ಬ್ರೇಕಿಂಗ್ ನ್ಯೂಸ್
04-12-21 07:35 pm HK Desk news ಕ್ರೈಂ
ಬೆಂಗಳೂರು, ಡಿ.4 : ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಹೇಳಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಸಂತ್ರಸ್ತ ಯುವತಿ ನೀಡಿದ ದೂರಿನಂತೆ, ಆಕೆಯ ಸ್ನೇಹಿತರಾದ ದೇವಸಂದ್ರ ನಿವಾಸಿಗಳಾದ ಬ್ರಿಜ್ ಭೂಷಣ್ ಯಾದವ್ (21) ಮತ್ತು ವಿವೇಕ್ ರೆಡ್ಡಿ (20) ಎಂಬವರನ್ನು ಬಂಧಿಸಲಾಗಿದೆ.
ಕೆ.ಆರ್.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಯುವತಿಗೆ ಆರೋಪಿ ಬ್ರಿಜ್‌ಭೂಷಣ್ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ಪದೇ ಪದೆ ಸಂತ್ರಸ್ತೆಯ ಮನೆಗೆ ಬರುತ್ತಿದ್ದ. ಆನಂತರ ಯುವತಿ ಆರೋಪಿ ಯಿಂದ ಅಂತರ ಕಾಯ್ದುಕೊಂಡಿದ್ದಳು. ಈ ನಡುವೆ ಆರೋಪಿ 2018ರಲ್ಲಿ 'ನನ್ನ ಬಳಿ ನಿನ್ನ ಬೆತ್ತಲೆ ಫೋಟೋಗಳಿವೆ. ಹಣ, ಚಿನ್ನಾಭರಣ ತಂದು ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳನ್ನು ಹಾಕುತ್ತೇನೆ' ಎಂದು ಬೆದರಿಕೆಯೊ ಡ್ಡುತ್ತಿದ್ದ.
ಇದರಿಂದ ಆತಂಕಗೊಂಡ ಯುವತಿ ಮನೆಯಲ್ಲಿದ್ದ 218 ಗ್ರಾಂ ಚಿನ್ನಾಭರಣ, 75 ಸಾವಿರ ರು. ನಗದು ಕೊಟ್ಟಿದ್ದಳು. ಇದೇ ವೇಳೆ, ಯುವತಿಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದ ಬ್ರಿಜ್ ಭೂಷಣ್‌ನ ಸ್ನೇಹಿತ ವಿವೇಕ್ ರೆಡ್ಡಿ 2019ರಲ್ಲಿ ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದ. ಬಳಿಕ ರಾಚೇನಹಳ್ಳಿ ಕೆರೆ ಬಳಿ ಕರೆಸಿಕೊಂಡು ಅಸಭ್ಯವಾಗಿ ನಡೆದುಕೊಂಡಿದ್ದ. ಒಮ್ಮೆ ಕರೆ ಮಾಡಿ 'ನಿನ್ನ ಖಾಸಗಿ ಫೋಟೋ' ಇದೆ ಎಂದು ಬೆದರಿಸಿದ್ದು ಬ್ಲಾಕ್ ಮೇಲ್ ಆರಂಭಿಸಿದ್ದ.
ಹಣ, ಒಡವೆ ಕೊಡದಿದ್ದರೆ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಸಿದ್ದ. ಇದರಿಂದ ಹೆದರಿದ ಸಂತ್ರಸ್ತೆ, ತನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿದ್ದಳು. ಆದರೂ ಆರೋಪಿಗಳು ಪದೇ ಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇದರಿಂದ ಬೇಸತ್ತ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Bangalore Two arrested for blackmailing girl of her nude pics. Blackmailers had demanded gold and cash from her after which the girl had given it to them.
25-08-25 10:37 am
HK News Desk
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 10:49 pm
Mangalore Correspondent
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
25-08-25 02:29 am
Mangaluru Correspondent
ಮುಸ್ಲಿಂ ಗಂಡನನ್ನು ರಾಡ್ ನಲ್ಲಿ ಹೊಡೆದು ಕೊಲೆಗೈದು ಶ...
24-08-25 10:33 pm
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm