ಬ್ರೇಕಿಂಗ್ ನ್ಯೂಸ್
01-08-22 08:04 pm Source: Vijayakarnataka ಡಿಜಿಟಲ್ ಟೆಕ್
ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ whatsapp ತನ್ನ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಸೇರಿಸುವಲ್ಲಿ ಸಾಕಷ್ಟು ಸಕ್ರಿಯವಾಗಿರುವುದನ್ನು ನಾವೆಲ್ಲರೂ ತಿಳಿಸಿದ್ದೇವೆ. ಕಾಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಲೇ ಬಂದಿರುವ whatsapp ನಲ್ಲಿ ಕೆಲವೊಮ್ಮೆ ಈ ಎಲ್ಲಾ ಹೊಸ ಫೀಚರ್ಸ್‌ಗಳನ್ನು ಎಲ್ಲರೂ ಟ್ರ್ಯಾಕ್ ಮಾಡಲು ಸಾದ್ಯವಾಗುವುದೇ ಇಲ್ಲ. ಇದೀಗ ಈ ರೀತಿಯ ಸಮಸ್ಯೆಯನ್ನು ಬಗೆಹರಿಸುವುದಕ್ಕೆ whatsapp ಮುಂದಾಗಿದೆ. ಇದಕ್ಕಾಗಿ, whatsapp ತನ್ನ ಅಪ್ಲಿಕೇಶನ್‌ಗೆ ಸೇರಿಸುವ ಹೊಸ ವೈಶಿಷ್ಟ್ಯಗಳನ್ನು ಎಲ್ಲಾ ಬಳಕೆದಾರರಿಗೆ ತಿಳಿಸಲು ಹೊಸ ಚಾಟ್‌ಬಾಟ್ ವೈಶಿಷ್ಟ್ಯವೊಂದನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.
ಹೌದು, whatsapp ಫ್ಲಾಟ್‌ಫಾರ್ಮ್‌ನಿಂದ ಪರೀಕ್ಷಿಸಲಾಗುತ್ತಿರುವ ಇತ್ತೀಚಿನ ಎಲ್ಲಾ ಹೊಸ ವೈಶಿಷ್ಟ್ಯಗಳ ಬಗ್ಗೆ ಬಳಕೆದಾರರರು ಅರ್ಥಮಾಡಿಕೊಳ್ಳಲು ಸುಲಭವಾಗಿಸುವ ಸಲುವಾಗಿ WhatsApp ಪ್ರಸ್ತುತ ಹೊಸ ಚಾಟ್‌ಬಾಟ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು WABetaInfo ವರದಿಯು ತಿಳಿಸಿದೆ. ಈ ಹೊಸ ಚಾಟ್‌ಬಾಟ್ ಮೂಲಕ ಯಾವುದೇ ಹೊಸ ಫೀಚರ್ಸ್ ಸೇರ್ಪಡೆ ಯಾದರೂ ಮೊದಲಿಗೆ ಮಾಹಿತಿ ನೀಡಲಿದೆ. ಬಳಕೆದಾರರು ಚಾಟ್‌ಬಾಟ್ ಅನ್ನು ತೆರೆದ ನಂತರ, ಬಳಕೆದಾರರು WhatsApp ಗಾಗಿ ಹೊಸ ವೈಶಿಷ್ಟ್ಯಗಳು, ಸಲಹೆಗಳು ಮತ್ತು ಟ್ರಿಕ್‌ಗಳ ಜೊತೆಗೆ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡುವ ಅಧಿಸೂಚನೆಯನ್ನು ನೋಡಲು ಸಾಧ್ಯವಾಗುತ್ತದೆ ಎಂದು WABetaInfo ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, ಈ ಅಧಿಕೃತ ಖಾತೆಯು WhatsApp ನಲ್ಲಿನ ಬ್ಯುಸಿನೆಸ್ಖಾತೆಗಳಿಗಿಂತ ಭಿನ್ನವಾಗಿರುತ್ತದೆ ಎಂದು ಸಹ ಹೇಳಲಾಗಿದೆ. ಏಕೆಂದರೆ whatsapp ಬಳಕೆದಾರರು ಈ ಚಾಟ್‌ಬಾಟ್ ನಲ್ಲಿ ಯಾವುದೇ ಸಂದೇಶಗಳಿಗೆ ಪ್ರತ್ಯುತ್ತರಿಸಲು ಸಾಧ್ಯವಾಗುವುದಿಲ್ಲ. ಓದಲು-ಮಾತ್ರ ಖಾತೆಯಾಗಿರುವುದರಿಂದ, ಈ ಚಾಟ್‌ಬಾಟ್‌ಗೆ ರಿಪ್ಲೆ ಮಾಡುವುದಕ್ಕೆ ನಿಮಗೆ ಅವಕಾಶವಿಲ್ಲ. ಆದ್ದರಿಂದ ಯಾವಾಗಲೂ ಏಕಮುಖ ಸಂವಹನ ಇರಲಿದೆ ಎಂದು ತಿಳಿದುಬಂದಿದೆ. ಇನ್ನು whatsappನ ಹೊಸ ಚಾಟ್‌ಬಾಟ್ ಚಾಟ್‌ನಲ್ಲಿ ಕಳುಹಿಸಲಾದ ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ. ಅಲ್ಲದೆ ಸಂದೇಶಗಳು ಒಂದೇ ಬಾರಿಗೆ ಅನೇಕ ಬಳಕೆದಾರರಿಗೆ ಬರುವುದರಿಂದ ಇದು ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ ಎಂದು ಹೇಳಲಾಗಿದೆ.
ಆಂಡ್ರಾಯ್ಡ್ ಪೋಲಿಸ್ ವರದಿಯ ಪ್ರಕಾರ, ಈ ಚಾಟ್‌ಬಾಟ್ ವೈಶಿಷ್ಟ್ಯವು ಪ್ರತಿಸ್ಪರ್ಧಿ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಾದ ಟೆಲಿಗ್ರಾಮ್ ಮತ್ತು ಸಿಗ್ನಲ್‌ನಿಂದ ನೀಡಲಾಗುವ ವೈಶಿಷ್ಟ್ಯವನ್ನು ಹೋಲುತ್ತದೆ, ಈ ಎರಡೂ ಪ್ಲಾಟ್‌ಫಾರ್ಮ್‌ಗಳು ಹೊಸ ವೈಶಿಷ್ಟ್ಯಗಳ ಬಿಡುಗಡೆಗಳ ಕುರಿತು ಬಳಕೆದಾರರನ್ನು ನವೀಕರಿಸಲು ಅಧಿಕೃತ ಚಾನಲ್ ಅನ್ನು ಬಳಸುತ್ತವೆ. ಇನ್ನು ಕೆಲವು ಬಳಕೆದಾರರು ಇತ್ತೀಚೆಗೆ ತಮ್ಮ WhatsApp ಖಾತೆಗಳಲ್ಲಿ ಲಿಂಕ್ ಪೂರ್ವವೀಕ್ಷಣೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ ಎಂದು ಈ ವರದಿಯು ಬಹಿರಂಗಪಡಿಸಿದೆ. ಒಂದು ವೇಳೆ ನೀವು whatsapp ಚಾಟ್‌ಬಾಟ್‌ನಿಂದ ಸಂದೇಶಗಳನ್ನು ಸ್ವಿಕರಿಸಲು ಬಯಸಿದಿದ್ದರೆ ಚಾಟ್‌ಬಾಟ್ ಅಕೌಂಟ್ ಅನ್ನು ಬ್ಲಾಕ್ ಮಾಡುವುದಕ್ಕೆ ಅವಕಾಶವಿದೆ ಎಂದು ಈ ವರದಿಯು ಹೇಳಿದೆ.
Whatsapp Tests A New Chatbot To Inform Users About New Features.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am