ಬ್ರೇಕಿಂಗ್ ನ್ಯೂಸ್
15-07-22 07:33 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಜುಲೈ 18 ರಂದು ಬಹುನಿರೀಕ್ಷಿತ Oppo Reno 8 Pro ಮತ್ತು Oppo Reno 8 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಯಾಗುತ್ತಿರುವುದು ಅಧಿಕೃತವಾಗಿ ಖಚಿತವಾಗಿದ್ದು, ಇದೀಗ Oppo Reno 8 Pro ಮತ್ತು Oppo Reno 8 ಸ್ಮಾರ್ಟ್‌ಫೋನ್‌ಗಳ ಚಿತ್ರಗಳು, ವೈಶಿಷ್ಟ್ಯಗಳು ಮತ್ತು ಬೆಲೆಗಳು ಬಗ್ಗೆ ಹಲವು ವದಂತಿಯ ಮಾಹಿತಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಹೊಸ ಅಪ್‌ಡೇಟ್ ಒಂದರಲ್ಲಿ, Oppo Reno 8 ಸರಣಿಯು ಹೋಲ್-ಪಂಚ್ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡಬಹುದು ಎಂದು ಹೇಳಲಾಗಿದ್ದು, ಖ್ಯಾತ ಚೈನೀಸ್ ಟಿಪ್‌ಸ್ಟರ್ ಪರಾಸ್ ಗುಗ್ಲಾನಿ (@passionategeekz) ಟ್ವಿಟರ್‌ನಲ್ಲಿ Oppo Reno 8 Pro ವಿನ್ಯಾಸವನ್ನು ಪ್ರದರ್ಶಿಸುವ ಲೈವ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಅವರು ಪೋಸ್ಟ್ ಮಾಡಿರುವ Oppo Reno 8 Pro ವಿನ್ಯಾಸವನ್ನು ನೋಡುವುದಾದರೆ, ಈ ಹ್ಯಾಂಡ್‌ಸೆಟ್ ಅನ್ನು ಕಪ್ಪು ಛಾಯೆಯಲ್ಲಿ ಹೋಲ್-ಪಂಚ್ ಡಿಸ್‌ಪ್ಲೇ ವಿನ್ಯಾಸವನ್ನು ತೋರಿಸುತ್ತಿದೆ ಹಾಗೂ ಹಿಂದಿನ ಪ್ಯಾನೆಲ್‌ನ ಮೇಲಿನ ಎಡ ಮೂಲೆಯಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಜೋಡಿಸಲಾಗಿದೆ. ಇದರ ಈ ನೋಟವು ಹಿಂದಿನ Oppo Reno ಸರಣಿಯ ಮಾದರಿಗಳಂತೆಯೇ ಇದೆಯಾದರು, Oppo Reno 8 Pro ಚಿತ್ರಗಳು ತೆಳುವಾದ ಬೆಜೆಲ್‌ಗಳನ್ನು ಹೊಂದಿರುವಂತೆ ತೋರಿಸುತ್ತಿದೆ.ಇನ್ನು ಪರಾಸ್ ಗುಗ್ಲಾನಿ ಅವರ ಪ್ರಕಾರ, Oppo Reno 8 Pro ಆರಂಭಿಕ ಬೆಲೆಯು ಸುಮಾರು 46,000 ರೂ.ಗಳು ಎಂದು ಹೇಳಿರುವುದು ಸ್ಮಾರ್ಟ್‌ಫೋನಿನ ಬಗ್ಗೆ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.

ಭಾರತದಲ್ಲಿ Oppo Reno 8 ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೂ ಮುನ್ನ ಕೆಲವು ವೈಶಿಷ್ಟ್ಯಗಳನ್ನು ಈಗಾಗಲೇ ಅಧಿಕೃತವಾಗಿ ಪ್ರಕಟಿಸಲಾಗಿದೆ. Oppo ತನ್ನ ವೆಬ್‌ಸೈಟ್‌ನಲ್ಲಿ ಮೀಸಲಾದ ಮೈಕ್ರೋಸೈಟ್ ಮೂಲಕ Oppo Reno 8 Pro ಸ್ಮಾರ್ಟ್‌ಫೋನಿನ ಪ್ರಮುಖ ವಿಶೇಷಣಗಳ ಕುರಿತು ಈಗಾಗಲೇ ತಿಳಿಸಲಾಗಿರುವ ಅಧಿಕೃತ ಮಾಹಿತಿಯಂತೆ, Oppo Reno 8 Pro ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ SoC ಪ್ರೊಸೆಸರ್ ಅನ್ನು ಹೊಂದಿರಲಿದೆ. ಗೇಮಿಂಗ್‌ಗಾಗಿ ಸೂಪರ್-ವಾಹಕ VC ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿರಲಿರುವ ಈ ಸಾಧನವು ಮಾರಿಸಿಲಿಕಾನ್ X ಇಮೇಜಿಂಗ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (NPU) ನೊಂದಿಗೆ ಸುಸಜ್ಜಿತವಾಗಿ ಬರುತ್ತದೆ ಮತ್ತು 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರಲಿದೆ.

Oppo Reno 8 Pro ಸ್ಮಾರ್ಟ್‌ಫೋನ್ 80W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲು ಸಿದ್ಧವಾಗಿದೆ. ಇದು ಕೇವಲ 11 ನಿಮಿಷಗಳಲ್ಲಿ 0 ರಿಂದ 50 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಲಿದೆ ಎಂದು Oppo ಹೇಳಿಕೊಂಡಿದೆ. Oppo Reno 8 Pro ಸ್ಮಾರ್ಟ್‌ಫೋನಿನ ಕ್ಯಾಮೆರಾ ಸೆಟಪ್ 4k ಅಲ್ಟ್ರಾ ನೈಟ್ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಎಂದು ದೃಢೀಕರಿಸಲಾಗಿಯಾದರೂ, ಕ್ಯಾಮೆರಾ ಸೆಟಪ್ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ 7.4 ಎಂಎಂ ದಪ್ಪದೊಂದಿಗೆ ಸ್ಲಿಮ್ ವಿನ್ಯಾಸವನ್ನು ಹೊಂದಿರುವುದು ಸಹ ಖಚಿತವಾಗಿದ್ದು, ಭಾರತದಲ್ಲಿ Oppo Reno 8 ಸರಣಿಯ ಇದೇ ಜುಲೈ 18 ರಂದು ಸಂಜೆ 6 ಗಂಟೆಗೆ Oppo Pad Air ಮತ್ತು Oppo Enco X2 TWS ಇಯರ್‌ಫೋನ್‌ಗಳ ಜೊತೆಗೆ ಬಿಡುಗಡೆಯಾಗುತ್ತಿದೆ.
ಒಪ್ಪೊ ರೆನೊ 8 ಪ್ರೋ ಸ್ಪೆಸಿಫಿಕೇಶನ್ಸ್
| ಪರ್ಫಾಮೆನ್ಸ್ | Qualcomm SDM730 Snapdragon 730G (8 nm) |
| ಡಿಸ್‌ಪ್ಲೇ | 6.5 inches (16.51 cm) |
| ಸ್ಟೋರೇಜ್ | 128 GB |
| ಕ್ಯಾಮರಾ | 60 MP + 13 MP + 8 MP + 2 MP |
| ಬ್ಯಾಟರಿ | 4500 mAh |
| ಭಾರತದಲ್ಲಿ ಬೆಲೆ | 45956 |
| ರ‍್ಯಾಮ್ | 8 GB |
Oppo Reno 8 Pro Hands On Images Surface Online, India Pricing Tipped Again.
30-07-26 10:28 am
HK News Staffer
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
30-07-26 12:18 pm
HK News Staffer
ಮಂಗಳೂರು ಪೊಲೀಸರಿಂದ 82 ಕೋಟಿ ರೂ. ಮೌಲ್ಯದ ಡ್ರಗ್ಸ್...
29-07-26 10:45 pm
ಕೋರ್ಟ್ ಆವರಣದಲ್ಲಿ ವಕೀಲರಿಂದಲೇ ವ್ಯಕ್ತಿಯ ಮೇಲೆ ಹಲ್...
29-07-26 09:43 pm
Mangalore crime: ಆರೈಕೆ ನೆಪದಲ್ಲಿ ಬಂದ್ಲು ರಾಕ್ಷಸ...
29-07-26 06:51 pm
ಒಮಾನ್ನಲ್ಲಿ ಕೆಲಸದ ವೇಳೆ ದುರಂತ; ವಾಹನದ ಅಡಿಗೆ ಸಿಲ...
29-07-26 05:27 pm