ಬ್ರೇಕಿಂಗ್ ನ್ಯೂಸ್
15-02-22 11:01 pm HK Desk news ಕ್ರೈಂ
ಭುವನೇಶ್ವರ, ಫೆ.15 : ಎಷ್ಟೋ ಯುವಕರು ತಮಗೆ ವಯಸ್ಸಾದರೂ ಸೂಕ್ತ ಹೆಣ್ಣು ಸಿಗುತ್ತಿಲ್ಲ. ಮದುವೆಯಾಗಿಲ್ಲ ಎಂಬ ಕೊರಗಿನಲ್ಲಿ ಇರುತ್ತಾರೆ. ಆದರೆ ಇಲ್ಲೊಬ್ಬ ಭೂಪ ಒಂದಲ್ಲ , ಎರಡಲ್ಲ ಬರೋಬ್ಬರಿ 14 ಮದುವೆಯಾಗಿದ್ದು ಭಾರೀ ಸುದ್ದಿಯಾಗಿದ್ದಾಳೆ. ವಿಶೇಷ ಅಂದ್ರೆ, ಏಳು ಬೇರೆ ಬೇರೆ ರಾಜ್ಯಗಳ ಹೆಣ್ಣು ಮಕ್ಕಳನ್ನು ಮದುವೆಯಾಗಿ ಯಾಮಾರಿಸಿದ್ದಾನೆ.
65 ವರ್ಷ ವಯಸ್ಸಿನ ಒಡಿಶಾದ ಕೇಂದ್ರಪಾರ ಜಿಲ್ಲೆಯ ನಿವಾಸಿ ಬಿಧು ಪ್ರಕಾಶ್ ಸ್ವೈನ್ ಎಂಬ ಈ ಭೂಪ ಕಳೆದ 38 ವರ್ಷಗಳಿಂದ ಮದುವೆಯಾಗುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ. ಏಳು ರಾಜ್ಯಗಳ 14 ಮಹಿಳೆಯರನ್ನು ಮದುವೆಯಾಗಿದ್ದು, ಕೊನೆಗೂ ಬಂಧನಕ್ಕೆ ಒಳಗಾಗಿದ್ದಾನೆ. ವಿಚಿತ್ರ ಎಂದರೆ ಈತನ ಬಲೆಗೆ ಬಿದ್ದವರ ಪೈಕಿ ಹಲವರು ವೈದ್ಯರು, ವಕೀಲರು, ಶಿಕ್ಷಕಿಯರು ಹಾಗೂ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರೇ. ಪ್ಯಾರಾ ಮಿಲಿಟರಿ ಪಡೆಯಲ್ಲಿ ಕೆಲಸ ಮಾಡುವ ಮಹಿಳೆಯನ್ನೂ ಮದುವೆಯಾಗಿದ್ದಾನೆ!
ಮ್ಯಾಟ್ರಿಮೊನಿ ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದ ಈ ವ್ಯಕ್ತಿ ತನ್ನನ್ನು ವೈದ್ಯ ಎಂದು ಹೇಳಿಕೊಂಡಿದ್ದ. ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ನಂತರ ಅಲ್ಲಿ ಮದುವೆಗಾಗಿ ಜಾಹೀರಾತು ನೀಡುವ ದೊಡ್ಡ ದೊಡ್ಡ ಹುದ್ದೆಯ ಮಹಿಳೆಯರು, ಸಿರಿವಂತರನ್ನು ಟಾರ್ಗೆಟ್ ಮಾಡುತ್ತಿದ್ದ. ನಂತರ ತಾನು ವೈದ್ಯ, ಇಂತಿಷ್ಟು ಆದಾಯ ಎಂದೆಲ್ಲಾ ಸುಳ್ಳು ಹೇಳಿ ನಂಬಿಸುತ್ತಿದ್ದ. ಹಿಂದೆ ಮುಂದೆ ಯೋಚಿಸದ ಮಹಿಳೆಯರು ಈತನ ಬಲೆಗೆ ಬೀಳುತ್ತಿದ್ದರು. ಅವರನ್ನು ಮದುವೆಯಾಗುತ್ತಿದ್ದ ಆಸಾಮಿ, ಅವರಿಂದಲೇ ಚಿನ್ನ, ಹಣ ಕದ್ದು ಬಳಿಕ ಎಸ್ಕೇಪ್ ಆಗುತ್ತಿದ್ದ. ಮರ್ಯಾದೆಗೆ ಅಂಜಿ ಮಹಿಳೆಯರು ದೂರು ಕೊಡುತ್ತಿರಲಿಲ್ಲ.
1982ರಲ್ಲಿ ಮೊದಲ ಮದುವೆಯಾಗಿದ್ದ ಈತ 2002ರಲ್ಲಿ ಎರಡನೇ ಮದುವೆಯಾಗಿದ್ದ. 1982ರಲ್ಲಿ ಮೊದಲ ವಿವಾಹವಾಗಿದ್ದರೆ, 2020 ರಲ್ಲಿ ಕೊನೆಯ ಬಾರಿಗೆ ದೆಹಲಿಯ ಶಿಕ್ಷಕಿಯೊಬ್ಬರನ್ನು ಮದುವೆಯಾಗಿದ್ದ. ಈ ನಡುವೆ ಹಲವು ಕಡೆ ಐವರು ಮಕ್ಕಳನ್ನು ಹೊಂದಿರುವ ಬಗ್ಗೆ ಮಾಹಿತಿಯಿದೆ. ಹೆಚ್ಚಾಗಿ ಮಧ್ಯವಯಸ್ಕ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿ ಮದುವೆಯಾಗಿಸುತ್ತಿದ್ದ. ಈತನ ಬಲೆಗೆ ಬಿದ್ದವರ ಪೈಕಿ ಹಲವರು ವಿಚ್ಛೇದಿತರು ಎಂದು ಭುವನೇಶ್ವರ ಉಪ ಪೊಲೀಸ್ ಆಯುಕ್ತ ಉಮಾಶಂಕರ್ ದಾಸ್ ಹೇಳಿದ್ದಾರೆ.
ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿ ಮಹಿಳೆಯರನ್ನು ಈ ವ್ಯಕ್ತಿ ವಂಚಿಸಿದ್ದಾನೆ. ಮೊದಲ ಇಬ್ಬರು ಪತ್ನಿಯರು ಒಡಿಶಾದವರಾಗಿದ್ದು ಕೊನೆಯ ಪತ್ನಿ ದೆಹಲಿಯಲ್ಲಿದ್ದು ಶಿಕ್ಷಕಿಯಾಗಿದ್ದಾರೆ. ಶಿಕ್ಷಕಿಗೆ ಮದುವೆಯಾದ ಮೇಲೆ ಅನುಮಾನ ಬಂದು ಪೊಲೀಸರಲ್ಲಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಮದುವೆಯಾಗಿ ಕೆಲವು ದಿನಗಳ ಕಾಲ ಜೊತೆಗಿರುತ್ತಿದ್ದ ಪ್ರಕಾಶ್ ಆನಂತರ ಕೇಂದ್ರೀಯ ಸೇವೆಯಲ್ಲಿ ಪ್ರವಾಸ ಇದೆಯೆಂದು ಹೇಳಿ ಉತ್ತರ ಭಾರತ, ಒಡಿಶಾ ಎಂದು ಹೇಳಿ ಹೋಗುತ್ತಿದ್ದ. ಇಂಥ ಸಂದರ್ಭದಲ್ಲಿ ದೆಹಲಿಯಲ್ಲಿ ಹೊಸ ಆಸ್ಪತ್ರೆ ಮಾಡುತ್ತಿರುವುದಾಗಿ ಹೇಳಿ ಪತ್ನಿಯರಿಂದಲೇ ಹಣ ಪಡೆಯುತ್ತಿದ್ದ. ಇಬ್ಬರಿಂದ ತಲಾ ಹತ್ತು ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಯ ಬಳಿಯಿಂದ 11 ಎಟಿಎಂ ಕಾರ್ಡ್‌ಗಳು, ನಾಲ್ಕು ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
He lured with love college teachers, even hard-boiled policewomen and captious lawyers, as he went about striking middle-aged women desperate for companionship with cupid's arrow, marrying 14 of them across seven states over 38 years before running out of luck on Monday. Ramesh Chandra Swain, the 66-year-old from a coastal village in Odisha's Kendrapara district, is now cooling his heels in a jail in judicial custody
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am