ಬ್ರೇಕಿಂಗ್ ನ್ಯೂಸ್
25-07-22 09:10 pm Source: Vijayakarnataka ಡಿಜಿಟಲ್ ಟೆಕ್
ಭಾರತದ TV ಉದ್ಯಮದ ದೈತ್ಯ ಬ್ರ್ಯಾಂಡ್ Sony ದೇಶದಲ್ಲಿಂದು ತನ್ನ ಅತ್ಯಂತ ದುಬಾರಿ ಮತ್ತು ತಾಂತ್ರಿಕವಾಗಿ ಮುಂದುವರಿದಿರುವ Sony XR OLED A80K ಟಿವಿ ಸರಣಿಯನ್ನು ದೇಶದಲ್ಲಿಂದು ಬಿಡುಗಡೆ ಮಾಡಿದೆ. ಪ್ರಸ್ತುತ ಪ್ರಪಂಚದಲ್ಲಿ ಅತ್ಯಾಧುನಿಕ ಎನಿಸುವಂತಹ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತಿರುವ ಪ್ರೀಮಿಯಂ ಟಿವಿ ಸರಣಿ ಇದಾಗಿದ್ದು, 55, 65 ಮತ್ತು 77-ಇಂಚಿನ ಮೂರು ವಿಭಿನ್ನ ಮಾದರಿಗಳಲ್ಲಿ ಟಿವಿಗಳನ್ನು ಪರಿಚಯಿಸಲಾಗಿದೆ. ಅತ್ಯುತ್ತಮ ವೀಕ್ಷಣ ಅನುಭವವನ್ನು ಪಡೆಯಲು ಇಚ್ಚಿಸುವ ಹಾಗೂ ಮನೆಯನ್ನು ಪ್ರೀಮಿಯಂ ಆಗಿ ಅಲಂಕರಿಸಲು ಇಷ್ಟಪಡುವ ಗ್ರಾಹಕರಿಗಾಗಿ Sony XR OLED A80K ಟಿವಿ ಸರಣಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಹೊಸ Sony ಸರಣಿಯ ಟಿವಿಗಳು ಹೊಂದಿರುವ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
Sony XR OLED A80K ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ನೂತನ Sony XR OLED A80K ಟಿವಿ ಸರಣಿಯ ಎಲ್ಲಾ ಟಿವಿಗಳು 120Hz ರಿಫ್ರೆಶ್ ರೇಟ್‌ನೊಂದಿಗೆ ಅಲ್ಟ್ರಾ-ಎಚ್‌ಡಿ (3840x2160-ಪಿಕ್ಸೆಲ್) OLED ಡಿಸ್‌ಪ್ಲೇಯನ್ನು ಹೊಂದಿವೆ. ಈ ಡಿಸ್‌ಪ್ಲೇಯು ಡಾಲ್ಬಿ ವಿಷನ್, HDR10 ಮತ್ತು HLG ಫಾರ್ಮ್ಯಾಟ್‌ಗಳೊಂದಿಗೆ ಹೆಚ್ಚಿನ ಡೈನಾಮಿಕ್ ಶ್ರೇಣಿಯ ಕಂಟೆಂಟ್‌ಗೆ ಬೆಂಬಲವನ್ನು ನೀಡಲಿದೆ. ಕಾಗ್ನಿಟಿವ್ ಪ್ರೊಸೆಸರ್ XR ನಿಂದ ಚಾಲಿತವಾಗಿರುವ Sony XR OLED A80K ಸರಣಿ ಟಿವಿಗಳು HDMI 2.1 ಬೆಂಬಲಿತ, ಆಟೋ ಲೋ-ಲೇಟೆನ್ಸಿ ಮೋಡ್ (ALLM), ವೇರಿಯಬಲ್ ರಿಫ್ರೆಶ್ ರೇಟ್ (VRR) ಮತ್ತು ಆಟೋ ಗೇಮ್ ಮೋಡ್‌ನಂತಹ ಗೇಮಿಂಗ್-ಕೇಂದ್ರಿತ ವೈಶಿಷ್ಟ್ಯಗಳೊಂದಿಗೆ ವಿಷಯ ಮತ್ತು ವೀಕ್ಷಣಾ ಪರಿಸ್ಥಿತಿಗಳ ಆಧಾರದ ಮೇಲೆ ಉತ್ತಮ ಮತ್ತು ಹೆಚ್ಚು ಹೊಂದಾಣಿಕೆಯ ಕಾರ್ಯಕ್ಷಮತೆಯನ್ನು ನೀಡುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ.
Sony A80K ಸರಣಿ ಟಿವಿಗಳು ಅಕೌಸ್ಟಿಕ್ ಸರ್ಫೇಸ್ ಆಡಿಯೋ ಮತ್ತು XR ಸರೌಂಡ್ ತಂತ್ರಜ್ಞಾನಗಳನ್ನು ಹೊಂದಿವೆ 55-ಇಂಚಿನ ಮತ್ತು 65-ಇಂಚಿನ ಮಾಡೆಲ್‌ಗಳಲ್ಲಿ 50W ಮತ್ತು 77-ಇಂಚಿನ ಮಾಡೆಲ್ 60W ರೇಟ್ ಔಟ್‌ಪುಟ್ ಆಡಿಯೋ ಸಾಮರ್ಥ್ಯವನ್ನು ನೀಡಲಾಗಿದ. ಇದಲ್ಲದೆ Dolby Atmos ಮತ್ತು DTS ಡಿಜಿಟಲ್ ಸರೌಂಡ್ ಸೌಂಡ್ ಫಾರ್ಮ್ಯಾಟ್‌ಗಳಿಗೆ ಸಹ ಬೆಂಬಲವಿದೆ. ಕುತೂಹಲಕಾರಿಯಾಗಿ, XR OLED A80K ಟಿವಿಗಳಲ್ಲಿ IMAX ಮತ್ತು ನೆಟ್‌ಫ್ಲಿಕ್ಸ್ ಅಡಾಪ್ಟಿವ್ ಕ್ಯಾಲಿಬ್ರೇಟೆಡ್ ಮೋಡ್, ಅಂತರ್ನಿರ್ಮಿತ Google Chromecast ,Apple AirPlay 2 ಮತ್ತು ಬಾಹ್ಯ ಸಾಧನಗಳೊಂದಿಗೆ ಸಂಪರ್ಕಕ್ಕಾಗಿ HomeKit ವೈಶಿಷ್ಟ್ಯಗಳ ಬೆಂಬಲವಿದೆ. A80K ಸರಣಿಯು Android TV ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಮುಖ ಸ್ಟ್ರೀಮಿಂಗ್ ಸೇವೆಗಳನ್ನು ಒಳಗೊಂಡಿದೆ.
Sony XR OLED A80K ಟಿವಿ ಬೆಲೆ ಮತ್ತು ಲಭ್ಯತೆ
Sony XR OLED A80K ಟಿವಿ ಸರಣಿಯನ್ನು ದೇಶದಲ್ಲಿ 55 ಇಂಚುಗಳು, 65 ಇಂಚುಗಳು ಮತ್ತು 77 ಇಂಚುಗಳ ಮೂರು ಗಾತ್ರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಲ್ಲವೂ ಅಲ್ಟ್ರಾ-ಎಚ್‌ಡಿ (3840x2160) ಟೆಲಿವಿಷನ್‌ಗಳಾಗಿದ್ದು, ಗಾತ್ರದಲ್ಲಿನ ಸ್ಪಷ್ಟ ವ್ಯತ್ಯಾಸಗಳ ಹೊರತಾಗಿ ಒಂದೇ ರೀತಿಯ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿವೆ. 65 ಇಂಚಿನ ಮಾದರಿಯ ಟಿವಿ ಬೆಲೆ 2,79,990 ರೂ.ಗಳಾದರೆ, ಇದರ 77-ಇಂಚಿನ ಮಾದರಿಯು 6,99,900 ರೂ. ಬೆಲೆಯನ್ನು ಹೊಂದಿವೆ. ಇವೆರಡೂ ಈಗ ಭಾರತದಲ್ಲಿ ಸೋನಿ ಸೆಂಟರ್ ಸ್ಟೋರ್‌ಗಳು, ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳು ಮತ್ತು ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಖರೀದಿಸಲು ಲಭ್ಯವಿದೆ. 55-ಇಂಚಿನ ಮಾದರಿಯ Sony XR OLED A80K ಟಿವಿ ಬೆಲೆಯನ್ನು ಇನ್ನೂ ನಿಗದಿಪಡಿಸಲಾಗಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ.
Sony Xr Oled A80k Series Smart Television Range Launched In India In 3 Sizes.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 01:06 pm
Wecare
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm