ಬ್ರೇಕಿಂಗ್ ನ್ಯೂಸ್
08-12-22 06:37 pm Source: Drive Spark ಡಿಜಿಟಲ್ ಟೆಕ್
ಬೆಂಗಳೂರು ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡುವಾಗ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸರು ಹೇಳುತ್ತಲೇ ಇರುತ್ತಾರೆ. ಆದರೂ ಡೋಂಡ್ ಕೇರ್ ಎಂಬಂತೆ ಬೈಕ್, ಕಾರು ಹಾಗೂ ಇನ್ನಿತರ ವಾಹನಗಳ ಸವಾರರು ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಯದ್ವಾತದ್ವ ವಾಹನಗಳನ್ನು ಸಂಚರಿಸುತ್ತಾರೆ.
ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಇರುದರಿಂದ ಗಮ್ಯ ಸ್ಥಳಕ್ಕೆ ಅಥವಾ ಕಚೇರಿಗಳಿಗೆ ಸಮಯಕ್ಕೆ ತೆರಳಲು ಕೆಲವರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಇದೀಗ ಬೆಂಗಳೂರು ನಗರ ಸಂಚಾರ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ಕಣ್ಗಾವಲು ಇಡಲು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಅನ್ನು ಪ್ರಾರಂಭಿಸಲು ಮುಂದಾಗಿದೆ. ಈ ಭಾಗದಲ್ಲಿ ಸಂಚಾರ ಪೊಲೀಸರು ಇಲ್ಲವೆಂದು ನಿಯಮ ಉಲ್ಲಂಘಿಘಿಸಿದರೆ ದಂಡ ಕಟ್ಟಿಟ್ಟ ಬುತ್ತಿ.
ನಗರದ ಸಂಚಾರ ವ್ಯವಸ್ಥೆಯ ಸುಧಾರಣೆಗೆ ಪೊಲೀಸ್ ಇಲಾಖೆಯು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಲೇ ಬಂದಿದೆ. ಪ್ರಮುಖ 50 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಪೊಲೀಸರ ಸಹಾಯವಿಲ್ಲದೆ ಸಂಚಾರ ಉಲ್ಲಂಘನೆಯನ್ನು ಐಟಿಎಂಎಸ್ ಪತ್ತೆಹಚ್ಚುತ್ತದೆ. 50 ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿರುವ 250 ಎಎನ್‌ಪಿಆರ್ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನಯನ್ನು ಸೆರೆಹಿಡಿಯಲಾಗುತ್ತದೆ. ಆಟೋಮ್ಯಾಟಿಕ್ ಆಗಿ ನೋಟಿಸ್ ಅನ್ನು ರಚಿಸುತ್ತದೆ. ಇದಲ್ಲದೇ ಚಲನ್ ಅನ್ನು ಉಲ್ಲಂಘಿಸುವವರಿಗೆ SMS ಕೂಡ ಕಳುಹಿಸುವ ಕೆಲಸವನ್ನು ಮಾಡುತ್ತದೆ.
ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್, ಅತಿವೇಗ, ಸಿಗ್ನಲ್ ಉಲ್ಲಂಘನೆ, ಸ್ಟಾಪ್ ಲೇನ್ ಉಲ್ಲಂಘನೆ, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಉಲ್ಲಂಘನೆ, ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತು ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವುದು ಮುಂತಾದ ಅನೇಕ ಸಂಚಾರ ಉಲ್ಲಂಘನೆಗಳನ್ನು ಐಟಿಎಂಎಸ್ ಪತ್ತೆ ಮಾಡಲಿದೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು ಪೊಲೀಸರ ಕಣ್ತಪ್ಪಿಸಿ ಪಾರಾದರೂ ಈ ಹೈಟೆಕ್ ಕ್ಯಾಮೆರಾಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ಐಟಿಎಂಎಸ್ ವ್ಯವಸ್ಥೆಯನ್ನು 50 ಜಂಕ್ಷನ್‌ಗಳಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಯಾವುದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಬೇಡಿ. ಉದ್ದೇಶವು ದಂಡವನ್ನು ಸಂಗ್ರಹಿಸುವುದು ಅಲ್ಲ. ಇದು ಸಂಪರ್ಕರಹಿತವಾಗಿದೆ, ವಾರದ 7 ದಿನವೂ ಈ ವ್ಯವಸ್ಥೆ ಸಕ್ರಿಯವಾಗಿರರುತ್ತದೆ. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಘಿಸಿ ಪೊಲೀಸ್ ಸಿಬ್ಬಂದಿಯಿಂದ ತಪ್ಪಿಸಿಕೊಂಡರೂ ಎಎನ್‌ಪಿಆರ್ ಕ್ಯಾಮೆರಾಗಳಿಂದ ಪಾರಾಗಲು ಸಾಧ್ಯವಿಲ್ಲ ಉತ್ತಮ ರಸ್ತೆ ನಡವಳಿಕೆ ಮತ್ತು ಅನುಸರಣೆಯನ್ನು ಹೆಚ್ಚಿಸುವುದು ಗುರಿಯಾಗಿದೆ ಎಂದು ಪೊಲೀಸ್ ಆಯುಕ್ತರು ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು ಪೊಲೀಸರ ಕಣ್ತಪ್ಪಿಸಿ ಪಾರಾದರೂ ಈ ಹೈಟೆಕ್ ಕ್ಯಾಮೆರಾಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಕ್ಯಾಮೆರಾಗಳು ಪತ್ತೆ ಹಚ್ಚಿ ಆ ವಾಹನದ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ರವಾನಿಸಲಿವೆ. ಎಎನ್‌ಪಿಆರ್ ಕ್ಯಾಮೆರಾಗಳು ರವಾನಿಸಿದ ಮಾಹಿತಿ ಆಧರಿಸಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮೂಲಕ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ನೋಟಿಸ್ ಸಿದ್ಧಪಡಿಸಲಾಗುತ್ತದೆ. ಬಳಿಕ ಸಂಬಂಧಪಟ್ಟ ವಾಹನ ಸವಾರರಿಗೆ ಎಸ್‌ಎಂಎಸ್ ಮೂಲಕ ನೋಟಿಸ್‌ನ ಚಲನ್ ಕಳುಹಿಸುತ್ತದೆ,
ಇನ್ನು ಸೋಷಿಯಲ್ ಮೀಡಿಯಾ ನಮ್ಮ ಜೀವನದ ಭಾಗವಾಗಿರುವುದರಿಂದ, ಪೊಲೀಸ್ ಇಲಾಖೆಗಳು ಅವುಗಳಲ್ಲಿ ಸಕ್ರಿಯ ಪುಟಗಳನ್ನು ಹೊಂದಿವೆ. ಈ ಪ್ರಕರಣದಂತಹ ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಜನರು ನೇರವಾಗಿ ಯಾವುದೇ ದೂರನ್ನು ಆನ್‌ಲೈನ್‌ನಲ್ಲಿ ವರದಿ ಮಾಡಬಹುದಾಗಿದೆ. ಈ ವಿಧಾನದ ಉತ್ತಮ ವಿಷಯವೆಂದರೆ ಈ ಹೆಚ್ಚಿನ ಪುಟಗಳು ಸಕ್ರಿಯವಾಗಿವೆ ಮತ್ತು ಸಾರ್ವಜನಿಕವಾಗಿವೆ. ಜನರು ಈ ಪೋಸ್ಟ್‌ಗಳನ್ನು ನೋಡುತ್ತಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳದೆ ಇಲಾಖೆಗೆ ಬೇರೆ ದಾರಿಯಿಲ್ಲ.
ಇನ್ನು ಇತ್ತೀಚೆಗಿನ ವರ್ಷಗಳಲ್ಲಿ ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚು ಆಗುತ್ತಿದೆ,. ಅದರ ಜೊತೆಗೆ ಹೊಸ ತಂತ್ರಜ್ಙಾನಗಳ ಮೂಲಕ ವಾಹನ್ ಸವಾರರರು ಮಾಡುವ ಸಂಚಾರ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚುತ್ತಿದ್ದಾರೆ. ಹೀಗಾಗಿ ವಾಹನ ಚಲಾಯಿಸುವವರು ಯಾವುದೇ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡದಿರಿ. ನೀವು ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಕಟ್ಟಿಟ್ಟ ಬುತ್ತಿ ಎಂಬುದನ್ನು ಮೆರೆಯದಿರಿ.
Bengaluru to soon get 250 anpr cameras to track traffic violations.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm