ಬ್ರೇಕಿಂಗ್ ನ್ಯೂಸ್
19-06-21 09:32 pm Headline Karnataka News Network ಕ್ರೈಂ
ಕಾನ್ಪುರ, ಜೂನ್ 19: ಆತ ಎರಡಲ್ಲ. ಬರೋಬ್ಬರಿ ಐದು ಮದುವೆಯಾಗಿದ್ದ. ಇನ್ನೂ 32 ಹುಡುಗಿಯರ ಜೊತೆ ಚಾಟಿಂಗ್ ಮಾಡುತ್ತಾ ಬಲೆಗೆ ಬೀಳಿಸಲು ಖೆಡ್ಡಾ ತೋಡಿದ್ದ. ಈ ನಡುವೆ, ಆರನೇ ಮದುವೆಯಾಗಲು ಹುಡುಗಿಯನ್ನು ಗೊತ್ತು ಮಾಡಿದ್ದ. ಆದರೆ, ಆತನ ಗ್ರಹಚಾರ ಕೆಟ್ಟಿತ್ತು. ಆರನೇ ಹೆಂಡ್ತಿಯಾಗಲು ರೆಡಿಯಾಗಿದ್ದ ಯುವತಿ ಗಂಡನಾಗಲು ಬಂದವನ ಹಿಸ್ಟರಿಯನ್ನು ತಿಳಿದು ಪೊಲೀಸ್ ದೂರು ನೀಡಿದ್ದು, ಕಾಮುಕ ಜೈಲು ಕಂಬಿ ಎಣಿಸಿದ್ದಾನೆ.
ಈ ರೀತಿಯ ಕತೆಗಳು ಸಿನಿಮಾ, ಧಾರಾವಾಹಿಗಳಲ್ಲಿ ಬರುತ್ತಿದ್ದವು. ಆದರೆ, ಈಗ ನಾವು ಹೇಳ್ತಿರೋದು ರೀಲ್ ಕತೆ ಅಲ್ಲ. ಉತ್ತರ ಪ್ರದೇಶದಲ್ಲಿ ನಡೆದಿರುವ ರೀಯಲ್ ಕತೆ. ತನ್ನನ್ನು ಬಾಬಾನೆಂದು ಹೇಳಿಕೊಂಡು ಹೆಣ್ಮಕ್ಕಳನ್ನು ತನ್ನ ಕಾಮದಾಟಕ್ಕೆ ಬೀಳಿಸುವುದನ್ನೇ ವೃತ್ತಿಯಾಗಿಸ್ಕೊಂಡಿದ್ದ ಷಹಜಾನ್ ಪುರದ ನಿವಾಸಿ ಅನುಜ್ ಚೇತನ್ ಕಥೇರಿಯಾ ಎಂಬಾತನನ್ನು ಪೊಲೀಸರು ಬಂಧಿಸಿ, ಜೈಲಿಗೆ ತಳ್ಳಿದ್ದಾರೆ.

ಅನುಜ್ ಚೇತನ್ ಕಥೇರಿಯಾ ಎಂಬ ಈ ಆಸಾಮಿ ತನ್ನನ್ನು ತಾನು ಬಾಬಾ, ಸ್ವಾಮೀಜಿ ಎಂದು ಹೇಳಿಕೊಳ್ಳುತ್ತಿದ್ದ. ಹಣೆಗೆ ಉದ್ದ ನಾಮ ಇಟ್ಟುಕೊಂಡು, ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಸಮಸ್ಯೆ ಬಗೆಹರಿಸ್ತೀನಿ ಎಂದು ಹೇಳಿ ಅವರನ್ನೇ ತನ್ನ ಖೆಡ್ಡಾಕ್ಕೆ ಬೀಳಿಸುತ್ತಿದ್ದ. ಅದರ ಜೊತೆಗೆ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡು ಹೊಸ ಹುಡುಗಿಯರನ್ನು ಸದಾ ಹುಡುಕಾಡುತ್ತಿದ್ದ.
ಅನುಜ್ ಚೇತನ್ ಮೊದಲ ಬಾರಿಗೆ 2005ರಲ್ಲಿ ಮೈನ್ ಪುರಿ ಎನ್ನುವ ಜಿಲ್ಲೆಯಲ್ಲಿ ಯುವತಿಯನ್ನು ಮದುವೆಯಾಗಿದ್ದ. ಆನಂತರ ಮನಸ್ತಾಪಗೊಂಡು ಡೈವರ್ಸ್ ಮಾಡಿಕೊಳ್ಳೋ ಅಪೀಲ್ ಕೋರ್ಟ್ ಕಟ್ಟೆ ಹತ್ತಿ ಉಳಿದುಬಿಟ್ಟಿದೆ. ಆನಂತರ, 2010ರಲ್ಲಿ ಬರೇಲಿ ಜಿಲ್ಲೆಯಲ್ಲಿ ಮತ್ತೊಂದು ಯುವತಿಯನ್ನು ಮದುವೆಯಾಗಿದ್ದ. ಅದು ಕೂಡ, ಕೋರ್ಟಿನಲ್ಲಿದ್ದು ಯುವತಿಯ ಡೈವರ್ಸ್ ಅರ್ಜಿ ವಿಚಾರಣೆ ಹಂತದಲ್ಲಿದೆ.

ನಾಲ್ಕು ವರ್ಷದ ಬಳಿಕ 2014ರಲ್ಲಿ ಔರಾಯಾ ಜಿಲ್ಲೆಯಲ್ಲಿ ಯುವತಿಯನ್ನು ದಾಳಕ್ಕೆ ಬೀಳಿಸಿ, ಮೂರನೇ ಮದುವೆಯಾಗ್ತಾನೆ. ಮೂರನೇ ಸಂಬಂಧ ಇರುವಾಗಲೇ ಆಕೆಯ ತಂಗಿಯನ್ನೇ ಚಮಕ್ ಮಾಡಿ, ಮತ್ತೆ ಮದುವೆಯಾಗಿದ್ದ. ಆದರೆ, ನಾಲ್ಕನೇ ಪತ್ನಿಯಾಗಿದ್ದ ಯುವತಿ ಈತನ ಹಳೆಯ ವಿಚಾರವನ್ನು ತಿಳಿದು ಆಘಾತಗೊಂಡು ಆತ್ಮಹತ್ಯೆ ಮಾಡಿದ್ದಳಂತೆ. ಇವೆಲ್ಲ ಮದುವೆ, ಪೊಲೀಸ್ ಕೇಸ್ ಎಲ್ಲ ನಡೆಯುತ್ತಿದ್ದರೂ, 2016ರಲ್ಲಿ ತನ್ನ ಸೋದರ ಪತ್ನಿಯನ್ನೇ ಅತ್ಯಾಚಾರ ಮಾಡುತ್ತಾನೆ. ಅದು ಪೊಲೀಸ್ ಕೇಸ್ ಆಗಿ, ಜೈಲು ಸೇರಿದ್ದೂ ಆಗಿತ್ತು.
ಆನಂತರ, ಜೈಲಿನಿಂದ ಹೊರಬಂದು 2019ರಲ್ಲಿ ಮತ್ತೊಂದು ಮದುವೆಯಾಗಿದ್ದ. ಆಕೆಗೂ ಬಳಿಕ ಹಿಂಸೆ ನೀಡಿ, ಅವಳು ಮನೆಯಿಂದಲೇ ಬಿಟ್ಟು ಹೋಗುವಂತೆ ಮಾಡಿದ್ದ ಅನುಜ್ ಚೇತನ್ ಅಲಿಯಾಸ್ ಡೋಂಗಿ ಬಾಬಾ, ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಚಂದದ ಹುಡುಗಿಯರಿಗೆ ಗಾಳ ಹಾಕಿದ್ದ.

ತನ್ನ ಹೆಸರನ್ನು ಲಕ್ಕಿ ಪಾಂಡೆ ಎಂದು ಹೇಳಿಕೊಂಡು, ತನ್ನ ಆಕರ್ಷಕ ಫೋಟೋ ಹಾಕ್ಕೊಂಡು ಬಿಎಸ್ಸಿ ಕಲಿತಿದ್ದು ಬಿಸಿನೆಸ್ ಮಾಡುತ್ತಿದ್ದೇನೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದ. ಸೈಟ್ ಮೂಲಕ ಹಲವಾರು ಯುವತಿಯರನ್ನು ಪರಿಚಯಿಸಿಕೊಂಡು ಚಾಟಿಂಗ್ ಮಾಡುತ್ತಿದ್ದ. ಅವರನ್ನು ತನ್ನ ಆಶ್ರಮಕ್ಕೆ ಕರೆಸಿಕೊಂಡು ಅಲ್ಲಿ ಬ್ರೇನ್ ವಾಷ್ ಮಾಡುವ ಕೆಲಸ ಮಾಡುತ್ತಿದ್ದ.
ಐದನೇ ಪತ್ನಿ ತನಗೆ ಹಿಂಸೆ ನೀಡುತ್ತಿರುವುದಾಗಿ ಚಕೇರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ ಬಳಿಕ ಆ ಊರನ್ನೇ ಬಿಟ್ಟು ವರ್ಷದ ಹಿಂದಷ್ಟೇ ಕಿದ್ವಾಯಿ ನಗರದಲ್ಲಿ ನೆಲೆಸಿದ್ದ. ಬಳಿಕ ಅಲ್ಲಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ರೆಡಿ ಆಗಿದ್ದಾಗ ಖತರ್ನಾಕ್ ಹಿಸ್ಟರಿ ತಿಳಿದು ಪೊಲೀಸ್ ದೂರು ನೀಡಿದ್ದಾಳೆ. ಪೊಲೀಸರು ಅನುಜ್ ಚೇತನ್ ಅನ್ನೋ ನಕಲಿ ಸ್ವಾಮಿಯನ್ನು ಬಂಧಿಸಿ ಈಗ ಷಹಜಾನ್ ಪುರ ಜೈಲಿಗೆ ತಳ್ಳಿದ್ದಾರೆ.
Aman was on Friday arrested in Kanpur for allegedly marrying five women without being legally separated from his earlier wives and honey-trapping many others, police said. The accused, identified as Anuj Chetan Katheria of Shahjahanpur, was planning to get married for the sixth time before he was arrested by the Kidwai Nagar police.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm