ಬ್ರೇಕಿಂಗ್ ನ್ಯೂಸ್
09-09-21 09:54 pm Headline Karnataka News Network ಕ್ರೈಂ
'ನಮಸ್ತೆ ಲಂಡನ್' ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅಲಂಕೃತಾ ಸಹಾಯ್ ಮನೆಗೆ ನುಗ್ಗಿ ನಟಿಯನ್ನು ಹೊಡೆದು ಹಣ, ಒಡವೆ ದೋಚಿ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.
ಬಾಲಿವುಡ್ ನಟಿ ಅಲಂಕೃತಾ ಸಹಾಯ್ ಚಂಡೀಘಡದ ತಮ್ಮ ಹೊಸ ಮನೆಯಲ್ಲಿ ಒಬ್ಬರೇ ಇರುವ ಸಮಯದಲ್ಲಿ ಮನೆಗೆ ನುಗ್ಗಿದ ಮೂವರು ದರೋಡೆಕೋರರು ನಟಿಗೆ ಚಾಕು ತೋರಿಸಿ ಹೆದರಿಸಿದ್ದಾರೆ, ಹಲ್ಲೆ ಸಹ ಮಾಡಿದ್ದಾರೆ. ನಟಿಯು ಹೆಗೊ ತಪ್ಪಿಸಿಕೊಂಡು ತಮ್ಮ ರೂಮ್ ಸೇರಿಕೊಂಡಿದ್ದಾಳೆ, ರೂಮ್‌ನ ಒಳಗೂ ನುಗ್ಗಿದಾಗ ಬಾತ್‌ರೂಂ ಸೇರಿಕೊಂಡಿದ್ದಾಳೆ.
ಆದರೆ ದರೋಡೆಕೋರರು ನಟಿಯನ್ನು ಹೆದರಿಸಿ, ಪ್ರಾಣ, ಮಾನ ಬೆದರಿಕೆ ಹಾಕಿ ಆಕೆಯ ಎಟಿಎಂ ಕಾರ್ಡ್, ಪಿನ್ ನಂಬರ್, ಮನೆಯಲ್ಲಿದ್ದ ಹಣ ಚಿನ್ನಗಳನ್ನು ದೋಚಿಕೊಂಡು ಹೋಗಿದ್ದಾರೆ.

ಅಲಂಕೃತಾ ಸಹಾಯ್ ಕೆಲವು ದಿನಗಳ ಹಿಂದಷ್ಟೆ ಚಂಡೀಘಡದ ಸೆಕ್ಟರ್ 27 ನಲ್ಲಿ ಹೊಸ ಮನೆ ಖರೀದಿಸಿದ್ದರು. ಮಧ್ಯಾಹ್ನದ ವೇಳೆ ಕೆಲಸದ ಮಹಿಳೆ ಮನೆಗೆ ಬರಲೆಂದು ಮನೆಯ ಬಾಗಿಲನ್ನು ತೆರೆದಿಟ್ಟದ್ದರು. ಇದೇ ಅವಕಾಶವನ್ನು ಬಳಸಿಕೊಂಡು ದರೋಡೆಕೋರರು ಮನೆಗೆ ನುಗ್ಗಿದ್ದಾರೆ.
ದರೋಡೆಕೋರರು ಮನೆಗೆ ನುಗ್ಗಿದ ಸಮಯದಲ್ಲಿ ಮನೆಯಲ್ಲಿ ಅಲಂಕೃತಾ ಒಬ್ಬರೇ ಇದ್ದರು. ಆ ಮನೆಯಲ್ಲಿ ಅಲಂಕೃತಾ ತನ್ನ ಪೋಷಕರೊಂದಿಗೆ ವಾಸವಿದ್ದಾರೆ. ಆದರೆ ಅವರ ಪೋಷಕರು ಕೆಲ ದಿನಗಳ ಹಿಂದಷ್ಟೆ ಪ್ರವಾಸ ಹೋಗಿದ್ದರು. ಹಾಗಾಗಿ ಅಲಂಕೃತಾ ಒಬ್ಬರೇ ಮನೆಯಲ್ಲಿದ್ದರು.
ಪ್ರಕರಣದ ಬಗ್ಗೆ ನಟಿ ಅಲಂಕೃತಾ ಸೆಕ್ಟರ್ 26 ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಮೂವರು ದರೋಡೆಕೋರರಲ್ಲಿ ಒಬ್ಬನು ಕೆಲವು ದಿನಗಳ ಹಿಂದಷ್ಟೆ ನಟಿಯ ಮನೆಗೆ ಬಂದಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಹೊಸ ಮನೆಗೆ ಕೆಲವು ಪೀಠೋಪಕರಣಗಳನ್ನು ಅಲಂಕೃತಾ ತರಿಸಿಕೊಂಡಿದ್ದರು. ಪೀಠೋಪಕರಣಗಳನ್ನು ಡೆಲಿವರಿ ಮಾಡಲು ಆತ ಮನೆಗೆ ಹೋಗಿದ್ದ. ಮನೆಯನ್ನು ಚೆನ್ನಾಗಿ ನೋಡಿಕೊಂಡು ಕೆಲವರು ದುರುಳರನ್ನು ಜೊತೆ ಮಾಡಿಕೊಂಡು ಮನೆ ದೋಚಲು ಬಂದಿದ್ದ. ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.
In a broad daylight incident, three miscreants allegedly robbed model-turned-actress Alankrita Sahai of Rs 6 lakh at knifepoint at her house in Sector 27. One of the suspects has been identified by the victim. The police said the complainant had shifted to the city around a month ago. She and her parents had rented the second floor of the house and the victim’s parents were out of the city for the past 10 days.
20-09-26 03:32 pm
HK News Staffer
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm