ಬ್ರೇಕಿಂಗ್ ನ್ಯೂಸ್
10-06-22 08:55 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಮೊಬೈಲ್ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಪರಿಚಯಗೊಂಡಿರುವ OnePlus ಕಂಪೆನಿಯ ಮೊದಲ T-ಸಂಖ್ಯೆ ಸರಣಿಯ ನೂತನ OnePlus Nord 2T 5G ಸ್ಮಾರ್ಟ್‌ಫೋನನ್ನು ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ಮಧ್ಯಮ ಬೆಲೆಯಲ್ಲಿ ಬಿಡುಗಡೆಗೊಂಡಿರುವ OnePlus Nord 2T 5G ಸ್ಮಾರ್ಟ್‌ಫೋನನ್ನು ಇದೇ ಜೂನ್ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಪರಿಚಯಿಸಲು OnePlus ಕಂಪೆನಿ ಸನ್ನದ್ದಗೊಂಡಿದೆ ಎಂದು ಜನಪ್ರಿಯ ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಅವರು ಟ್ವೀಟ್ ಮಾಡಿ ತಿಳಿಸಿದ್ದು, ಈ ಮೂಲಕ ಬಹುನಿರೀಕ್ಷಿತ OnePlus Nord 2T ಸ್ಮಾರ್ಟ್‌ಫೋನ್ ಖರೀದಿಗಾಗಿ ಎದುರುನೋಡುತ್ತಿದ್ದ ದೇಶದ ಸ್ಮಾರ್ಟ್‌ಫೋನ್ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ.
ಕಳೆದ ತಿಂಗಳಷ್ಟೇ, ವಿಶ್ವ ಮೊಬೈಲ್ ಮಾರುಕಟ್ಟೆಗೆ OnePlus ಕಂಪೆನಿಯ ಮೊದಲ T-ಸಂಖ್ಯೆ ಸರಣಿಯ ನೂತನ OnePlus Nord 2T 5G ಸ್ಮಾರ್ಟ್‌ಫೋನನ್ನು ಪರಿಚಯಯಿಸಲಾಗಿತ್ತು. ಈ ನೂತನ ಸ್ಮಾರ್ಟ್‌ಪೋನ್ ಇತ್ತೀಚಿನ ಮೀಡಿಯಾ ಟೆಕ್ ಚಿಪ್‌ಸೆಟ್, AMOLED ಡಿಸ್‌ಪ್ಲೇ ಮತ್ತು ಟ್ರಿಪಲ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊತ್ತು ಅತ್ಯುತ್ತಮ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಭಾರತದಲ್ಲಿಯೂ nePlus Nord 2T 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಮಯದ ಬಗ್ಗೆ ಹೇಳಲಾಗಿದೆ. ಹಾಗಾದರೆ, ಭಾರತಕ್ಕೆ ಎಂಟ್ರಿ ನೀಡುತ್ತಿರುವ ಹೊಸ OnePlus Nord 2T ಸ್ಮಾರ್ಟ್‌ಫೋನ್ ಹೊಂದಿರುವ ಎಲ್ಲಾ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
OnePlus Nord 2T ವೈಶಿಷ್ಟ್ಯಗಳು
ಜಾಗತೀಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ನೂತನ OnePlus Nord 2T ಸ್ಮಾರ್ಟ್‌ಫೋನಿನಲ್ಲಿ ಎಡ ಮೂಲೆಯಲ್ಲಿ ಹೋಲ್-ಪಂಚ್ ಕಟೌಟ್ ವಿನ್ಯಾಸದ 6.43-ಇಂಚಿನ FHD+ AMOLED ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಸಹ ಹೊಂದಿದೆ. ಇನ್ನು ಇತ್ತೀಚಿಗಷ್ಟೇ ತೈವಾನೀಸ್ ಚಿಪ್‌ಮೇಕರ್ ಮೀಡಿಯಾಟೆಕ್ ಪರಿಚಯಿಸಿರುವ ಹೊಸ 'ಮೀಡಿಯಾ ಟೆಕ್ ಡೈಮೆನ್ಸಿಟಿ 1300' ಚಿಪ್‌ಸೆಟ್ ಅನ್ನು OnePlus Nord 2T ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದ್ದು, 8GB LPDDR4X RAM ಜೊತೆಗೆ 128GB UFS 3.1 ಸ್ಟೋರೇಜ್ ಮತ್ತು 12GB LPDDR4X RAM ಜೊತೆಗೆ 256GB UFS 3.1 ಸ್ಟೋರೇಜ್ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದೆ. ಆದರೆ, ಸ್ಮಾರ್ಟ್‌ಫೋನಿನಲ್ಲಿ ಮೆಮೊರಿಯನ್ನು ಹೆಚ್ಚಿಸಲು ಮೆಮೊರಿ ಸ್ಲಾಟ್ ಆಯ್ಕೆ ಇಲ್ಲ.
ಕ್ಯಾಮೆರಾ ವೈಶಿಷ್ಟ್ಯಗಳನ್ನು ನೋಡುವುದಾದರೆ, OnePlus Nord 2T ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು OIS ಗೆ ಬೆಂಬಲದೊಂದಿಗೆ 50MP ಸೋನಿ IMX766 ಮುಖ್ಯ ಕ್ಯಾಮೆರಾ 8MP ಅಲ್ಟ್ರಾವೈಡ್ ಮತ್ತು 2MP ಸೆಕೆಂಡರಿ ಕ್ಯಾಮೆರಾಗಳನ್ನು ಒಳಗೊಂಡಿವೆ. ಸೆಲ್ಫಿಗಳಿಗಾಗಿ ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi 6, ಬ್ಲೂಟೂತ್ 5.2, GPS, NFC, ಬೀಡೌ, ಗೆಲಿಲಿಯೋ ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳನ್ನು ನಾವು ನೋಡಬಹುದು. ಇನ್ನು ಆಂಡ್ರಾಯ್ಡ್ 12 ನಲ್ಲಿ ಆಕ್ಸಿಜನ್ ಓಎಸ್ 12 ನಲ್ಲಿ ಕೆಲಸ ನಿರ್ವಹಿಸಲಿರುವ ಈ ಸ್ಮಾರ್ಟ್‌ಪೋನ್ 80W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಹೊಂದಿದೆ.
OnePlus Nord 2T ಬೆಲೆ
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ OnePlus Nord 2T ಸ್ಮಾರ್ಟ್‌ಫೋನ್ ಶಾಡೋ ಮತ್ತು ಜೇಡ್ ಫಾಗ್ ಬಣ್ಣ ಆಯ್ಕೆಗಳಲ್ಲಿ EUR 399 ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ 32,400 ರೂ.ಗಳಾಗಿದ್ದು, ಅಮೆಜಾನ್ ಮತ್ತು OnePlus ನ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ. OnePlus Nord 2T 5G ಅನ್ನು ಮೇ ತಿಂಗಳಲ್ಲಿ ಹಲವಾರು ದೇಶಗಳಲ್ಲಿ EUR 399 (ಸರಿಸುಮಾರು ರೂ. 33,400) ಬೇಸ್ 8GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ ಮತ್ತು 12GB RAM + 256GB ಯ ವೇರಿಯಂಟ್‌ಗಾಗಿ EUR 499 (ಸರಿಸುಮಾರು ರೂ. 41,600) ನಲ್ಲಿ ಬಿಡುಗಡೆ ಮಾಡಲಾಯಿತು.
Oneplus Nord 2t 5g India Launch Date Leaked.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm