ಬ್ರೇಕಿಂಗ್ ನ್ಯೂಸ್
27-07-22 08:01 pm Source: Vijayakarnataka ಡಿಜಿಟಲ್ ಟೆಕ್
ನೀವು ಕೇವಲ ಒಂದು 1 ರೂಪಾಯಿಯಲ್ಲಿ OnePlus 10T ಸ್ಮಾರ್ಟ್‌ಫೋನ್ ಅನ್ನು ಪಡೆಯಬೇಕೆ. ಹಾಗಾದರೆ, ಈ ಕೂಡಲೇ OnePlus 10T ಸ್ಮಾರ್ಟ್‌ಫೋನ್ ಬಿಡುಗಡೆ ನೇರ ಕಾರ್ಯಕ್ರಮಕ್ಕೆ ಕೇವಲ 1 ರೂ. ಹಣ ಪಾವತಿಸಿ ನೊಂದಾಯಿಸಿಕೊಳ್ಳಿ.! ಹೌದು, ಇದೇ ಆಗಸ್ಟ್ ರಂದು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆಯಾಗುತ್ತಿರುವ OnePlus 10T ಸ್ಮಾರ್ಟ್‌ಫೋನ್ ಲೈವ್ ಈವೆಂಟ್ ಅನ್ನು ಬೆಂಗಳುರಿನಲ್ಲಿಯೂ ಸಹ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಬಳಕೆದಾರರು ಕೇವಲ 1 ರೂಪಾಯಿ ಪಾವತಿಸಿ ಟಿಕೆಟ್ ಪಡೆಯಬಹುದು ಎಂದು ತಿಳಿಸಲಾಗಿದೆ. ಆಗಸ್ಟ್ 3 ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ OnePlus 10T ಸ್ಮಾರ್ಟ್‌ಫೋನ್ ಬಿಡುಗಡೆ ಪ್ರದರ್ಶನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೆಸರುಗಳನ್ನು ಲಾಟರಿ ವ್ಯವಸ್ಥೆಯಲ್ಲಿ ಆಯ್ಕೆ ಮಾಡಿ, ಅದೃಷ್ಟಶಾಲಿ ಮೂವರಿಗೆ OnePlus 10T ಸ್ಮಾರ್ಟ್‌ಫೋನ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪನಿ ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ತಿಳಿಸಿದೆ.!
OnePlus ಇದೇ 3 ಆಗಸ್ಟ್ ರಂದು ಭಾರತ ಸೇರಿದಂತೆ ಜಾಗತಿಕವಾಗಿ ತನ್ನ ಬಹುನಿರೀಕ್ಷಿತ OnePlus 10T ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುತ್ತಿದೆ. ನ್ಯೂಯಾರ್ಕ್ ನಲ್ಲಿ ಇದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿರುವ OnePlus ಈ ಸಮಾರಂಭವನ್ನು ಬೆಂಗಳೂರಿನಲ್ಲಿಯೂ ನೇರ ಪ್ರಸಾರವನ್ನು ನೀಡುತ್ತಿದೆ. ಹಾಗೂ ಈ ಈವೆಂಟ್‌ಗೆ ಹಾಜರಾಗುವ ಬಳಕೆದಾರರಿಗೆ OnePlus 10T ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸಹ ಅನುಮತಿಸುತ್ತಿದೆ. OnePlus India ವೆಬ್‌ಸೈಟ್‌ನಲ್ಲಿ ಈ ಈವೆಂಟ್‌ಗೆ ನೊಂದಾಯಿಸಿಕೊಳ್ಳಲು ಅವಕಾಶ ವಿದ್ದು, ಈ ಈವೆಂಟ್‌ಗಾಗಿಯೇ ಲಿಂಕ್ ಒಂದನ್ನು ರಚಿಸಲಾಗಿದೆ. ಆ ಲಿಂಕ್ ತೆರೆದು 1 ರೂಪಾಯಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡ ನಂತರ, ತಮ್ಮ ಮೊಬೈಲ್ ನಂಬರ್ ನಮೂದಿಸಿ ಹಾಜರಾತಿ ದೃಢಪಡಿಸಿಕೊಳ್ಳಬಹುದು. ಹೀಗೆ OnePlus India ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವವರು ತಮ್ಮ ಮೇಲ್‌ನಲ್ಲಿ ಲಿಂಕ್ ಮತ್ತು ವಿಶೇಷ ಇನ್‌ವೈಟ್ ಸಂಖ್ಯೆಯನ್ನು ಸ್ವೀಕರಿಸುತ್ತಾರೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಶೀಘ್ರದಲ್ಲೇ ಬಿಡುಗಡೆಗೊಳ್ಳುತ್ತಿರುವ OnePlus 10T 5G ಸ್ಮಾರ್ಟ್‌ಫೋನಿನ ಅಧಿಕೃತ ಫಸ್ಟ್ ಲುಕ್ ರಿವೀಲ್ ಆಗಿದೆ ನೂತನ OnePlus 10T 5G ಸ್ಮಾರ್ಟ್‌ಫೋನ್ ವಿನ್ಯಾಸವು ಬಹಿರಂಗವಾಗಿದ್ದು, ಇದು ಟ್ರಿಪಲ್ ರಿಯರ್ ಕ್ಯಾಮೆರಾ ಮಾಡ್ಯೂಲ್, ಎಡ ಫಲಕದಲ್ಲಿ ವಾಲ್ಯೂಮ್ ರಾಕರ್ ಮತ್ತು ಬಲ ಫಲಕದಲ್ಲಿ ಪವರ್ ಬಟನ್‌ನೊಂದಿಗೆ ಚದರ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. OnePlus ಸಾಧನಗಳ ಸಿಗ್ನೇಚರ್ ಅಲರ್ಟ್ ಸ್ಲೈಡರ್ ಬಟನ್ ಅನ್ನು OnePlus 10T 5G ಸ್ಮಾರ್ಟ್‌ಫೋನಿನಲ್ಲಿ ಕೈಬಿಡಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಜೇಡ್ ಗ್ರೀನ್ ಮತ್ತು ಮೂನ್‌ಸ್ಟೋನ್ ಬ್ಲಾಕ್ ಬಣ್ಣಗಳಲ್ಲಿ ಬಿಡುಗಡೆಯಾಗುವುದು ಸಹ ಖಚಿತವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯೋಣ ಬನ್ನಿ.
OnePlus 10T ವಿಶೇಷಣಗಳು (ನಿರೀಕ್ಷಿತ)
ಮೇಲೆ ತಿಳಿಸಿದಂತೆ, OnePlus 10T ಸ್ಮಾರ್ಟ್‌ಫೋನ್ Qualcomm Snapdragon 8+ Gen 1 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಖಚಿತವಾಗಿದೆ. ಇನ್ನುಳಿದಂತೆ, ಈ ಸ್ಮಾರ್ಟ್‌ಫೋನ್ 6.7-ಇಂಚಿನ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಮತ್ತು ಪೂರ್ಣ-HD+ ರೆಸಲ್ಯೂಶನ್‌ನೊಂದಿಗೆ ಹೊಂದಿರುತ್ತದೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲದೇ, 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಶೂಟರ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 150W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,800mAh ಬ್ಯಾಟರಿ 512GB UFS 3.1 ಅಂತರ್ಗತ ಸಂಗ್ರಹಣೆಯೊಂದಿಗೆ 16GB LPDDR5 RAM ನಂತಹ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.
ವಿಶ್ವದ ಪ್ರಮುಖ ಟೆಕ್ ಮಾಧ್ಯಮಗಳು ಇತ್ತೀಚಿಗಷ್ಟೇ ವರದಿ ಮಾಡಿರುವಂತೆ, ನೂತನ OnePlus 10T 5G ಸ್ಮಾರ್ಟ್‌ಫೋನ್ ಸುಮಾರು ಸಿಎನ್‌ವೈ 3,000 (ಸುಮಾರು ರೂ. 35,500) ಮತ್ತು ಸಿಎನ್‌ವೈ 4,000 (ಸುಮಾರು ರೂ. 47,400) ನಡುವೆ ಬೆಲೆಗಳನ್ನು ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ. OnePlus 10T 5G ಸ್ಮಾರ್ಟ್‌ಫೋನಿನ ಮೂಲ ಮಾದರಿಯು ಭಾರತದಲ್ಲಿ 49,999 ರೂ. ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಆದರೆ, ಕಂಪೆನಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಿಲ್ಲ.
Register Now To Be A Part Of The Oneplus 10t Launch Premiere In Bengaluru.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am