ಬ್ರೇಕಿಂಗ್ ನ್ಯೂಸ್
14-12-21 12:20 pm HK Desk news ಕ್ರೈಂ
ಬೆಂಗಳೂರು, ಡಿ.14 : ಗಂಡ – ಹೆಂಡತಿ ನಡುವಿನ ಜಗಳದಲ್ಲಿ ಸಣ್ಣ ಮಗು ಪ್ರಾಣವನ್ನೇ ಬಿಟ್ಟಿದೆ. ಪತ್ನಿ ಮೇಲಿನ ಸಿಟ್ಟಿನಲ್ಲಿ ತಂದೆಯೇ ತನ್ನ 10 ವರ್ಷ ಪ್ರಾಯದ ಮಗುವನ್ನು ನೀರು ತುಂಬಿದ್ದ ಸಂಪ್ ಹೊಂಡಕ್ಕೆ ಎಸೆದು ನೇಣಿಗೆ ಶರಣಾಗಿರುವ ಘಟನೆ ಸಂಪಂಗಿರಾಮ ನಗರದಲ್ಲಿ ನಡೆದಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸುರೇಶ್ 15 ವರ್ಷಗಳ ಹಿಂದೆ ಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದು, ಮಗು ಕೂಡ ಆಗಿತ್ತು. ಆದರೆ ಮಗು ಬೆಳೆಯುತ್ತಿದ್ದಂತೆ ಬುದ್ಧಿಮಾಂದ್ಯ ಆಗಿದ್ದು, ಸಹಜ ಬೆಳವಣಿಗೆಯಿಂದ ವಂಚಿತವಾಗಿತ್ತು. ಆದರೆ, ಇದೇ ವೇಳೆ ಬೆನ್ನು ನೋವಿಗೆ ತುತ್ತಾದ ಸುರೇಶ್ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ಒಳಗಾಗಿದ್ದ. ಮಗ ಉದಯ್ ಸಾಯಿರಾಂ ಚಿಕಿತ್ಸೆಗೆ ಖರ್ಚು ಮಾಡಲು ಸಾಧ್ಯವಾಗದ ಕಾರಣ, ಇದೇ ವಿಚಾರದಲ್ಲಿ ಪತಿ- ಪತ್ನಿಯ ಮಧ್ಯೆ ಜಗಳ ಆಗುತ್ತಿತ್ತು.
ಸೋಮವಾರ ಬೆಳಗ್ಗೆ ಪತ್ನಿ ಇನ್ನೂ ಎದ್ದೇಳದೇ ಇರುವಾಗಲೇ ಮಗುವನ್ನು ಎತ್ತಿಕೊಂಡು ಹೋಗಿದ್ದ ಸುರೇಶ್, ಹತ್ತು ವರ್ಷದ ಮಗುವನ್ನು ನೀರಿನ ಸಂಪ್ ಗೆ ಬಿಸಾಡಿ ತೆರಳಿದ್ದ. ಆನಂತರ ಶೇಷಾದ್ರಿಪುರಂ ರೈಲ್ವೇ ಹಳಿಯ ಬಳಿ ತೆರಳಿ, ಅಲ್ಲಿ ನೇಣಿಗೆ ಶರಣಾಗಿದ್ದ. ಪತ್ನಿ ಲಕ್ಷ್ಮಿ ಎದ್ದು ನೋಡಿದಾಗ, ಮಗು ಕಾಣಿಸದೇ ಇದ್ದುದರಿಂದ ಹುಡುಕಾಟ ನಡೆಸಿದ್ದಾಳೆ. ಪತಿಯೂ ಇರದೇ ಇದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಬಳಿಕ ಹುಡುಕಾಟ ನಡೆಸಿದಾಗ, ನೀರಿನ ಸಂಪ್ ನಲ್ಲಿ ಮಗುವಿನ ಶವ ಕಂಡುಬಂದಿದೆ. ಪೊಲೀಸರು ಶೇಷಾದ್ರಿಪುರಂ ಬಳಿ ಸುರೇಶ್ ನೇಣು ಬಿಗಿದ ರೀತಿಯಲ್ಲಿ ಕಂಡುಬಂದಿದ್ದನ್ನು ಪತ್ತೆ ಮಾಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
A man ended his life after killing his 10-year-old specially-abled son as a fallout of some domestic dispute in Sampangiramnagar locality of Bengaluru, police said on Tuesday. According to police, Suresh (40) an auto driver and had married Lakshmi 15 years ago. The couple was dejected as their son was specially-abled.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 09:42 pm
HK News Desk
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm