ಬ್ರೇಕಿಂಗ್ ನ್ಯೂಸ್
09-08-22 09:32 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಗೆ ಇತ್ತೀಚಿಗಷ್ಟೆ ಕ್ಯಾಮೊನ್, ಸ್ಪಾರ್ಕ್ ಮತ್ತು ಪೋವಾ ಸರಣಿಗಳಲ್ಲಿ ಹಲವು ಬಜೆಟ್ ಸ್ಮಾರ್ಟ್‌ಪೋನ್‌ಗಳ ಪರಿಚಯಿಸಿರುವ Tecno ಕಂಪೆನಿ ದೇಶದಲ್ಲಿ ಇದೀಗ ತನ್ನ ಜನಪ್ರಿಯ Camon 19 ಸರಣಿಯಲ್ಲಿ 5G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಆಗಸ್ಟ್ 10 ರಂದು, ಅಂದರೆ ನಾಳೆ ದೇಶದಲ್ಲಿ ಕೈಗೆಟುಕುವ 5G ಸಾಧನವಾಗಿ Tecno Camon 19 Pro ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವುದುನ್ನು Tecno ಕಂಪೆನಿ ಖಚಿತಪಡಿಸಿದ್ದು, ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವ Tecno Camon 19 Pro ಸ್ಮಾರ್ಟ್‌ಫೋನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಹಾಗಾದರೆ, ಕೈಗೆಟುಕುವ 5G ಸಾಧನ Tecno Camon 19 Pro ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟಿರಬಹುದು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
Tecno Camon 19 Pro 5G ಸ್ಮಾರ್ಟ್‌ಫೋನಿನ ನಿರೀಕ್ಷಿತ ವೈಶಿಷ್ಟ್ಯಗಳು
ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಈಗಾಗಲೇ Tecno Camon 19 Pro 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದ್ದು, ಅದೇ ವೈಶಿಷ್ಟ್ಯಗಳೊಂದಿಗೆ ದೇಶದ ಮಾರುಕಟ್ಟೆಯಲ್ಲೂ Tecno Camon 19 Pro 5G ಸ್ಮಾರ್ಟ್‌ಫೋನ್ ಪರಿಚಯಗೊಳ್ಳುವ ಸಾಧ್ಯತೆ ಇದೆ. ಅದರಂತೆ, ನೂತನ Tecno Camon 19 Pro 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುವ ದೊಡ್ಡದಾದ 6.8-ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿರಲಿದೆ. ಹುಡ್ ಅಡಿಯಲ್ಲಿ ಆಕ್ಟಾ-ಕೋರ್ ಡೈಮೆನ್ಸಿಟಿ 810 ಚಿಪ್‌ಸೆಟ್ ಮತ್ತು 8GB RAM ಮತ್ತು 256GB ಜೊತೆಗೆ ಫರ್ಮ್‌ವೇರ್ ಆಂಡ್ರಾಯ್ಡ್ 12-ಆಧಾರಿತ ಕಸ್ಟಮ್ HiOS ಇಂಟರ್ಫೇಸ್ ಮಾದರಿಯಲ್ಲಿ Tecno Camon 19 Pro 5G ಸ್ಮಾರ್ಟ್‌ಫೋನ್ ಅನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ.
ಕ್ಯಾಮೆರಾ ವಿಭಾಗದಲ್ಲಿ, ದೇಶದಲ್ಲಿ Tecno Camon 19 Pro 5G ಸ್ಮಾರ್ಟ್‌ಫೋನ್ 4MP ಮುಖ್ಯ ಕ್ಯಾಮೆರಾವನ್ನು ಹೊಂದಿರುತ್ತದೆ ಎಂಬುದನ್ನು Tecno ಕಂಪೆನಿ ದೃಢೀಕರಿಸಿದೆ. ಈ ಸ್ಮಾರ್ಟ್‌ಫೋನ್ 64 MP + 50 MP + 2 MP ಟ್ರಿಪಲ್ ಕ್ಯಾಮೆರಾಗಳು ಹಾಗೂ ಪಂಚ್-ಹೋಲ್ ವಿನ್ಯಾಸದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಇನ್ನುಳಿದಂತೆ 33W ವೇಗದ ಚಾರ್ಜಿಂಗ್‌ನೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ, 5GMTK D810 (5G ) ಆಂಬಿಯೆಂಟ್ ಲೈಟ್ ಮತ್ತು ಡಿಸ್ಟೆನ್ಸ್ ಸೆನ್ಸರ್, ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಎನ್‌ಎಫ್‌ಸಿಯಂತಹ ವೈಶಿಷ್ಟ್ಯಗಳ ಜೊತೆಗೆ ಫೇಸ್ ಅನ್‌ಲಾಕ್ ಹಾಗೂ ಡ್ಯಯಲ್ ಸ್ಪೀಕರ್‌ಗಳನ್ನು ನಾವು Tecno Camon 19 Pro 5G ಸ್ಮಾರ್ಟ್‌ಫೋನಿನಲ್ಲಿ ನೋಡಬಹುದು.
Tecno Camon 19 Pro 5G ಸ್ಮಾರ್ಟ್‌ಫೋನಿನ ನಿರೀಕ್ಷಿತ ಬೆಲೆ
Tecno ತನ್ನ ಮುಂಬರುವ Tecno Camon 19 Pro 5G ಸ್ಮಾರ್ಟ್‌ಫೋನ್‌ನ ಬೆಲೆಯ ಬಗ್ಗೆ ಯಾವುದೇ ವಿವರಗಳನ್ನು ಒದಗಿಸಿಲ್ಲ. ಆದರೆ, ಭಾರತದಲ್ಲಿ 15,000 ರಿಂದ 20,000 ರೂ.ಗಳ ವ್ಯಾಪ್ತಿಯ ಬೆಲೆಯಗಳಲ್ಲಿ Tecno Camon 19 Pro 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ Redmi, Realme, Samsung ಮತ್ತು Motorola ಕಂಪೆನಿಗಳು ಒದಗಿಸುತ್ತಿರುವ 25K ಬೆಲೆಯ 5G ಸ್ಮಾರ್ಟ್‌ಫೋನ್‌ಗಳಿಗೆ ಸವಾಲು ಹಾಕುವ 5G ಹ್ಯಾಂಡ್‌ಸೆಟ್ ಇದಾಗಿರಬಹುದು.
Tecno Camon 19 Pro 5g India Launch Set For August 10.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am