ಬ್ರೇಕಿಂಗ್ ನ್ಯೂಸ್
31-03-26 11:11 am HK News Staffer ಕ್ರೈಂ
ಬೆಂಗಳೂರು, ಮಾರ್ಚ್ 31: 'ಆಪರೇಷನ್ ಶುದ್ಧೀಕರಣ' ಹೆಸರಿನಲ್ಲಿ ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಶತಪ್ರಯತ್ನಗಳು ನಡೆಯುತ್ತಿದ್ದರೂ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಿಂತಿಲ್ಲ. ಜತೆಗೆ, ಜೈಲಿಗೆ ಡ್ರಗ್ಸ್, ಮೊಬೈಲ್ ಸರಬರಾಜು ಯತ್ನ ಮುಂದುವರಿದಿದೆ.
ಈ ನಡುವೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾ ಕೈದಿಯಾಗಿರುವ ಗಂಡನಿಗೆ ಮೂರು 5ಜಿ ಸಿಮ್, ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನಗಳೊಂದಿಗೆ ಬಂದಿದ್ದ ಮಹಿಳೆ ಸಿಕ್ಕಿಬಿದ್ದು ಅದೇ ಜೈಲು ಸೇರಿದ್ದಾಳೆ. ಹೆಣ್ಣೂರಿನ ರಿತಿಕಾ ರೇ (27) ಬಂಧಿತೆ.
ಅಸ್ಸಾಂ ಮೂಲದ ರಿತಿಕಾ, ಹೆಣ್ಣೂರಿನ ಫರ್ಹಾನ್ ಖಾನ್ನನ್ನು ಎರಡನೇ ಮದುವೆಯಾಗಿದ್ಲು. ಕೆಲ ತಿಂಗಳ ಹಿಂದೆ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ಫರ್ಹಾನ್ ಜೈಲು ಸೇರಿದ್ದ.
ಮಾ.26ರಂದು ಗಂಡ ಫರ್ಹಾನ್ನನ್ನು ನೋಡಲು ಪಾಸು ಪಡೆದು ರಿತಿಕಾ ಆಗಮಿಸಿದ್ದರು. ಜೈಲಿನ ಪ್ರವೇಶ ದ್ವಾರದಲ್ಲಿ ರಿತಿಕಾ ನಡವಳಿಕೆ ಅನುಮಾನಾಸ್ಪದವಾಗಿತ್ತು. ಹೀಗಾಗಿ, ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ರಿತಿಕಾಳನ್ನ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದರು. ಈ ವೇಳೆ ರಿತಿಕಾ ತನ್ನ ದೇಹದ ಖಾಸಗಿ ಭಾಗದಲ್ಲಿ ಮೂರು ಸಿಮ್, 27 ಗ್ರಾಂ ಮೆಥಾಂಫೆಟಮೈನ್ ಡ್ರಗ್ಸ್ ಪುಡಿ, ಬೀಡಿ ಹಾಗೂ ತಂಬಾಕು ಉತ್ಪನ್ನವನ್ನು ಕವರ್ನಲ್ಲಿ ಬಚ್ಚಿಟ್ಟುಕೊಂಡಿರುವುದು ಕಂಡು ಬಂದಿತ್ತು. ಹೀಗಾಗಿ, ತಕ್ಷಣ ಜೈಲು ಸಿಬ್ಬಂದಿ ವಶಕ್ಕೆ ರಿತಿಕಾಳನ್ನ ಒಪ್ಪಿಸಿದ್ದರು.
ಜೈಲು ಅಧಿಕಾರಿಗಳು ನೀಡಿದ ದೂರಿನನ್ವಯ ಎನ್ಡಿಪಿಎಸ್ ಹಾಗೂ ಜೈಲು ನಿಯಮಗಳ ಉಲ್ಲಂಘನೆ ಆರೋಪದನ್ವಯ ಪ್ರಕರಣ ದಾಖಲಿಸಿ ರಿತಿಕಾಳನ್ನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದರು. 'ನನಗೆ ಏನೂ ಗೊತ್ತಿಲ್ಲ. ಗಂಡನಿಗೆ ಕೊಡಲು ಬಂದಿದ್ದೆ' ಎಂದಷ್ಟೇ ವಿಚಾರಣೆ ವೇಳೆ ತಿಳಿಸಿದ್ದಾರೆ.
ಜೈಲಿನಲ್ಲಿರುವ ಫರ್ಹಾನ್ ಖಾನ್ ಸೂಚನೆ ಮೇರೆಗೆ ರಿತಿಕಾ ಡ್ರಗ್ಸ್ ಪೂರೈಕೆಗೆ ಯತ್ನಿಸಿರುವುದು ಗೊತ್ತಾಗಿದೆ. ರಿತಿಕಾಗೆ ಹೊರಗಡೆ ಯಾರು ಡ್ರಗ್ಸ್ ನೀಡಿದ್ದರು, ಫರ್ಹಾನ್ ಜತೆ ಸಂಪರ್ಕದಲ್ಲಿ ಇರುವವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿ ಫರ್ಹಾನ್ನನ್ನು ನ್ಯಾಯಾಲಯದ ಅನುಮತಿ ಪಡೆದು ಕಸ್ಟಡಿಗೆ ಪಡೆಯಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
4 ವರ್ಷದ ಮಗುವೂ ಜೈಲಿಗೆ;
ಆರೋಪಿ ರಿತಿಕಾ, ಗಂಡನನ್ನು ನೋಡಲು ತನ್ನ 4 ವರ್ಷದ ಮಗುವಿನ ಜತೆ ಬಂದಿದ್ದಳು. ಆದರೆ, ಡ್ರಗ್ಸ್ ಪೂರೈಕೆ ಯತ್ನದಲ್ಲಿ ಸಿಕ್ಕಿಬಿದ್ದಿದ್ದಾರೆ. ಮಗುವನ್ನು ಆರೈಕೆ ಮಾಡಲು ಹೊರಗಡೆ ಅವರಿಗೆ ಸಂಬಂಧಿಕರು ಇಲ್ಲ. ಹೀಗಾಗಿ, ಕಾನೂನು ರೀತ್ಯ ತಾಯಿಯ ಜತೆ ಮಗುವನ್ನು ಜೈಲಿಗೆ ಕಳಿಸಿಕೊಡಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am