ಬ್ರೇಕಿಂಗ್ ನ್ಯೂಸ್
23-05-22 07:42 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Infinix ದೇಶದಲ್ಲಿಂದು ತನ್ನ ವಿನೂತನ Infinix Hot 12 Play ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ. ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಬಯಸುತ್ತಿರುವ ಜನರಿಗಾಗಿ ಕೇವಲ 8,499 ರೂ.ಗಳ ಬಜೆಟ್ ಬೆಲೆಯಲ್ಲಿ Infinix Hot 12 Play ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಾಗಿದ್ದು, ಈ ಬೆಲೆಯಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 6.82-ಇಂಚಿನ IPS LCD ಡಿಸ್‌ಪ್ಲೇ, ಡ್ಯುಯಲ್ ಪ್ರೈಮರಿ ಕ್ಯಾಮೆರಾ ಮತ್ತು 6,000 mAh ಬೃಹತ್ ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗಾದರೆ, ನೂತನ Infinix Hot 12 Play ಸ್ಮಾರ್ಟ್‌ಫೋನ್ ಹೇಗಿದೆ? ಮತ್ತು ಈ ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ನೂತನ Infinix Hot 12 Play ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್-ಟೋನ್ ಫಿನಿಶ್‌ನೊಂದಿಗೆ ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿದ್ದು, ಪರದೆಯ ಸುತ್ತಲೂ ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದೆ. ಸೆಲ್ಫಿ ಸ್ನ್ಯಾಪರ್ ಇರಿಸಲು ಪಂಚ್-ಹೋಲ್ ಪ್ರದರ್ಶನವನ್ನು ತರಲಾಗಿರುವ ಈ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಮೇಲಿನ ಎಡ ಮೂಲೆಯಲ್ಲಿ ದೊಡ್ಡ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಇದೆ. ವರ್ಧಿತ ಭದ್ರತೆಗಾಗಿ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ನಾವು ನೋಡಬಹುದು. ಇನ್ನು ಈ ಸ್ಮಾರ್ಟ್‌ಫೋನ್ ರೇಸಿಂಗ್ ಬ್ಲ್ಯಾಕ್, ಹೊರೈಜನ್ ಬ್ಲೂ, ಷಾಂಪೇನ್ ಗೋಲ್ಡ್ ಮತ್ತು ಡೇಲೈಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ.
ಮೊದಲೇ ಹೇಳಿದಂತೆ, Infinix Hot 12 Play ಸ್ಮಾರ್ಟ್‌ಫೋನಿನಲ್ಲಿ 20.5:9 ಆಕಾರ ಅನುಪಾತದ 6.82-ಇಂಚಿನ IPS LCD ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. 1,640 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರುವ ಈ ಡಿಸ್‌ಪ್ಲೇಯು 90Hz ನ ಸ್ಕ್ರೀನ್ ರಿಫ್ರೆಶ್ ರೇಟ್, 180Hz 480 ನಿಟ್ಸ್ ಬ್ರೈಟ್‌ನೆಸ್ ಮತ್ತು ಪಾಂಡಾ MN228 ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಹುಡ್ ಅಡಿಯಲ್ಲಿ, ಆಕ್ಟಾ-ಕೋರ್ UNISOC T610 ಪ್ರೊಸೆಸರ್ ಅನ್ನು ಈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದ್ದು, ಇದು ಎರಡು ಕಾರ್ಟೆಕ್ಸ್-A75 ಕೋರ್‌ಗಳು ಮತ್ತು ಆರು ಕಾರ್ಟೆಕ್ಸ್-A55 ಕೋರ್‌ಗಳನ್ನು ಹೊಂದಿದೆ. 12nm ಫ್ಯಾಬ್ರಿಕೇಶನ್ ಪ್ರಕ್ರಿಯೆ ಆಧಾರಿತ ಮಾಲಿ-ಜಿ 52 ಗ್ರಾಫಿಕ್ಸ್ ಅನ್ನು ಪ್ರೊಸೆಸರ್‌ನೊಂದಿಗೆ ಜೋಡಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಕ್ಯಾಮೆರಾ ವಿಭಾಗದಲ್ಲಿ, Infinix Hot 12 Play ಸ್ಮಾರ್ಟ್‌ಫೋನ್ f/1.8 ಅಪಾರ್ಚರ್ ಲೆನ್ಸ್‌ನೊಂದಿಗೆ 13MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದರ ಜೊತೆಗೆ ಡೆಪ್ತ್-ಸೆನ್ಸಿಂಗ್ ಸೆಕೆಂಡರಿ ಕ್ಯಾಮೆರಾ ಹಾಗೂ ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ, ಈ ಸಾಧನವು f/2.0 ಅಪಾರ್ಚರ್‌ನೊಂದಿಗೆ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸಂಪರ್ಕ ಆಯ್ಕೆಗಳಲ್ಲಿ 4G VoLTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.1, GPS ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಸೇರಿವೆ. 6,000 mAh ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. 4GB RAM ಮತ್ತು 64GB ಸ್ಟೋರೇಜ್ ಏಕೈಕ ಸ್ಟೋರೇಜ್ ಮಾದರಿಯಲ್ಲಿ ಬಂದಿರುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಹೆಚ್ಚಿಸಬಹುದು.
ಮೊದಲೇ ಹೇಳಿದಂತೆ, ಭಾರತದಲ್ಲಿ Infinix Hot 12 Play ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್ ಏಕೈಕ ಸ್ಟೋರೇಜ್ ಮಾದರಿಯಲ್ಲಿ 8,499 ರೂ.ಗಳ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿವೆ. Xiaomi Redmi 9 Prime, Poco M2, Realme Narzo 30A, Realme C15 ಮತ್ತು Vivo U10 ಸ್ಮಾರ್ಟ್‌ಫೋಗಳ ವಿರುದ್ಧ ಸ್ಪರ್ಧಿಸುವಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
Infinix Hot 12 Play Budget Phone With 6000mah Battery Launched.
04-05-25 09:15 pm
HK News Desk
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 08:49 pm
Mangalore Correspondent
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm