ಬ್ರೇಕಿಂಗ್ ನ್ಯೂಸ್
15-02-23 10:48 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳಲ್ಲಿ ಒಂದಾದ Fire-Boltt ದೇಶದಲ್ಲಿ ಸ್ಪೋರ್ಟ್ಸ್ ಪ್ರಿಯರಿಗಾಗಿ ನೀರು ಮತ್ತು ಧೂಳು ಹಾಗೂ ತುಕ್ಕು ನಿರೋಧ ಗುಣಲಕ್ಷಣಗಳನ್ನು ಹೊಂದಿರುವ ತನ್ನ ವಿನೂತನ 'Fire-Boltt Quantum' ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. ಬಹು-ಕ್ರೀಡಾ ವಿಧಾನಗಳೊಂದಿಗೆ ಬಂದಿರುವ ಈ ಹೊಸ ಸ್ಮಾರ್ಟ್‌ವಾಚ್ 240x240 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ HD ಡಿಸ್‌ಪ್ಲೇ, ಬ್ಲೂಟೂತ್ ವಿ 5.1 ಬೆಂಬಲ ಮತ್ತು 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳು ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಿಡುಗಡೆಯಾಗಿದ್ದು, ಗ್ರಾಹಕರಿಗೆ ಕೇವಲ 2,999 ರೂ. ಬೆಲೆಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಿದೆ. ಹಾಗಾದರೆ, ನೂತನ 'Fire-Boltt Quantum' ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಲಭ್ಯತೆ ಕುರಿತಂತೆ ಹೆಚ್ಚು ಮಾಹಿತಿ ತಿಳಿಯೋಣ ಬನ್ನಿ.
ಹೇಗಿದೆ ಹೊಸ Fire-Boltt Quantum' ಸ್ಮಾರ್ಟ್‌ವಾಚ್?
ಮೊದಲೇ ಹೇಳಿದಂತೆ, ಈ ಹೊಸ Fire-Boltt Quantum' ಸ್ಮಾರ್ಟ್‌ವಾಚ್ 240x240 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವಿರುವ 1.28 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಬ್ಲೂಟೂತ್ ಕಾಲಿಂಗ್ ಬೆಂಬಲಿಸುವ ಈ ಸ್ಮಾರ್ಟ್‌ಫೋಚ್ ಸ್ಕ್ರೀನ್ ಮೂಲಕ ಫೋನ್ ಕರೆಗಳನ್ನು ಮಾಡಲು, ಸ್ವೀಕರಿಸಲು, ಡಯಲ್ ಮಾಡಿದ ಸಂಖ್ಯೆಗಳನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ಡಯಲ್ ಮಾಡಿದ ಸಂಖ್ಯೆಗಳನ್ನು ಸೇವ್ ಮಾಡಲು ಆಯ್ಕೆ ಹೊಂದಿದೆ. ಆಂಡ್ರಾಯ್ಡ್ 5.0 ಮತ್ತು ಐಒಎಸ್ 9.0 ಅಥವಾ ಅದಕ್ಕಿಂತ ಹೆಚ್ಚಿನ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುವ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ವಿ 5.1 ಬೆಂಬಲ ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿಯಂತಹ AI ಧ್ವನಿ ಸಹಾಯಕಗಳನ್ನು ಸಹ ಬೆಂಬಲಿಸುತ್ತದೆ. ಸ್ಮಾರ್ಟ್‌ವಾಚ್‌ನ ಸುರಕ್ಷತೆಗಾಗಿ, ನೀರು ಮತ್ತು ಧೂಳು ಹಾಗೂ ತುಕ್ಕು ನಿರೋಧ ಗುಣಲಕ್ಷಣಗಳನ್ನು ಹೊಂದಿರುವ IP67 ರೇಟಿಂಗ್ ನೀಡಲಾಗಿದೆ.

Fire-Boltt Quantum' ಸ್ಮಾರ್ಟ್‌ವಾಚ್ ಕಾರ್ಯನಿರ್ವಹಣೆ ವೈಶಿಷ್ಟ್ಯಗಳನ್ನು ನೋಡುವುದಾದರೆ, ಈ ಸಾಧನದಲ್ಲಿ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲಿಪಿಂಗ್ ಟ್ರ್ಯಾಕ್ ವೈಶಿಷ್ಟ್ಯಗಳಿವೆ. ಹಲವಾರು ಕ್ರೀಡಾ ವಿಧಾನಗಳು ಮತ್ತು 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸುವ ಈ ಸ್ಮಾರ್ಟ್‌ವಾಚ್ ಗೆಸ್ಚರ್ ಕಂಟ್ರೋಲ್ ಬೆಂಬಲವನ್ನು ಸಹ ಹೊಂದಿದೆ. ಇದರಿಂದ ಸ್ಮಾರ್ಟ್‌ವಾಚ್ ಬಳಕೆದಾರರು ತಮ್ಮ ಮಣಿಕಟ್ಟನ್ನು ಮೇಲಕ್ಕೆ ಎತ್ತಿದ ತಕ್ಷಣವೇ ಇದರ ಡಿಸ್‌ಪ್ಲೇ ಆನ್ ಆಗಲಿದೆ. ಬ್ಯಾಟರಿ ವಿಭಾಗದಲ್ಲಿ, ಸಾಮಾನ್ಯ ಬಳಕೆಯಲ್ಲಿ ಏಳು ದಿನಗಳ ಬ್ಯಾಕ್‌ಅಪ್ ನೀಡುವ ಅಥವಾ ಬ್ಲೂಟೂತ್ ಕಾಲ್ ಆಕ್ಟಿವ್ ಮಾಡಿದ್ದರೆ ಎರಡು ದಿನಗಳ ಬ್ಯಾಕ್‌ಅಪ್ 350mAh ಸಾಮರ್ಥ್ಯದ ಬ್ಯಾಟರಿ ಇದ್ದು, ಇದು ಎರಡು ಗಂಟೆಗಳ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿಲಿದೆ. ಇನ್ನುಳಿದಂತೆ, ಮ್ಯೂಸಿಕ್ ಮತ್ತು ರಿಮೋಟ್ ಕ್ಯಾಮೆರಾ ಕಂಟ್ರೋಲ್, ಅಲಾರಾಂ, ಟೈಮರ್ ಮತ್ತು ಹವಾಮಾನ ಮುನ್ಸೂಚನೆ ಒದಗಿಸಲಿದೆ.

Fire-Boltt Quantum' ಸ್ಮಾರ್ಟ್‌ವಾಚ್ ಲಭ್ಯತೆ.
ಭಾರತದಲ್ಲಿ 2,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿರುವ ಹೊಸ Fire-Boltt Quantum' ಸ್ಮಾರ್ಟ್‌ವಾಚ್ ಕಂಪೆನಿ ಅಧಿಕೃತ ಫೈರ್-ಬೋಲ್ಟ್ ಮತ್ತು ಅಮೆಜಾನ್ ಇಂಡಿಯಾ ವೆಬ್‌ಸೈಟ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಗ್ರಾಹಕರು ಕಪ್ಪು, ಹಸಿರು, ನೀಲಿ ಹಾಗೂ ಕಪ್ಪು ಮತ್ತು ಕೆಂಪು ಬಣ್ಣದ ನಾಲ್ಕು ಆಯ್ಕೆಗಳಲ್ಲಿ Fire-Boltt Quantum' ಸ್ಮಾರ್ಟ್‌ವಾಚ್ ಸಾಧನವನ್ನು ಖರೀದಿಸಬಹುದು.
Fire-Boltt Quantum Smartwatch With Bluetooth Calling Launched In India.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm