ ಡ್ರಾಪ್ ನಾಚ್ ಶೈಲಿಯ ಡಿಸ್‌ಪ್ಲೇ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನಿನಲ್ಲಿ 1650 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.71 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಅಳವಡಿಸಲಾಗಿದ್ದು, ಇದು 20:9 ಆಕಾರ ಅನುಪಾತದೊಂದಿಗೆ 500 nits ಬ್ರೈಟ್‌ನೆಸ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ, ಈ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ.
ಹುಡ್ ಅಡಿಯಲ್ಲಿ, ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್ ಹೊಂದಿರುವ ಈ Redmi 12C ಸ್ಮಾರ್ಟ್‌ಫೋನನ್ನು 4GB RAM + 128GB ಮತ್ತು 6GB + 128GB ಸಾಮರ್ಥ್ಯದ ಎರಡು ಸ್ಟೋರೇಜ್ ಮಾದರಿಗಳಲ್ಲಿ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಸಹಾಯದಿಂದ 512GB ವರೆಗೆ ವಿಸ್ತರಿಸಲು ಸಾಧ್ಯವಾಗುತ್ತದೆ. ಇಷ್ಟೇ ಅಲ್ಲದೇ, Mali-G52 MP2 GPU ಸಹ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹೊಸ Redmi 12C ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಭಾಗದ ಈ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸಾಮರ್ಥ್ಯವನ್ನು ಹೊಂದಿದೆ. ಪೋರ್ಟ್ರೇಟ್ ಮೋಡ್, ಟೈಮ್ ಲ್ಯಾಪ್ಸ್ ಫೋಟೋಗ್ರಫಿ ಮತ್ತು ನೈಟ್ ಸೀನ್ ಮೋಡ್ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಇದರ ಎರಡನೇ ಕ್ಯಾಮೆರಾ ಹಾಗೂ ಸೆಲ್ಫಿ ಕ್ಯಾಮೆರಾಗಳ ಸಾಮರ್ಥ್ಯದ ಬಗ್ಗೆ ತಿಳಿಸಿಲ್ಲ. ಆದರೆ, ಇದು ವರ್ಗದಲ್ಲೇ ಉತ್ತಮ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
Redmi 12C ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಡ್ಯುಯಲ್ 4G VOLTE, ವೈ-ಫೈ, ಬ್ಲೂಟೂತ್ v5.0, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ವೈಶಿಷ್ಟ್ಯಗಳಿವೆ. ಈ ಸಾಧನದಲ್ಲಿ ಹೈಬ್ರಿಡ್ ಸಿಮ್ ಸ್ಲಾಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ಗಳನ್ನು ಪರಿಚಯಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಈ Redmi 12C ಸ್ಮಾರ್ಟ್‌ಫೋನ್ 10W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.
Redmi 12C ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
ಶಿಯೋಮಿ ಪರಿಚಯಿಸಿರುವ ಹೊಸ Redmi 12C ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾದಲ್ಲಿ CNY 699 (ಭಾರತದಲ್ಲಿ ಅಂದಾಜು 8,400 ರೂ.) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದರ 4GB RAM + 128GB ಮಾದರಿಯು CNY 699 ( ಅಂದಾಜು 8,400 ರೂ.) ಬೆಲೆಯಲ್ಲಿ ಹಾಗೂ, 6GB + 128GB ಮಾದರಿಯು CNY 799 (ಅಂದಾಜು 9,600 ರೂ.) ಬೆಲೆಗಳಲ್ಲಿ ಬಿಡುಗಡೆಯಾಗಿವೆ. ಗ್ರಾಹಕರು ಶಾಡೋ ಬ್ಲ್ಯಾಕ್, ಸೀ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣಗಳ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನನ್ನು ಖರೀದಿಸಲು ಅವಕಾಶವಿದೆ.
redmi 12c launch date and specifications tipped ahead of global debut.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm