ಬ್ರೇಕಿಂಗ್ ನ್ಯೂಸ್
08-08-21 10:15 pm Headline Karnataka News Network ಕ್ರೈಂ
ನವದೆಹಲಿ, ಆಗಸ್ಟ್ 8: ಭಯೋತ್ಪಾದನೆ ನಿಗ್ರಹಕ್ಕೆ ಪಣ ತೊಟ್ಟಿರುವ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಜಮ್ಮು ಕಾಶ್ಮೀರದಲ್ಲಿ ಭಾರೀ ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಜಮಾತೇ ಇಸ್ಲಾಮೀ ನಾಯಕರು ಉಗ್ರ ಚಟುವಟಿಕೆಗಾಗಿ ಭಾರೀ ಫಂಡಿಂಗ್ ಮಾಡುತ್ತಿದ್ದಾರೆಂಬ ಮಾಹಿತಿಯಡಿ ಜಮ್ಮು ಕಾಶ್ಮೀರದ 14 ಜಿಲ್ಲೆಗಳ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ. ಜಮಾತ್ ಇ- ಇಸ್ಲಾಮೀ ಸಂಘಟನೆಯ ನೂರಾರು ಮುಖಂಡರ ಮನೆಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಎನ್ಐಎ ಅಧಿಕಾರಿಗಳು, ದಾಳಿ ವೇಳೆ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್ ಪಿಎಫ್ ಪಡೆಯ ನೆರವು ಪಡೆದಿದ್ದಾರೆ. ಜಮಾತ್ ಇ- ಇಸ್ಲಾಮೀ ಸಂಘಟನೆಯನ್ನು 2019ರಲ್ಲಿ ಪಾಕಿಸ್ತಾನ ಪರ ಮತ್ತು ಪ್ರತ್ಯೇಕತಾವಾದಿಗಳ ಪರವಾಗಿದೆ ಎಂದು ಭಾರತ ಸರಕಾರ ನಿಷೇಧ ಮಾಡಿದ್ದರೂ, ಅದರ ನಾಯಕರು ಉಗ್ರವಾದಕ್ಕೆ ಪೂರಕವಾಗಿ ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದರು ಎನ್ನುವ ಮಾಹಿತಿಯಡಿ ದಾಳಿ ನಡೆಸಲಾಗಿದೆ.
ನಿಷೇಧ ಹೊರತಾಗಿಯೂ ಜಮಾತೇ ಇಸ್ಲಾಮಿ ಸಂಘಟನೆಯ ನಾಯಕರನ್ನು ಗುರಿಯಾಗಿಸಿ ಕಾಶ್ಮೀರದಲ್ಲಿ ದಾಳಿ ನಡೆಸಿದ್ದು ಮಹತ್ವದ್ದಾಗಿದೆ. ಎನ್ಐಎ ವಿಭಾಗದ ಹಿರಿಯ ಶ್ರೇಣಿಯ ಡಿಐಜಿ ಮತ್ತು ಅವರ ನೇತೃತ್ವದ ತಂಡ ದೆಹಲಿಯಿಂದ ತೆರಳಿದ್ದು, ದಾಳಿ ಕಾರ್ಯಾಚರಣೆಯ ನೇತೃತ್ವ ವಹಿಸಿತ್ತು. ಜಮ್ಮು ಕಾಶ್ಮೀರದ ಶ್ರೀನಗರ, ಬುದ್ಗಾಮ್, ಗಂದೇರ್ ಬಾಲ್, ಬಾರಾಮುಲ್ಲಾ, ಕುಪ್ವಾರಾ, ಬಂಡಿಪೋರಾ, ಅನಂತನಾಗ್, ಶೋಪಿಯಾನ್, ಪುಲ್ವಾಮಾ, ಕುಲ್ಗಾಮ್, ರಾಮ್ ಬನ್, ದೋಡಾ, ಕಿಶ್ತ್ವಾರ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ.
ಜಮಾತೇ ಇಸ್ಲಾಮೀ ನಾಯಕರು ಉಗ್ರ ಸಂಘಟನೆಗಳಾದ ಲಷ್ಕರ್ ಇ- ತೊಯ್ಬಾ, ಜೈಶ್ ಇ ಮಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಪರವಾಗಿ ದೇಣಿಗೆ ಸಂಗ್ರಹಿಸುತ್ತಿದ್ದರು. ಆರೋಗ್ಯ, ಶಿಕ್ಷಣ, ಚಾರಿಟಿ ಹೆಸರಲ್ಲಿ ದುಬೈ ಮತ್ತು ಟರ್ಕಿ ದೇಶದ ಉದ್ಯಮಿಗಳಿಂದ ಭಾರೀ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮೂಲಕ ಅದನ್ನು ರವಾನೆ ಮಾಡುತ್ತಿದ್ದರು.
2019ರಲ್ಲಿ ಜಮ್ಮು ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ಕಾಯ್ದೆ – 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಣಿವೆ ಭಾಗದಲ್ಲಿ ಸೈನಿಕರ ಮೇಲೆ ಕಲ್ಲೆಸೆತ, ಉಗ್ರರ ಉಪಟಳ ಹೆಚ್ಚಿನ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಜಮಾತೆ ಇಸ್ಲಾಮೀ ನಾಯಕರು ಕಣಿವೆ ಭಾಗದಲ್ಲಿ ಉಗ್ರವಾದ ಬೆಳೆಸುವುದಕ್ಕೆ ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಗುಪ್ತವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.
ಜುಲೈ 31ರಂದು ಎನ್ಐಎ ಅಧಿಕಾರಿಗಳು ಜಮ್ಮು ಕಾಶ್ಮೀರದ 14 ಕಡೆ ದಾಳಿ ನಡೆಸಿದ್ದು, ಐಇಡಿ ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ, ಲಷ್ಕರ್ ಇ- ಮುಸ್ತಫಾ ಎಂಬ ಹೊಸ ಸಂಘಟನೆಯ ಟಾಪ್ ಕಮಾಂಡರ್ ಆಗಿದ್ದ ಹಿದಾಯತುಲ್ಲಾ ಮಲಿಕ್ ಎಂಬಾತನನ್ನು ಬಂಧಿಸಿದ್ದರು.
In one of its biggest operations in Jammu and Kashmir, the National Investigative Agency (NIA) conducted raids in over 50 locations in 14 districts linked to banned outfit Jamaat-e-Islami in connection with a terror funding case.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm