ಬ್ರೇಕಿಂಗ್ ನ್ಯೂಸ್
16-10-21 06:07 pm Headline Karnataka News Network ಕ್ರೈಂ
ಮಂಗಳೂರು, ಅ.16: ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿ, ಆಕೆ ಮಗುವಿಗೆ ಜನ್ಮವಿತ್ತ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದ್ದು, ಘಟನೆಗೆ ಆರೆಸ್ಸೆಸ್ ಮುಖಂಡ ನಾರಾಯಣ ರೈ ಎಂಬವರೇ ಕಾರಣ ಎಂದು ದಲಿತ ಸಂಘಟನೆಗಳು ಆರೋಪಿಸಿವೆ. ಈ ಬಗ್ಗೆ ನಗರದ ಪ್ರೆಸ್ ಕ್ಲಬ್ ನಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಲಾಗಿದ್ದು ಸಂತ್ರಸ್ತ ಬಾಲಕಿ ಮತ್ತು ಆಕೆಯ ಹೆತ್ತವರು ಕೂಡ ಪಾಲ್ಗೊಂಡಿದ್ದರು.
ನಾರಾಯಣ ರೈ ಎಂಬವರಿಗೆ ಸೇರಿದ ತೋಟಕ್ಕೆ ಬಾಲಕಿ ಕೆಲಸಕ್ಕೆ ಹೋಗುತ್ತಿದ್ದಾಗ ಹುಡುಗಿಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಅತ್ಯಾಚಾರ ನಡೆಸಿದ್ದಾರೆ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಕಳೆದ ಸೆ.4ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮವಿತ್ತಿದ್ದಾಳೆ. ಈ ಬಗ್ಗೆ ಪುತ್ತೂರು ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದರೂ, ಅಲ್ಲಿ ಪ್ರಕರಣವನ್ನು ಪೊಲೀಸರು ತಿರುಚಿದ್ದಾರೆ. ಆರೋಪಿಯ ಪ್ರಭಾವಕ್ಕೊಳಗಾಗಿ ಪೊಲೀಸರು ಪ್ರಮೋದ್ ಎಂಬ ಯುವಕನ ಹೆಸರನ್ನು ಅದರಲ್ಲಿ ನಮೂದಿಸಿದ್ದಾರೆ. ಆರೋಪಿ ನಾರಾಯಣ ರೈ ಹೆಸರನ್ನು ಪ್ರಕರಣದಿಂದ ಹೊರಗಿಡಲು ಪೊಲೀಸರು ಈ ರೀತಿ ಮಾಡಿದ್ದಾರೆ ಎಂದು ಸಮಿತಿಯ ಮುಖಂಡ ಆನಂದ ಬೆಳ್ಳಾರೆ ಆರೋಪಿಸಿದರು.
ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಾಲಕಿ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ನಾರಾಯಣ ರೈ ಹೆಸರು ಹೇಳಿದರೆ, ಬೆನ್ನಿನ ಸಿಪ್ಪೆ ಸುಲಿದು ಕೇಸು ಹಾಕಿ ಜೈಲಿಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಸಂಪ್ಯ ಠಾಣೆ ಪೊಲೀಸರು ಆರೋಪಿಯನ್ನು ರಕ್ಷಿಸುವುದಕ್ಕಾಗಿ ಘಟನೆಗೆ ಸಂಬಂಧವಿಲ್ಲದ ಪ್ರಮೋದ್ ಎನ್ನುವ ವ್ಯಕ್ತಿಯನ್ನು ಪ್ರಕರಣದಲ್ಲಿ ಸೇರಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧಿಸಿ ಬಾಲಕಿಯ ಸೋದರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬಾಲಕಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದು, ಅವರ ಸೂಚನೆಯಂತೆ ನಾರಾಯಣ ರೈ ವಿರುದ್ಧ ದಲಿತ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿದೆ. ಆದರೆ, ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಪೊಲೀಸರು ಪ್ರಕರಣದ ನೈಜಾಂಶ ಅರಿಯುವುದಕ್ಕಾಗಿ ಮಗು ಮತ್ತು ಆರೋಪಿ ನಾರಾಯಣ ರೈ ಇಬ್ಬರದ್ದೂ ಡಿಎನ್ಐ ಟೆಸ್ಟ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಎಸ್ಪಿ ಋಷಿಕುಮಾರ್ ಸೋನವಾಣೆ ಬಳಿ ಕೇಳಿದರೆ, ಯಾವುದೇ ಪ್ರಕರಣಕ್ಕೂ ಒಂದು ಪ್ರೊಸೀಜರ್ ಇರುತ್ತದೆ. ಆರೋಪ ಬಂದ ಕೂಡಲೇ ಬಂಧಿಸಲೇಬೇಕು ಎನ್ನುವುದಿಲ್ಲ. ಕೆಲವು ಸಾಕ್ಷ್ಯಗಳನ್ನು ಕಲೆಹಾಕಿ ಬಂಧನ ಪ್ರಕ್ರಿಯೆ ನಡೆಸಲಾಗುತ್ತದೆ. ಆ ವ್ಯಕ್ತಿಯ ಬಗ್ಗೆ ಆರೋಪ ಕೇಳಿಬಂದಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಡಿಎನ್ಎ ಟೆಸ್ಟ್ ಮಾಡಲು ಮಗುವಿಗೆ ಮೂರು ತಿಂಗಳ ಆಗಬೇಕು. ಆನಂತರ, ಅದನ್ನೂ ಮಾಡುತ್ತೇವೆ. ಇವರು ಅರ್ಜೆಂಟ್ ಮಾಡಿದರೆ ನಾವೇನು ಮಾಡೋಕೆ ಆಗುತ್ತದೆ ಎಂದು ಹೇಳಿದ್ದಾರೆ.
Coordination committee of Dalit organisations has demanded for the immediate arrest of Rashtriya Swayamsevak Sangh (RSS) leader, Narayana Rai, who has been accused of raping a minor girl belonging to Dalit community who used to work in his farm in Badagannur village, Puttur taluk. The girl gave birth to a baby recently. The committee held a press meet in the city on Saturday October 16.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm