ಬ್ರೇಕಿಂಗ್ ನ್ಯೂಸ್
10-02-23 07:14 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Oppo ದೇಶದಲ್ಲಿ ಇತ್ತೀಚಿಗಷ್ಟೇ ಪರಿಚಯಿಸಿರುವ ಹೊಸ ಮಿಡ್ ರೇಂಜರ್ 'Oppo Reno 8T' ಸ್ಮಾರ್ಟ್‌ಫೋನ್ ಇಂದು ಮೊಟ್ಟ ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ದೇಶದಲ್ಲಿ ಏಕೈಕ 8GB + 128GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆಯಾಗಿರುವ Oppo Reno 8T ಸ್ಮಾರ್ಟ್‌ಫೋನನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಕಂಪೆನಿಯ ಅಧಿಕೃತ ಸ್ಟೋರ್‌ಗಳಲ್ಲಿ ಇಂದು ಮಾರಾಟಕ್ಕೆ ತರಲಾಗುತ್ತಿದ್ದು, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಯೆಸ್ ಬ್ಯಾಂಕ್ ಅಥವಾ ಎಸ್‌ಬಿಐ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಶೇಕಡಾ 10 ರಷ್ಟು ರಿಯಾಯಿತಿ ಜೊತೆಗೆ 3000 ರೂ. ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್‌ನಲ್ಲಿ 'Oppo Reno 8T' ಸ್ಮಾರ್ಟ್‌ಫೋನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ನೀವು ರಿಟೇಲ್ ಸ್ಟೋರ್‌ಗಳಲ್ಲಿ ಈ ಸ್ಮಾರ್ಟ್‌ಫೋನನ್ನು ಖರೀದಿಸಲು ಇಚ್ಚಿಸಿದರೆ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಒನ್ ಕಾರ್ಡ್‌ಗಳಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ಜೊತೆಗೆ 6 ತಿಂಗಳವರೆಗೆ ನೋ-ಕಾಸ್ಟ್ ಇಎಂಐ ಸಹ ಲಭ್ಯವಾಗಲಿದೆ
'Oppo Reno 8T' ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ದೇಶದಲ್ಲಿ ಪರಿಚಯಗೊಂಡಿರುವ ನೂತನ OPPO Reno 8T 5G ಸ್ಮಾರ್ಟ್‌ಫೋನ್ 6.7 ಇಂಚಿನ ಹೆಚ್‌ಡಿ+ ಮೈಕ್ರೋ-ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ ಜೊತೆಗೆ ಡ್ರ್ಯಾಗನ್‌ಟ್ರೈಲ್-ಸ್ಟಾರ್2 ಪ್ರೊಟೆಕ್ಷನ್ ಹೊಂದಿರುವ ಈ ಡಿಸ್‌ಪ್ಲೇಯು 93 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ-1.07 ಬಿಲಿಯನ್ ಬಣ್ಣಗಳನ್ನು ಬೆಂಬಲಿಸುವ 10-ಬಿಟ್ ವೈಶಿಷ್ಟ್ಯವನ್ನು ಹೊಂದಿದೆ. ಇದು ಸಾಂಪ್ರದಾಯಿಕ 8-ಬಿಟ್ ಡಿಸ್‌ಪ್ಲೇಗಳಿಗಿಂತ 64 ಪಟ್ಟು ಹೆಚ್ಚು ಬಣ್ಣಗಳನ್ನು ಬೆಂಬಲಿಸುತ್ತದೆ. ಇದರ ಜೊತೆಗೆ ವೈಡ್‌ವೈನ್ L1 ಪ್ರಮಾಣೀಕರಣದ ಅನುಭವದೊಂದಿಗೆ ಡಿಸ್‌ಪ್ಲೇ ಸೌಂದರ್ಯವನ್ನು ಸಮತೋಲನಗೊಳಿಸುವಂತಹ ವೈಶಿಷ್ಟ್ಯ ಇದರಲ್ಲಿದೆ. ಹುಡ್ ಅಡಿಯಲ್ಲಿ, 8GB RAM ಮತ್ತು 128GB ಸ್ಟೋರೇಜ್ ಜೊತೆಗೆ ಜೋಡಿಸಲಾಗಿರುವ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 13 ಆಧಾರಿತ ColorOS 13 ನಲ್ಲಿ ಕಾರ್ಯನಿರ್ವಹಿಸಲಿದೆ, ಈ ಹೊಸ OPPO Reno 8T 5G ಸ್ಮಾರ್ಟ್‌ಫೋನ್ 8GB ವರೆಗೆ ಹೆಚ್ಚುವರಿ ವರ್ಚುವಲ್ RAM ಮತ್ತು 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಸಾಮರ್ಥ್ಯಗಳನ್ನು ಸಹ ಹೊಂದಿದೆ.

OPPO Reno 8T 5G ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯ ಎಂದೇ ಹೇಳಲಾಗುತ್ತಿರುವ ಬ್ಯಾಟರಿ ವಿಭಾಗದಲ್ಲಿ, 67W SuperVOOCTM ವೇಗದ ಚಾರ್ಜಿಂಗ್ ತಂತ್ರಜ್ಞಾನ ಮತ್ತು ಬ್ಯಾಟರಿ ಹೆಲ್ತ್ ಇಂಜಿನ್‌ನೊಂದಿಗೆ ಜೋಡಿಸಲಾದ 4,800mAh ಸಾಮರ್ಥ್ಯದ ಬ್ಯಾಟರಿ ಈ ಸ್ಮಾರ್ಟ್‌ಫೋನಿನಲ್ಲಿದೆ. ಇದು ಕೇವಲ 45 ನಿಮಿಷಗಳಲ್ಲಿ 0 ರಿಂದ 100% ಬ್ಯಾಟರಿಯನ್ನು ಚಾರ್ಜ್ ಮಾಡಲಿದೆ ಎಂದು ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೇ, OPPO Reno 8T 5G ಸ್ಮಾರ್ಟ್‌ಫೋನಿನಲ್ಲಿರುವ ಕಂಪೆನಿಯ ಬ್ಯಾಟರಿ ಹೆಲ್ತ್ ಇಂಜಿನ್ ತಂತ್ರಜ್ಞಾನವು ಸ್ಮಾರ್ಟ್‌ಫೋನಿನ ಬ್ಯಾಟರಿ ಕಾರ್ಯಕ್ಷಮತೆಯಲ್ಲಿ ಯಾವುದೇ ಕುಸಿತವಿಲ್ಲದೆ ಕನಿಷ್ಠ ನಾಲ್ಕು ವರ್ಷಗಳವರೆಗೆ ಸ್ಟರ್ಲಿಂಗ್ ಕಾರ್ಯಕ್ಷಮತೆ ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ಫೋನಿನಲ್ಲಿರುವ ಮತ್ತೊಂದು ಪ್ರಮುಖ ವೈಶಿಷ್ಟ್ಯವನ್ನು ನಾವು ಗಮನಿಸುವುದಾದರೆ, OPPO ತನ್ನ ColorOS 13 ನ ಡೈನಾಮಿಕ್ ಕಂಪ್ಯೂಟಿಂಗ್ ಇಂಜಿನ್‌ನೊಂದಿಗೆ ಸಾಧನದ ಕಾರ್ಯಕ್ಷಮತೆಯನ್ನು ವರ್ಧಿಸಿದ್ದು, ಈ ಸ್ಮಾರ್ಟ್‌ಫೋನ್ 18 ಅಪ್ಲಿಕೇಶನ್‌ಗಳವರೆಗೆ ವಿಳಂಬವಿಲ್ಲದೆ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ.
Oppo Reno 8t First Sale Today Check Price, Deals And Features.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am