ಬ್ರೇಕಿಂಗ್ ನ್ಯೂಸ್
10-09-22 09:53 pm Source: Vijayakarnataka ಡಿಜಿಟಲ್ ಟೆಕ್
ಭಾರತ ಸೇರಿದಂತೆ ವಿಶ್ವದಾದ್ಯಂತ ಬಹುನಿರೀಕ್ಷಿತ ಆಪಲ್ ಐಫೋನ್ 14 ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ. ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ ಐಫೋನ್ 14 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಇದೀಗ ಪ್ರೀ-ಬುಕ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿದ್ದು, ವಿಶ್ವದ ಜನಪ್ರಿಯ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತೀಯರು ಹೆಚ್ಚು ಪಾವತಿಸಬೇಕಾಗಿದೆ. ಹೌದು, ಯುಎಸ್, ಯುಕೆ, ಜಪಾನ್ ಮತ್ತು ಜರ್ಮನಿ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಐಫೋನ್ 14 ಸರಣಿ ಫೋನ್‌ಗಳ ಬೆಲೆ ತುಂಬಾ ಹೆಚ್ಚಿವೆ.!
ಸಿಎನ್‌ಬಿಸಿ ವರದಿ ಪ್ರಕಾರ, ಯುಎಸ್, ಯುಕೆ, ಜಪಾನ್ ಮತ್ತು ಜರ್ಮನಿ ದೇಶಗಳಲ್ಲಿ ಭಾರತಕ್ಕಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಐಫೋನ್ 14 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು ಎಂದು ತಿಳಿಸಿದೆ. ಭಾರತದಲ್ಲಿ ಬೇಸಿಕ್ ಐಫೋನ್ 14 ಸಾಧನವನ್ನು ಖಾರೀದಿಸಲು 79,999 ರೂ. ಪಾವತಿಸಬೇಕಾದರೆ, ಅಮೆರಿಕಾದಲ್ಲಿ ಕೇವಲ 63,710 ರೂ.ಗೆ ಇದೇ ಸಾಧನವನ್ನು ಖರೀದಿಸಬಹುದು. ಇದೇ ರೀತಿ ಇತರ ಜನಪ್ರಿಯ ಮಾರುಕಟ್ಟೆಗಳಲ್ಲಿ ಐಫೋನ್ 14 ಸರಣಿ ಫೋನ್‌ಗಳು ಕಡಮೆ ಬೆಲೆಗೆ ದೊರೆಯುತ್ತಿವೆ ಎಂದು ತಿಳಿಸಿದೆ.
ಆಪಲ್ ಐಫೋನ್‌ಗಳು ವಿವಿಧ ಮಾರುಕಟ್ಟೆಗಳಲ್ಲಿ ವಿವಿಧ ಬೆಲೆಗಳಲ್ಲಿ ಮಾರಾಟವಾಗುತ್ತವೆ. ಆಪಲ್ ತನ್ನ ಐಫೋನ್‌ಗಳ ಮೇಲೆ ನಿಗಧಿಪಡಿಸಿದ ಬೆಲೆಗಳ ಜೊತೆಗೆ ಆ ದೇಶದ ಮಾರಾಟ ತೆರಿಗೆಯ ಮೇಲೆ ಅಂತಿಮ ಬೆಲೆಗಳು ನಿರ್ಧಾರವಾಗುತ್ತವೆ. ಭಾರತದಂತ ಅಭಿವೃದ್ಧಿಶೀಲ ದೇಶದಲ್ಲಿ ಆಪಲ್ ಐಫೋನ್‌ಗಳ ಮೇಲೆ ಹೆಚ್ಚು ಸುಂಕವನ್ನು ವಿಧಿಸಲಾಗುತ್ತಿದೆ. ಇದರಿಂದಲೇ ಅಮೆರಿಕಾ ಜನರಿಗಿಂತ ಭಾರತೀಯರು 16 ಸಾವಿರ ರೂ. ಹೆಚ್ಚು ಹಣವನ್ನು ಪಾವತಿಸಿ ಬೇಸಿಕ್ ಐಫೋನ್ 14 ಸಾಧನವನ್ನು ಖರೀದಿಸಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ iPhone 14 ಸರಣಿ ಫೋನ್‌ಗಳ ಬೆಲೆಯನ್ನು ಹೋಲಿಸುವ ಟೇಬಲ್ ಈ ಕೆಳಕಂಡಂತಿದೆ.
ಮೇಲಿನ ಟೇಬಲ್‌ನಲ್ಲಿ ನೀವು ನೋಡುವಂತೆ, ಇತರ ಜನಪ್ರಿಯ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದಲ್ಲಿ iPhone 14 ಸರಣಿಯ ಫೋನ್‌ಗಳನ್ನು ಖರೀದಿಸುವುದು ಹೆಚ್ಚು ದುಬಾರಿಯಾಗಿದೆ.
ಆಪಲ್ ಐಫೋನ್14 ಸ್ಪೆಸಿಫಿಕೇಶನ್ಸ್
ಪರ್ಫಾಮೆನ್ಸ್ | A15 Bionic chip |
ಸ್ಟೋರೇಜ್ | 64 GB |
ಕ್ಯಾಮರಾ | 12 MP + 12 MP |
ಭಾರತದಲ್ಲಿ ಬೆಲೆ | 59900 |
ಡಿಸ್‌ಪ್ಲೇ | 6.1 inches (15.49 cm) |
ರ‍್ಯಾಮ್ |
4 GB |
Apple Iphone 14 Series Price In India Compared To Us, Uk, China.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 09:29 pm
Mangalore Correspondent
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am