ಬ್ರೇಕಿಂಗ್ ನ್ಯೂಸ್
03-10-21 04:36 pm Headline Karnataka News Network ಕ್ರೈಂ
ತಿರುವನಂತಪುರಂ, ಅ.3: ತರಗತಿಯಲ್ಲಿ ತಂಟೆ ಮಾಡಿದ ಕಾರಣಕ್ಕೆ ಟೀಚರ್ ವಿದ್ಯಾರ್ಥಿಯತ್ತ ತೂರಿದ್ದ ಪೆನ್ನು ಆತನ ಕಣ್ಣಿಗೆ ಬಿದ್ದು ಕಣ್ಣೇ ಕಾಣದಂತಾಗಿತ್ತು. ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್, ವೃತ್ತಿಯಿಂದ ನಿವೃತ್ತರಾಗಿದ್ದ ಶಿಕ್ಷಕಿಗೆ ಒಂದು ವರ್ಷದ ಕಠಿಣ ಸಜೆಯನ್ನು ವಿಧಿಸಿ ತೀರ್ಪು ನೀಡಿದೆ.
ತಿರುವನಂತಪುರದ ಪೋಕ್ಸೋ ವಿಶೇಷ ನ್ಯಾಯಾಲಯವು ತಪ್ಪಿತಸ್ಥ ಶಿಕ್ಷಕಿಗೆ ಶಿಕ್ಷೆ ವಿಧಿಸಿದ್ದು, ಸಂತ್ರಸ್ತ ಹುಡುಗನಿಗೆ ಮೂರು ಲಕ್ಷ ರೂ. ಪರಿಹಾರ ನೀಡುವಂತೆ ದಂಡದ ರೂಪದಲ್ಲಿ ಶಿಕ್ಷಕಿಗೆ ಹೇಳಿದೆ. ದಂಡ ಕಟ್ಟದೇ ಇದ್ದಲ್ಲಿ ಶಿಕ್ಷಕಿ ಹೆಚ್ಚುವರಿಯಾಗಿ ಮೂರು ತಿಂಗಳ ಕಠಿಣ ಸಜೆಯನ್ನು ಅನುಭವಿಸಬೇಕಾಗಿದೆ. ಶರೀಫಾ ಶಹಜಹಾನ್ ಎಂಬ ಶಿಕ್ಷಕಿ ಶಿಕ್ಷೆಗೊಳಗಾದವರು.
16 ವರ್ಷಗಳ ಹಿಂದೆ 2005ರ ಜನವರಿ 18ರಂದು ಘಟನೆ ನಡೆದಿತ್ತು. ತಿರುವನಂತಪುರದ ಶಾಲೆ ಒಂದರಲ್ಲಿ ಮೂರನೇ ಕ್ಲಾಸ್ ಪಾಠ ಮಾಡುತ್ತಿದ್ದಾಗ ಅಲ್ ಅಮೀನ್ ಎಂಬ ಎಂಟು ವರ್ಷದ ಹುಡುಗ ಇತರ ಮಕ್ಕಳೊಂದಿಗೆ ಮಾತನಾಡಿ ಕೀಟಲೆ ಮಾಡಿದ್ದ. ಇದರಿಂದ ಕುಪಿತನಾಗಿದ್ದ ಶಿಕ್ಷಕಿ ಶರೀಫಾ, ಕೈಯಲ್ಲಿದ್ದ ಪೆನ್ನನ್ನು ಹುಡುಗನತ್ತ ಎಸೆದಿದ್ದರು. ಪೆನ್ನು ನೇರವಾಗಿ ಹುಡುಗನ ಎಡ ಕಣ್ಣಿಗೆ ಬಿದ್ದು ಗಾಯವಾಗಿತ್ತು. ಆನಂತರ, ಹುಡುಗನಿಗೆ ಮೂರು ಬಾರಿ ಸರ್ಜರಿ ನಡೆಸಿದರೂ ಕಣ್ಣಿಗೆ ದೃಷ್ಟಿ ಬಂದಿರಲಿಲ್ಲ.
ಆನಂತರ ಹುಡುಗನ ಹೆತ್ತವರು ಶಿಕ್ಷಕಿಯ ವಿರುದ್ಧ ಪೊಲೀಸ್ ದೂರು ಕೊಟ್ಟಿದ್ದರು. ಎಫ್ಐಆರ್ ದಾಖಲಾಗಿದ್ದರಿಂದ ಶಿಕ್ಷಕಿಯನ್ನು ಆರು ತಿಂಗಳ ಕಾಲ ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು. ಆದರೆ, ಶಿಕ್ಷಕಿ ಒಂದು ತಿಂಗಳಲ್ಲೇ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಈ ಬಗ್ಗೆ ಚಾರ್ಜ್ ಶೀಟ್ ಆಗಿ ಕೋರ್ಟಿನಲ್ಲಿ ವಿಚಾರಣೆ ನಡೆದಿದ್ದು, ಸರಕಾರಿ ವಕೀಲರು ಈ ಕೃತ್ಯವನ್ನು ಅಮಾನುಷ ಎಂದು ವಾದಿಸಿದ್ದಾರೆ. ಈ ರೀತಿಯ ಕೃತ್ಯವನ್ನು ಸಮಾಜ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಸಣ್ಣ ಮಕ್ಕಳ ವಿರುದ್ಧ ಈ ರೀತಿ ದೌರ್ಜನ್ಯ ಎಸಗಿದ ಆರೋಪಕ್ಕೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಅದರಂತೆ, ಶಿಕ್ಷಕಿಗೆ ಕೋರ್ಟ್ ಒಂದು ವರ್ಷದ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈಗ ಕೆಲಸದಿಂದ ನಿವೃತ್ತಿಯಾಗಿರುವ ಶಿಕ್ಷಕಿ ಹುಡುಗನ ಮೇಲಿನ ಅಪರಾಧಕ್ಕಾಗಿ ಜೈಲು ಸೇರುವಂತಾಗಿದೆ.
Aretired school teacher in Kerala has been sentenced to one year of rigorous imprisonment for throwing a pen at a Class 3 student. The pen hit the student's left eye and, as a result, he lost his vision in that eye. The Protection of Children from Sexual Offences (Pocso) court in Thiruvananthapuram also imposed a Rs 3 lakh fine on retired school teacher Sheriffa Shahjahan. If the fine is not paid, she will face an additional three months in prison.
23-08-25 09:56 pm
Bangalore Correspondent
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 06:21 pm
Mangaluru Correspondent
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm