ಬ್ರೇಕಿಂಗ್ ನ್ಯೂಸ್
23-11-21 01:36 pm HK news Desk ಕ್ರೈಂ
ಬೆಂಗಳೂರು, ನ.23: ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಕಾಲೇಜು ಓದುತ್ತಿದ್ದ ಮಗಳೇ ತನ್ನ ಸ್ನೇಹಿತರಿಗೆ ಹೇಳಿ ಕೊಲ್ಲಿಸಿದ ಪ್ರಕರಣ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ಬೆಳ್ಳಂಬೆಳಗ್ಗೆ ಯಲಹಂಕದಲ್ಲಿ ಇಬ್ಬರು ಮಕ್ಕಳ ಎದುರಲ್ಲೇ ತಂದೆಯನ್ನು ಕೊಂದ ಘಟನೆ ನಡೆದಿತ್ತು. ಹರೆಯದ ಹೆಣ್ಮಕ್ಕಳ ಎದುರಲ್ಲೇ ನಡೆದುಹೋಗಿದ್ದ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಯಾರೋ ಆಗಂತುಕರು ಮನೆಗೆ ನುಗ್ಗಿ ಕೊಂದಿದ್ದಾಗಿ ದಾಖಲಾಗಿದ್ದ ಪ್ರಕರಣದ ಬೆನ್ನತ್ತಿದ ಪೊಲೀಸರು, ಘಟನೆಯ ನೈಜ ಕಾರಣವನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ, ನಾಲ್ಕು ಮಂದಿ ಅಪ್ರಾಪ್ತ ಯುವಕರನ್ನು ಬಂಧಿಸಿದ್ದಾರೆ.

45 ವರ್ಷದ ದೀಪಕ್ ಬಿಹಾರ ಮೂಲದವನಾಗಿದ್ದು, ಬೆಂಗಳೂರಿನ ಜಿಕೆವಿಕೆ ಕಾಂಪ್ಲೆಕ್ಸ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳ ಜೊತೆ ದೀಪಕ್ ಯಲಹಂಕದಲ್ಲಿ ನೆಲೆಸಿದ್ದ. ಮಕ್ಕಳ ಪೈಕಿ ಒಬ್ಬಳು ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರೆ ಇನ್ನೊಬ್ಬ ಹುಡುಗಿ ನಾಲ್ಕನೇ ತರಗತಿ ಓದುತ್ತಿದ್ದಳು.
ದೀಪಕ್ ಇಬ್ಬರು ಹೆಂಡತಿಯರನ್ನು ಹೊಂದಿದ್ದು ಮೊದಲ ಪತ್ನಿ ಬಿಹಾರದಲ್ಲೇ ಇದ್ದಾಳೆ ಎನ್ನಲಾಗುತ್ತಿದೆ. ಆನಂತರ, ಕಲಬುರ್ಗಿ ಮೂಲದ ಮತ್ತೊಬ್ಬಳನ್ನು ಕಟ್ಟಿಕೊಂಡಿದ್ದ ದೀಪಕ್ ಬೆಂಗಳೂರಿನಲ್ಲಿ ವಾಸವಿದ್ದ. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದು, ಮಕ್ಕಳು ಆತನದ್ದೇ ಅಥವಾ ಈತ ಮದುವೆಯಾಗುವ ಮೊದಲೇ ಮೊದಲೇ ಆಕೆ ಮಕ್ಕಳನ್ನು ಹೊಂದಿದ್ದಳೇ ಅನ್ನೋದು ಗೊತ್ತಾಗಿಲ್ಲ. ಕಾಲೇಜು ಓದುತ್ತಿದ್ದ ದೊಡ್ಡ ಮಗಳು ಹಲವು ಸಮಯದಿಂದ ತಂದೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಚಾರವನ್ನು ತಾಯಿಗೂ ಹೇಳಿದ್ದಳು. ಈ ವಿಚಾರದಲ್ಲಿ ಗಂಡ- ಹೆಂಡತಿ ಮಧ್ಯೆ ಜಗಳವೂ ನಡೆದಿತ್ತು.
ಆನಂತರ, ಈ ಬಗ್ಗೆ ನೊಂದಿದ್ದ ಮಗಳು ಕಾಲೇಜಿನಲ್ಲಿ ತನ್ನ ಸ್ನೇಹಿತರಿಗೂ ತಿಳಿಸಿದ್ದಳು. ಸೋಮವಾರ ನಸುಕಿನಲ್ಲಿ ದೀಪಕ್, ಹರೆಯದ ಮಗಳ ಮೇಲೆ ಮತ್ತೆ ಕಣ್ಣು ಹಾಕಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ. ಇದರಿಂದ ನೊಂದ, ಮಗಳು ಕೂಡಲೇ ತನ್ನ ಸ್ನೇಹಿತರಿಗೆ ತಿಳಿಸಿದ್ದಳು. ಕೆಲವೇ ಹೊತ್ತಲ್ಲಿ ನಾಲ್ಕು ಮಂದಿ ಯುವಕರು ಮನೆಗೆ ಬಂದು ದೀಪಕ್ ಮೇಲೆ ಹಲ್ಲೆಗೈದು ಕೊಲೆ ಮಾಡಿದ್ದಾರೆ.
ಪ್ರಕರಣ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಕೊಲೆಯಾದ ದೀಪಕ್ ಪುತ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಾತುಕ ಕೃತ್ಯದ ವಿವರ ಹೊರಬಿದ್ದಿದೆ. ಪುತ್ರಿ ಸೇರಿದಂತೆ ಮೂವರು ಅಪ್ರಾಪ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
The case took a twist after the girl revealed that she took the help of her friends to kill her father as he sexually harassed her. The Yelahanka Newtown police are further investigating and verifying their statements.
The 45-year-old man was hacked to death by miscreants in the early hours of Monday after barging into his residence. The incident shocked the city, as Deepak was killed in front of his two daughters.
02-02-26 12:18 pm
HK News Desk
FM Sitharaman, Mohandas Pai, PM Modi, C.J. Ro...
31-01-26 11:05 pm
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
02-02-26 11:59 am
HK News Desk
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
01-02-26 10:29 pm
Mangalore Correspondent
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
02-02-26 12:16 pm
HK News Desk
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm