ಬ್ರೇಕಿಂಗ್ ನ್ಯೂಸ್
29-07-22 07:36 pm Source: Vijayakarnataka ಡಿಜಿಟಲ್ ಟೆಕ್
ಆಫ್ರಿಕಾ ಸೇರಿದಂತೆ ಕೆಲವು ಆಯ್ದ ಜಾಗತಿಕ ಮೊಬೈಲ್ ಮಾರುಕಟ್ಟೆಗಳಲ್ಲಿ ಇತ್ತೀಚಿಗಷ್ಟೇ ಬಿಡುಗಡೆಗೊಂಡಿದ್ದ Infinix Smart 6 Plus ಸ್ಮಾರ್ಟ್‌ಫೋನನ್ನು ಇಂದು ಭಾರತದ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಕಳೆದ Infinix Smart 6 ಸ್ಮಾರ್ಟ್‌ಫೋನಿನ ನವೀಕರಿಸಿದ ಮಾದರಿಯಾಗಿ Infinix Smart 6 Plus ಸ್ಮಾರ್ಟ್‌ಫೋನನ್ನು ದೇಶದಲ್ಲಿ ಬಿಡುಗಡೆ ಮಾಡಲಾಗಿದ್ದು, 6.82-ಇಂಚಿನ HD+ ಡಿಸ್‌ಪ್ಲೇ, ಆಕ್ಟಾ-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಮತ್ತು 5000mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತಿರುವ ಈ ಸ್ಮಾರ್ಟ್‌ಫೋನ್ ದೇಶದಲ್ಲಿ ಕೇವಲ 7,999 ರೂ.ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೂತನ Infinix Smart 6 Plus ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
Infinix Smart 6 Plus ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ಭಾರತದಲ್ಲಿ ಬಿಡುಗಡೆಯಾಗಿರುವ ನೂತನ Infinix Smart 6 Plus ಸ್ಮಾರ್ಟ್‌ಫೋನ್ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.82-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಪಾಂಡಾ MN228 ಗ್ಲಾಸ್ ರಕ್ಷಣೆಯನ್ನು ಹೊಂದಿರುವ ಈ ಡಿಸ್‌ಪ್ಲೇಯು 90.66% ಸ್ಕ್ರೀನ್-ಟು-ಬಾಡಿ ಅನುಪಾತವಲ್ಲಿದ್ದು, 440 ನಿಟ್‌ಗಳ ಹೊಳಪನ್ನು ನೀಡಲಿದೆ. ಹುಡ್ ಅಡಿಯಲ್ಲಿ, ಈ ಸ್ಮಾರ್ಟ್‌ಫೋನಿನಲ್ಲಿ IMG ಪವರ್ VR GE8320 ಶಕ್ತಿಯ GPU ಜೊತೆಗೆ 2GHz ವೇಗದ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G25 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 3GB RAM ಮತ್ತು 64GB ಸ್ಟೋರೇಜ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 3GB ವರೆಗೆ ವರ್ಚುವಲ್ RAM ಬೆಂಬಲಿಸುತ್ತದೆ ಮತ್ತು ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 512GB ವರೆಗೆ ಮೆಮೊರಿಯನ್ನು ಹೆಚ್ಚಿಸಬಹುದಾದ ಆಯ್ಕೆಯನ್ನು ಹೊಂದಿದೆ.
Infinix Smart 6 Plus ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು f/2.0 ಅಪರ್ಚರ್ ನೊಂದಿಗೆ 8MP ಪ್ರಾಥಮಿಕ ಸಂವೇದಕ ಮತ್ತು ಡೆಪ್ತ್ ಸೆನ್ಸಾರ್ ಗಳನ್ನು ಒಳಗೊಂಡಿದೆ. ಹಿಂಭಾಗದ ಡ್ಯುಯಲ್ ಕ್ಯಾಮೆರಾ ಸೆಟಪ್ ಜೊತೆಗೆ ಎಲ್ಇಡಿ ಫ್ಲ್ಯಾಷ್ ಅನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ, LED ಫ್ಲ್ಯಾಷ್‌ನೊಂದಿಗೆ 5MP ಸೆಲ್ಫಿ ಕ್ಯಾಮೆರಾವನ್ನು ನೀಡಿರುವುದನ್ನು ನಾವು ನೋಡಬಹುದು. ಇನ್ನು Infinix Smart 6 Plus ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಅಂಶಗಳಲ್ಲಿ, 4G VoLTE, ಡ್ಯುಯಲ್-ಸಿಮ್ , Wi-Fi, ಬ್ಲೂಟೂತ್ 5.0, GPS ಮತ್ತು ಮೈಕ್ರೋ USB ಪೋರ್ಟ್ ವೈಶಿಷ್ಟ್ಯಗಳಿವೆ. ಇಷ್ಟೇ ಅಲ್ಲದೇ, ಆಂಡ್ರಾಯ್ಡ್ 12 (ಗೋ ಎಡಿಷನ್) ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 3.5mm ಹೆಡ್ಫೋನ್ ಜ್ಯಾಕ್, DTS ಸರೌಂಡ್ ಸೌಂಡ್ ಮತ್ತು 5000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
Infinix Smart 6 Plus ಸ್ಮಾರ್ಟ್‌ಫೋನಿನ ಬೆಲೆ ಮತ್ತು ಮಾರಾಟ
ಭಾರತದಲ್ಲಿ Infinix Smart 6 Plus ಸ್ಮಾರ್ಟ್‌ಫೋನನ್ನು ಟ್ರ್ಯಾಂಕ್ವಿಲ್ ಸೀ ಬ್ಲೂ ಮತ್ತು ಮಿರಾಕಲ್ ಬ್ಲ್ಯಾಕ್ ಎರಡು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾದ್ದು, ಅಧಿಕೃತ ಇ-ಕಾಮರ್ಸ್ ರಿಟೇಲರ್ ಫ್ಲಿಪ್‌ಕಾರ್ಟ್ ಮೂಲಕ ಆಗಸ್ಟ್ 3 ರಿಂದ 7,999 ರೂ. ಬೆಲೆಯಲ್ಲಿ ಮಾರಾಟಕ್ಕೆ ಬರುತ್ತಿದೆ. Realme C30, Redmi 10A ಮತ್ತು Tecno Spark 9 ನಂತಹ ಬಜೆಟ್ ಸ್ಮಾರ್ಟ್‌ಫೋನ್‌ಗಳ ವಿರುದ್ಧ ಈ ಸ್ಮಾರ್ಟ್‌ಫೋನ್ ಸ್ಪರ್ಧಿಸುವಂತೆ ಕಾಣಿಸುತ್ತಿದೆ.
Infinix Smart 6 Plus Launched With 5,000mah Battery.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 01:06 pm
Wecare
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm