ಬ್ರೇಕಿಂಗ್ ನ್ಯೂಸ್
15-04-22 08:15 pm Mangalore Correspondent ಕ್ರೈಂ
ಉಳ್ಳಾಲ, ಎ.15: ಬೆಲೆಬಾಳುವ ವಾಚ್ ಕಳವು ಆರೋಪಿಯನ್ನ ಬಂಧಿಸಲು ತೆರಳಿದ್ದ ಕೊಣಾಜೆ ಪಿಎಸ್ಐ ಶರಣಪ್ಪ ಅವರಿಗೆ ಇರಿದು ಭೂಗತನಾಗಿ, ಬೆಂಗಳೂರಲ್ಲಿ ಗೊಂಬೆ ಮಾರುತ್ತಿದ್ದ ಖತರ್ ನಾಕ್ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಲೆತ್ತೂರು, ಕಾಡುಮಠ ನಿವಾಸಿ ಮಹಮ್ಮದ್ ಸಾದಿಕ್(23) ಪಿಎಸ್ಐಗೆ ಇರಿದು ಪರಾರಿಯಾಗಿ ಸಿಕ್ಕಿಬಿದ್ದ ಆರೋಪಿ. ಮಂಗಳೂರಿನ ಬಂದರು ಠಾಣೆ ವ್ಯಾಪ್ತಿಯಲ್ಲಿ ಬೆಲೆ ಬಾಳುವ ವಾಚ್ ಕಳ್ಳತನ ಪ್ರಕರಣ ನಡೆದಿತ್ತು. ಕೃತ್ಯ ನಡೆಸಿದ ಆರೋಪಿ ಮಹಮ್ಮದ್ ಸಾದಿಕ್ ನಟೋರಿಯಸ್ ಆಗಿದ್ದು ಈ ಹಿಂದೆ ಕೂಡ ತನ್ನನ್ನ ಬಂಧಿಸಲು ತೆರಳಿದ್ದ ಬಂದರು ಪೊಲೀಸ್ ಠಾಣೆ ಸಿಬ್ಬಂದಿ ವಿನೋದ್ ಎಂಬವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ.
ಕಳೆದ ಮಾ.23 ರ ಬುಧವಾರ ರಾತ್ರಿ ಕಳ್ಳತನ ಆರೋಪಿ ಸಾದಿಕ್ ಕೊಣಾಜೆ ಠಾಣೆ ವ್ಯಾಪ್ತಿಯ ಅರ್ಕಾಣ ಎಂಬಲ್ಲಿನ ತನ್ನ ಪತ್ನಿ ಮನೆಯಲ್ಲಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಕೊಣಾಜೆ ಪಿಎಸ್ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ ಸಾದಿಕ್ ಬಂಧನಕ್ಕೆ ತೆರಳಿದ್ದ ವೇಳೆ ಪಿಎಸ್ಐಗೆ ಇರಿದು ಪರಾರಿಯಾಗಿದ್ದ. ಸಾದಿಕ್ ಪರಾರಿಯಾಗಲು ಸಹಕರಿಸಿದ್ದ ಆತನ ಸಹೋದರ ನಾಸಿರ್ ಎಂಬಾತನನ್ನ ಪೊಲೀಸರು ಬಂಧಿಸಿ ಠಾಣೆಯಲ್ಲಿ ವಿಚಾರಣೆ ನಡೆಸಿದ್ದರು.
ಚೂರಿ ಇರಿದ ಖತರ್ನಾಕ್ ಕಳ್ಳ ಸಾದಿಕ್ ಮಾತ್ರ 20 ದಿವಸ ಭೂಗತನಾಗಿದ್ದ. ಆರಂಭದಲ್ಲಿ ಗುಜರಾತಿಗೆ ಪಲಾಯನಗೈದಿದ್ದ ಆರೋಪಿ ಕಳೆದ ಬುಧವಾರ ಬೆಂಗಳೂರಿಗೆ ಆಗಮಿಸಿದ್ದ. ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟಲ್ಲಿ ಸಾದಿಕ್ ಸ್ನೇಹಿತನೊಂದಿಗೆ ಆಟಿಕೆ ಗೊಂಬೆಗಳನ್ನು ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಮಹಮ್ಮದ್ ಸಾದಿಕನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ವಿರುದ್ಧ ಕೇರಳದಲ್ಲಿ ಹಲವಾರು ಪ್ರಕರಣಗಳಿವೆಯಂತೆ.
ಎಸಿಪಿ ದಿನಕರ ಶೆಟ್ಟಿ ಮಾರ್ಗದರ್ಶನದಲ್ಲಿ ಕೊಣಾಜೆ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ, ಪಿಎಸ್ಐ ಶರಣಪ್ಪ ಭಂಡಾರಿ, ಸಿಬ್ಬಂದಿಗಳಾದ ಅಶೋಕ್, ಶಿವ, ಪುರುಷೋತ್ತಮ್, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Mangalore Attack on Ullal PSI, two arrested in Bangalore. The two were said to be selling dolls in Bangalore. PSI was attacked with lethal weapons a few weeks ago.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm