ಬ್ರೇಕಿಂಗ್ ನ್ಯೂಸ್
08-03-22 04:15 pm HK Desk ಕ್ರೈಂ
ಶಿವಮೊಗ್ಗ, ಮಾ.8: ರಾಜ್ಯದಲ್ಲಿ ಸಂಚಲನ ಎಬ್ಬಿಸಿದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಬಂಧಿತರಾದ ಹತ್ತು ಮಂದಿ ಆರೋಪಿಗಳ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಯುಎಪಿಎ ಕಾಯ್ದೆಯಡಿ ಕೇಸು ದಾಖಲು ಮಾಡಿರುವುದರಿಂದ ಪ್ರಕರಣವನ್ನು ಸದ್ಯದಲ್ಲೇ ಎನ್ಐಎ ತನಿಖೆಗೆ ಒಪ್ಪಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಯುಎಪಿಎ ಕಾಯ್ದೆಯನ್ನು ಸಾಮಾನ್ಯವಾಗಿ ರಾಷ್ಟ್ರೀಯ ಭದ್ರತೆ ಮತ್ತು ಆಂತರಿಕ ಸಮಗ್ರತೆಗೆ ಧಕ್ಕೆಯಾದ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಅನ್ವಯ ಮಾಡಲಾಗುತ್ತದೆ. ಆದರೆ ಇಲ್ಲಿ ಒಂದು ಕೊಲೆ ಪ್ರಕರಣಕ್ಕೂ ಆರೋಪಿಗಳನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಿದ್ದು ಆಕ್ಷೇಪಕ್ಕೂ ಕಾರಣವಾಗಿದೆ. ಹರ್ಷ ಕೊಲೆ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದೇಶದ್ರೋಹದ ಕಾಯ್ದೆ ಅಳವಡಿಸಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಯುಎಪಿಎ ಕಾಯ್ದೆ ಪ್ರಕಾರ, ಆರೋಪಿಗಳನ್ನು ಪೊಲೀಸರು 30 ದಿನಗಳ ವರೆಗೆ ವಿಚಾರಣೆಗಾಗಿ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿರುತ್ತದೆ. ಅಲ್ಲದೆ, ಪ್ರಕರಣದಲ್ಲಿ ತನಿಖಾಧಿಕಾರಿಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು 90 ದಿನಗಳ ಬದಲಿಗೆ 180 ದಿನಗಳ ವರೆಗೂ ಅವಕಾಶ ಇರುತ್ತದೆ. ಫೆ.20ರಂದು ರಾತ್ರಿ ನಡೆದ ಹರ್ಷ ಕೊಲೆ ಪ್ರಕರಣ ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ದ್ವೇಷದ ಅಹಿತಕರ ಘಟನೆ ನಡೆಯಲು ಕಾರಣವಾಗಿತ್ತು. ಇದೇ ವೇಳೆ, ಈ ಕೊಲೆಯ ಹಿಂದೆ ಪಿಎಫ್ಐ ಮತ್ತು ಎಸ್ಡಿಪಿಐ ಇದೆಯೆಂದೂ, ಅದನ್ನು ಬ್ಯಾನ್ ಮಾಡಬೇಕೆಂದು ಭಾರೀ ಆಗ್ರಹ ಕೇಳಿಬಂದಿತ್ತು.
ಈ ಮಧ್ಯೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಪಿಎಫ್ಐ ಅಥವಾ ಎಸ್ಡಿಪಿಐ ನಿಷೇಧ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಹರ್ಷನ ಮನೆಗೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ, ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದರು. ಕೊಲೆಯಾದ ಹರ್ಷ ಹಿಂದು ಪರ ಮತ್ತು ಹಿಜಾಬ್ ವಿರೋಧಿಸಿ ಪೋಸ್ಟ್ ಹಾಕುತ್ತಿದ್ದ. ಇದೇ ವಿಚಾರದಲ್ಲಿ ಆತನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸ್ ತನಿಖೆಯಲ್ಲಿ ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣ ಎನ್ನುವ ಮಾಹಿತಿ ಹೊರಬಂದಿತ್ತು. ಇದೀಗ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವ ಸಾಧ್ಯತೆ ಕಂಡುಬಂದಿದೆ.
Moreover, there are possibilities that once the local police investigation is completed, the government may turn the case over to the National Investigation Agency (NIA).
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm