ಬ್ರೇಕಿಂಗ್ ನ್ಯೂಸ್
30-05-22 07:37 pm Source: Vijayakarnataka ಡಿಜಿಟಲ್ ಟೆಕ್
ಭವಿಷ್ಯವನ್ನು ಊಹಿಸಿ ಡಿಜಿಟಲ್ ಪರಿಕರಗಳ ತಯಾರಿಕೆಗೆ ಮುಂದಾಗಿರುವ ಭಾರತದ ನಂ.1 ಟೆಲಿಕಾಂ ಸಂಸ್ಥೆ ಹಾಗೂ ಡಿಜಿಟಲ್ ಬ್ರ್ಯಾಂಡ್ ರಿಲಯನ್ಸ್ ಜಿಯೋ ಇದೀಗ ದೇಶದಲ್ಲಿ ಗೇಮಿಂಗ್ ಪ್ರಪಂಚಕ್ಕೂ ಸಹ ಕಾಲಿಟ್ಟಿದೆ. ದೇಶದಲ್ಲಿನ ಗೇಮಿಂಗ್ ಪ್ರಿಯರಿಗಾಗಿ ಜಿಯೋ ತನ್ನ ಹೊಚ್ಚ ಹೊಸ 'ಜಿಯೋ ಗೇಮ್ ಕಂಟ್ರೋಲರ್' ಸಾಧನವನ್ನು ಬಿಡುಗಡೆ ಮಾಡಿದ್ದು, ಈ ಸಾಧನವು Android ಟ್ಯಾಬ್ಲೆಟ್‌ಗಳು ಮತ್ತು Android TV ಗಳಿಗೆ ಹೊಂದಿಕೊಳ್ಳುವ ವೈರ್‌ಲೆಸ್ ಗೇಮಿಂಗ್ ಕಂಟ್ರೋಲರ್ ಆಗಿದೆ ಎಂದು ತಿಳಿಸಿದೆ. ಗೇಮಿಂಗ್‌ನ ಕ್ಲಾಸಿಕ್ ಬಟನ್ ವಿನ್ಯಾಸದೊಂದಿಗೆ, ತಲ್ಲೀನಗೊಳಿಸುವ ಗೇಮಿಂಗ್ ಅನುಭವಕ್ಕಾಗಿ ಎರಡು ವೈಬ್ರೇಟ್ ಮೋಟಾರ್ ಮತ್ತು ಟ್ರಿಗ್ಗರ್‌ಗಳನ್ನು ಒಳಗೊಂಡಿರುವ ನೂತನ ಜಿಯೋ ಗೇಮ್ ಕಂಟ್ರೋಲರ್ ಸಾಧನವು ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
ಹೇಗಿದೆ ನೂತನ ಜಿಯೋ ಗೇಮ್ ಕಂಟ್ರೋಲರ್?
ನೂತನ ಜಿಯೋ ಗೇಮ್ ಕಂಟ್ರೋಲರ್ ಸಾಧನವು ವೈರ್‌ಲೆಸ್ ಗೇಮಿಂಗ್ ನಿಯಂತ್ರಕವಾಗಿದ್ದು, ಮೊದಲೇ ಹೇಳಿದಂತೆ ಈ ಸಾಧನವು Android ಟ್ಯಾಬ್ಲೆಟ್‌ಗಳು ಮತ್ತು Android TV ಗಳಿಗೆ ಹೊಂದಿಕೊಳ್ಳುತ್ತದೆ. ಆದಾಗ್ಯೂ, ಅತ್ಯುತ್ತಮ ಗೇಮಿಂಗ್ ಅನುಭವಕ್ಕಾಗಿ, ಗ್ರಾಹಕರು ಜಿಯೋ ಸೆಟ್-ಟಾಪ್-ಬಾಕ್ಸ್‌ನೊಂದಿಗೆ ಈ ಸಾಧನವನ್ನು ಬಳಸಬೇಕು ಎಂದು ಕಂಪನಿಯು ಸೂಚಿಸಿದೆ. (ಪ್ರಮುಖವಾಗಿ ಜಿಯೋ ಸೆಟ್-ಟಾಪ್-ಬಾಕ್ಸ್‌ನಲ್ಲಿ ಕನ್ಸೋಲ್ ತರಹದ ಗೇಮಿಂಗ್ ಮತ್ತು ಮಿಶ್ರ ರಿಯಾಲಿಟಿ (MR) ಅನುಭವಗಳನ್ನು ನೀಡಲು ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ). ಇನ್ನು ಈ ಜಿಯೋ ಗೇಮ್ ಕಂಟ್ರೋಲರ್ ಸಾಧನವು ಕಡಿಮೆ ಲೇಟೆನ್ಸಿ ಸಂಪರ್ಕಕ್ಕಾಗಿ ಬ್ಲೂಟೂತ್ v4.1 ತಂತ್ರಜ್ಞಾನವನ್ನು ಹೊಂದಿದ್ದು, ಇದು 10 ಮೀಟರ್ ವರೆಗಿನ ವೈರ್‌ಲೆಸ್ ವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ಇನ್ನು ಜಿಯೋ ಗೇಮ್ ಕಂಟ್ರೋಲರ್ ಸಾಧನವು ಚಾರ್ಜ್ ಮಾಡಬಹುದಾದ Li-ion ಬ್ಯಾಟರಿಯನ್ನು ಹೊಂದಿದ್ದು, ಇದು 8 ಗಂಟೆಗಳವರೆಗೆ ಬ್ಯಾಕಪ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಸಾಧನವನ್ನು ಚಾರ್ಜ್ ಮಾಡಲು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ನೀಡಲಾಗಿದೆ. ಎರಡು ಪ್ರಶೆರ್ ಪಾಂಯಿಂಟ್ ಟ್ರಿಗರ್‌ಗಳು, ಎಂಟು ಡೈರೆಕ್ಷನ್ (ದಿಕ್ಕು) ಬಟನ್‌ಗಳು ಸೇರಿದಂತೆ ಒಟ್ಟು 20-ಬಟನ್‌ಗಳನ್ನು ಈ ಜಿಯೋ ಗೇಮ್ ಕಂಟ್ರೋಲರ್ ಸಾಧನವು ಒಳಗೊಂಡಿದೆ. ಎರಡು ಜಾಯ್‌ಸ್ಟಿಕ್ ಗಳನ್ನು ಹೊಂದಿರುವ ಈ ಸಾಧನವು ತಲ್ಲೀನಗೊಳಿಸುವ ಗೇಮಿಂಗ್ ಅನುಭವಕ್ಕಾಗಿ ಎರಡು ವೈಬ್ರೇಟ್ಮೋಟಾರ್‌ಗಳನ್ನು ಹಾಗೂ ಹ್ಯಾಪ್ಟಿಕ್ ನಿಯಂತ್ರಣವನ್ನು ಸಹ ಬೆಂಬಲಿಸುತ್ತದೆ. 153x58x110mm ಆಯಾಮಗಳನ್ನು ಹೊಂದಿರುವ ಈ ಸಾಧನವು ಸುಮಾರು 200g ನಷ್ಟು ತೂಗುತ್ತದೆ ಎಂದು ತಿಳಿದುಬಂದಿದೆ.
ಜಿಯೋವಿನ ಮೊಟ್ಟ ಮೊದಲ ಹೊಸ ವೈರ್‌ಲೆಸ್ ಗೇಮಿಂಗ್ ಕಂಟ್ರೋಲರ್ ಸಾಧನ 'ಜಿಯೋ ಗೇಮ್ ಕಂಟ್ರೋಲರ್' ಪ್ರಸ್ತುತ ಅಧಿಕೃತ ಜಿಯೋ ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಈ ಸಾಧನವ ಬೆಲೆ 3,499 ರೂ.ಗಳಾಗಿದ್ದು, ಮ್ಯಾಟ್ ಬ್ಲ್ಯಾಕ್ ಫಿನಿಶ್ ಏಕೈಕ ಬಣ್ಣದಲ್ಲಿ EMI ಕೊಡುಗೆಗಳೊಂದಿಗೆ ಸಾಧನವನ್ನು ಖರೀದಿಸಬಹುದು.
Jio Game Controller With 8 Hour Battery Life Launched.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm