ಬ್ರೇಕಿಂಗ್ ನ್ಯೂಸ್
            
                        02-01-23 08:27 pm Source: Vijayakarnataka ಡಿಜಿಟಲ್ ಟೆಕ್
            ಇತ್ತೀಚಿಗಷ್ಟೇ 'ಆಪಲ್ ವಾಚ್ ಅಲ್ಟ್ರಾ' ಸಾಧನದ ರೀತಿಯದ್ದೇ ಗ್ಲಾಡಿಯೇಟರ್ ಹೆಸರಿನ ಸ್ಮಾರ್ಟ್‌ವಾಚ್ ಒಂದನ್ನು ಪರಿಚಯಿಸಿ ಗಮನಸೆಳೆದಿದ್ದ ಜನಪ್ರಿಯ ವೆರಿಯಬಲ್ ಟೆಕ್ ಬ್ರ್ಯಾಂಡ್ 'ಫೈರ್-ಬೋಲ್ಟ್' ಭಾರತದಲ್ಲಿ ರಾಕೆಟ್ (Fire-Boltt Rocket) ಎಂಬ ಮತ್ತೊಂದು ಕೈಗೆಟುಕುವ ಸ್ಮಾರ್ಟ್‌ವಾಚ್ ಸಾಧನವನ್ನು ಇಂದು ಪರಿಚಯಿಸಿದೆ. ಹೊಸ ವರ್ಷದಲ್ಲಿ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವ ಸಲುವಾಗಿ, ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್, ಸ್ಲಿಪ್ ಟ್ರ್ಯಾಕರ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ Fire-Boltt Rocket ಸ್ಮಾರ್ಟ್ ಸಾಧನವನ್ನು ದೇಶದಲ್ಲಿ ಅತ್ಯುತ್ತಮ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹಾಗಾದರೆ, ಹೊಸ Fire-Boltt Rocket ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಬೆಲೆ ಎಷ್ಟು ನೋಡೋಣ ಬನ್ನಿ.
Fire-Boltt Rocket ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು.
ನೂತನ Fire-Boltt Rocket ಸ್ಮಾರ್ಟ್‌ವಾಚ್ ಸಾಧನವು 240×240 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ 1.3-ಇಂಚಿನ ವೃತ್ತಾಕಾರದ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಇದು ಹಲವು ಮಾದರಿಯ ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಆರೋಗ್ಯದ ದೃಷ್ಟಿಯಿಂದ, ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್, ಸ್ಲಿಪಿಂಗ್ ಟ್ರ್ಯಾಕರ್ ಮತ್ತು ಸ್ತ್ರೀ ಸೈಕಲ್ ಮಾನಿಟರ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ವಿವಿಧ ಸ್ಪೋರ್ಟ್ಸ್ ಮೋಡ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಇದರಲ್ಲಿ ಸ್ಟೆಪ್ಸ್, ಡಿಸ್ಟೆನ್ಸ್, ಕ್ಯಾಲೂರಿ ಬರ್ನಿಂಗ್ಸ್ ಅಳೆಯುವುದಕ್ಕೆ ಸಹ ಅವಕಾಶವಿದೆ. ಹಾಗೆಯೇ, ಈ ಸ್ಮಾರ್ಟ್‌ವಾಚ್ IP67-ಪ್ರಮಾಣೀಕೃತ ವಾಟರ್ ರೆಸಿಸ್ಟೆನ್ಸಿ ಸಾಮರ್ಥ್ಯವನ್ನು ಹೊಂದಿದೆ.
![]()
ಈ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಸಾಧನದಲ್ಲಿ ಇನ್‌ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್‌ಗಳನ್ನು ನೀಡಲಾಗಿದೆ. ಇದರಲ್ಲಿರುವ ಬ್ಲೂಟೂತ್ ಕಾಲಿಂಗ್ ಫೀಚರ್ ಸಹಾಯದಿಂದ ಫೋನ್ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು ಈ ಸ್ಮಾರ್ಟ್‌ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ವಾಯಿಸ್ ಅಸಿಸ್ಟೆಂಟ್‌ಗಳನ್ನು ಬೆಂಬಲಿಸಲಿದೆ. ಇದರಿಂದ ಬಳಕೆದಾರರು ಸುಲಭವಾಗಿ ನೋಟಿಫಿಕೇಶನ್ ಆಲರ್ಟ್ ಪಡೆಯಬಹುದು ಎಂದು ಹೇಳಲಾಗಿದೆ. ಇಷ್ಟೇಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‌ವಾಚ್ ಹೊಂದಿರುವ ಬ್ಯಾಟರಿ ಶಕ್ತಿ ಕುರಿತಂತೆ ಕಂಪೆನಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದು 7 ದಿನಗಳ ಬ್ಯಾಟರಿ ಬಾಳಿಕೆ ನೀಡಲಿದೆ ಎಂದು ಹೇಳಲಾಗಿದೆ.

Fire-Boltt Rocket ಸ್ಮಾರ್ಟ್‌ವಾಚ್ ಬೆಲೆ?
ಭಾರತದಲ್ಲಿ ಇಂದು ಬಿಡುಗಡೆಯಾಗಿರುವ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಸಾಧನವನ್ನು 2,499 ರೂ.ಗಳ ಅಧಿಕೃತ ಬೆಲೆಯಲ್ಲಿ ಪರಿಚಯಿಸಲಾಗಿದೆ. ಗ್ರಾಹಕರು ಕಪ್ಪು, ಸಿಲ್ವರ್ ಗ್ರೇ, ಷಾಂಪೇನ್ ಗೋಲ್ಡ್ ಮತ್ತು ಗೋಲ್ಡ್ ಪಿಂಕ್ ನಂತಹ ಹಲವು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿರುವ ಈ ಹೊಸ ಸ್ಮಾರ್ಟ್‌ವಾಚ್ ಸಾಧನವನ್ನು ಇದೀಗ ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಇಡಲಾಗಿದೆ. ನೀವು ಕೈಗೆಟುಕುವ ಬೆಲೆಯಲ್ಲಿ ಬ್ಲೂಟೂತ್ ಕಾಲಿಂಗ್ ಆಕ್ಟಿವ್ ಸ್ಮಾರ್ಟ್‌ವಾಚ್ ಒಂದನ್ನು ಖರೀದಿಸಲು ಇಚ್ಚಿಸಿದರೆ, ಪೆಬಲ್ ಫ್ರಾಸ್ಟ್ ಮತ್ತು ನಾಯ್ಸ್ ಐಕಾನ್ 2 ಸ್ಮಾರ್ಟ್‌ವಾಚ್ ಸಾಧನಗಳ ಜೊತೆ ಸ್ಪರ್ಧಿಸಲು ಬಂದಿರುವ ಈ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಸಾಧನವು ನಿಮ್ಮ ಮೊದಲ ಆಯ್ಕೆಯಾಗಬಹುದು.
            
            
            Affordable Fire-Boltt Rocket Smartwatch Launched In India.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm