ಬ್ರೇಕಿಂಗ್ ನ್ಯೂಸ್
25-08-22 07:42 pm Source: Vijayakarnataka ಡಿಜಿಟಲ್ ಟೆಕ್
Galaxy Unpacked ಸಮಾರಂಭದಲ್ಲಿ ಬಿಡುಗಡೆಯಾಗಿರುವ Samsung ಕಂಪೆನಿಯ ಬಹುನಿರೀಕ್ಷಿತ Galaxy Z Flip 4 ಸ್ಮಾರ್ಟ್‌ಫೋನ್ ದೇಶದಲ್ಲಿ ಇದೀಗ ಖರೀದಿಗೆ ಲಭ್ಯವಿದೆ. ಆರ್ಮರ್ ಅಲ್ಯೂಮಿನಿಯಂ ಫ್ರೇಮ್‌ನೊಂದಿಗೆ IPX8 ವಾಟರ್ ರೆಸಿಸ್ಟೆಂಟ್, ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಸುರಕ್ಷತೆ, ಸ್ವಯಂಚಾಲಿತ ಡಿಸ್‌ಪ್ಲೇ ಸೆಟ್ಟಿಂಗ್ಸ್ ನಂತಹ ಹಲವು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ Samsung Galaxy Z Flip 4 ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಮೂರು ಬಣ್ಣಗಳಲ್ಲಿ ಮಾರಾಟಕ್ಕೆ ತರಲಾಗಿದೆ. ಇನ್ನು ದೇಶದಲ್ಲಿ ದೇಶದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ Samsung Galaxy Z Flip 4 ಸ್ಮಾರ್ಟ್‌ಫೋನಿನ ಬೆಲೆಗಳು 89,999 ರೂ.ಗಳಿಂದ ಪ್ರಾರಂಭವಾಗಿದ್ದು, ಹಾಗಾದರೆ, ದೇಶದಲ್ಲಿ ನೂತನ Samsung Galaxy Z Flip 4 ಸ್ಮಾರ್ಟ್‌ಫೋನಿನ ಸಂಪೂರ್ಣ ಬೆಲೆಗಳು ಎಷ್ಟು?, ಏನೆಲ್ಲಾ ಕೊಡುಗಡೆಗಳನ್ನು ನೀಡಲಾಗಿದೆ ಮತ್ತು ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Samsung Galaxy Z ಫ್ಲಿಪ್ 4 ಬೆಲೆ, ಲಭ್ಯತೆ
ಮೊದಲೇ ಹೇಳಿದಂತೆ, ದೇಶದಲ್ಲಿ ಆರಂಭಿಕ 8GB + 128GB ಮಾದರಿಯ Samsung Galaxy Z Flip 4 ಸ್ಮಾರ್ಟ್‌ಫೋನಿನ ಬೆಲೆ 89,999 ರೂ.ಗಳಾಗಿವೆ. ಇದರ ಹೈ ಎಂಡ್ 8GB + 256GB ಮಾದರಿ ಫೋನ್ ಬೆಲೆ 94,999 ರೂ.ಗಳಾಗಿದ್ದರೆ, ಇನ್ನು ಬೆಸ್ಪೋಕ್ ಆವೃತ್ತಿಯಲ್ಲಿ (Bespoke Edition) ಲಭ್ಯವಿರುವ 8GB + 256GB Galaxy Z Flip4 ಸ್ಮಾರ್ಟ್‌ಫೋನ್ ಅನ್ನು 97999 ರೂ.ಬೆಲೆಯಲ್ಲಿ ಮಾರಾಟಕ್ಕಿಡಲಾಗಿದೆ. ದೇಶದಲ್ಲಿ ಬ್ಲೂ, ಬೋರಾ ಪರ್ಪಲ್ ಮತ್ತು ಪಿಂಕ್ ಗೋಲ್ಡ್ ಮೂರು ಬಣ್ಣಗಳಲ್ಲಿ ಖರೀದಿ ಲಭ್ಯವಿರುವ Samsung Galaxy Z Flip 4 ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ₹ 41390.00 ವರೆಗೆ ವಿನಿಮಯ ರಿಯಾಯಿತಿ, HDFC ಬ್ಯಾಂಕ್ ಗ್ರಾಹಕರಿಗೆ 7 ಸಾವಿರ ರೂ. ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್, ಹಾಗೆಯೇ, 31999 ರೂ. ಬೆಲೆಯ Galaxy Watch4 ಅನ್ನು 2999 ರೂ.ಗೆ ನೀಡಲಾಗುವ ಕೊಡುಗೆಗಳನ್ನು ಪ್ರಕಟಿಸಲಾಗಿದೆ.
Samsung Galaxy Z Flip 4 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
ಡ್ಯುಯಲ್-ಸಿಮ್ (Nano + eSIM) ಸಾಮರ್ಥ್ಯದ Samsung Galaxy Z Flip 4 ಸ್ಮಾರ್ಟ್‌ಫೋನ್ 6.7-ಇಂಚಿನ ಪ್ರಾಥಮಿಕ ಫುಲ್ HD+ (1,080x2,640 ಪಿಕ್ಸೆಲ್‌ಗಳು) ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಹಾಗೂ 1.9-ಇಂಚಿನ ಸೂಪರ್ AMOLED ಎರಡು ಡಿಸ್‌ಪ್ಲೇಗಳನ್ನು ಹೊಂದಿದೆ. ಇದರ ಪ್ರಾಥಮಿಕ ಡಿಸ್‌ಪ್ಲೇಯು 22:9 ಆಕಾರ ಅನುಪಾತದಲ್ಲಿದ್ದು, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.9-ಇಂಚಿನ ಎರಡನೇ ಡಿಸ್‌ಪ್ಲೇಯು 260 x 512 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.S amsung Galaxy Z Flip 4 ಸ್ಮಾರ್ಟ್‌ಫೋನ್ ಫ್ಲೆಕ್ಸ್ ಮೋಡ್ ಅನ್ನು ಬೆಂಬಲಿಸಲಿದ್ದು, ಫೋನ್ ಭಾಗಶಃ ಬಾಗಿರುವಾಗ ಸ್ಪ್ಲಿಟ್ ಸ್ಕ್ರೀನ್ ಮೋಡ್‌ನಲ್ಲಿ ಎರಡು ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಹೊರಗಿನ ಡಿಸ್‌ಪ್ಲೇಯಿಂದ ಬಳಕೆದಾರರು ಕರೆಗಳನ್ನು ಮಾಡಬಹುದು, ಸಂದೇಶಗಳನ್ನು ಪ್ರತ್ಯುತ್ತರಿಸಬಹುದು, ಕಾರನ್ನು ಅನ್‌ಲಾಕ್ ಮಾಡಬಹುದಾದ ವೈಶಿಷ್ಟ್ಯ ಸೇರಿದಂತೆ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಬಹುದು ಎಂದು Samsung ಹೇಳಿಕೊಂಡಿದೆ.
ಹುಡ್ ಅಡಿಯಲ್ಲಿ, Samsung Galaxy Z Flip 4 ಸ್ಮಾರ್ಟ್‌ಫೋನ್ 8GB RAM ಮತ್ತು 512GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲ್ಪಟ್ಟಿರುವ ಆಕ್ಟಾ-ಕೋರ್ 4nm ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ನಿಂದ ಚಾಲಿತವಾಗಿದೆ, ಕ್ಯಾಮೆರಾ ವಿಭಾಗದಲ್ಲಿ, Samsung Galaxy Z Flip ಸ್ಮಾರ್ಟ್‌ಫೋನ್ f/2.2 ಲೆನ್ಸ್‌ನೊಂದಿಗೆ 12-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಪ್ರಾಥಮಿಕ ಸಂವೇದಕವನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದ್ದು, ಇದು 123-ಡಿಗ್ರಿ ಫೀಲ್ಡ್ ಆಫ್ ವ್ಯೂವ್ 12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ , 83-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗೆ ಬೆಂಬಲವನ್ನು ಹೊಂದಿದೆ. ಸೆಲ್ಫಿಗಳಿಗಾಗಿ, Galaxy Z Flip 4 ಸ್ಮಾರ್ಟ್‌ಫೋನಿನ ಮಡಿಸುವ ಡಿಸ್ಪ್ಲೇಯ ಮೇಲ್ಭಾಗದಲ್ಲಿ 10-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಈ ಸೆಲ್ಫಿ ಕ್ಯಾಮೆರಾವು, f/2.4 ಲೆನ್ಸ್ ಮತ್ತು 80-ಡಿಗ್ರಿ ಫೀಲ್ಡ್ ಆಫ್ ವ್ಯೂ ವೈಶಿಷ್ಟ್ಯವನ್ನು ಹೊಂದಿದೆ ಎಂದು Samsung ಕಂಪೆನಿ ತಿಳಿಸಿದೆ.
Samsung Galaxy Z Flip 4 ಸ್ಮಾರ್ಟ್‌ಫೋನಿನಲ್ಲಿ ಹೊಸ FlexCam ಎಂಬ ವೈಶಿಷ್ಟ್ಯವನ್ನು ಪ್ಯಾಕ್ ಮಾಡಲಾಗಿದೆ. ಇದು ಬಳಕೆದಾರರಿಗೆ ಫೋನ್ ಅನ್ನು ಮೇಲ್ಮೈಯಲ್ಲಿ ನಿಲ್ಲಿಸುವ ಮೂಲಕ ಫೋಟೋಗಳು ಮತ್ತು ವೀಡಿಯೊಗಳನ್ನು ಹ್ಯಾಂಡ್ಸ್-ಫ್ರೀ ಸೆರೆಹಿಡಿಯಲು ಅನುಮತಿಸುತ್ತದೆ. ಕ್ವಿಕ್ ಶಾಟ್ ವೈಶಿಷ್ಟ್ಯದೊಂದಿಗೆ, ಮಡಿಚಿದಾಗ, Galaxy Z Flip 4 ಸ್ಮಾರ್ಟ್‌ಫೋನಿನ ಕ್ಯಾಮರಾವನ್ನು ಸೈಡ್ ಕೀ ಅನ್ನು ತ್ವರಿತವಾಗಿ ಡಬಲ್ ಕ್ಲಿಕ್ ಮಾಡುವ ಮೂಲಕ ಪ್ರವೇಶಿಸಬಹುದುಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಮೆಟಾ-ಮಾಲೀಕತ್ವದ ಸೋಷಿಯಲ್ ಮೀಡಿಯಾಗಳಿಗಾಗಿ ಫ್ಲೆಕ್ಸ್‌ಕ್ಯಾಮ್ ಅನ್ನು ಆಪ್ಟಿಮೈಸ್ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಫ್ಲೆಕ್ಸ್ ಮೋಡ್‌ನ ಹೊರತಾಗಿ, ಮಡಿಸಿದ ಪರದೆಗೆ ಹೊಂದಿಕೊಳ್ಳಲು ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ಹೊಂದಿಸಲ್ಪಡುತ್ತವೆ, ಇನ್ನು Android 12 ನಲ್ಲಿ OneUI 4.1.1 ಜೊತೆಗೆ ರನ್ ಆಗಲಿರುವ Samsung Galaxy Z Flip 4 ಸ್ಮಾರ್ಟ್‌ಫೋನ್ 3,700mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಎಂದು Samsung ಕಂಪೆನಿ ಹೇಳಿದೆ.
Samsung Galaxy Z Flip 4 5g Price And Offers In India.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm