ಬ್ರೇಕಿಂಗ್ ನ್ಯೂಸ್
26-03-26 09:28 am HK News Staffer ಕ್ರೈಂ
ಮೈಸೂರು, ಮಾರ್ಚ್ 26: ಪ್ರೀತಿ ಹೆಸರಿನಲ್ಲಿ ನಂಬಿಸಿ, ಆತ್ಮಹತ್ಯೆಯ ನಾಟಕವಾಡಿ ಅಮಾಯಕ ಮಹಿಳೆಯರ ಬದುಕನ್ನು ಹಾಳು ಮಾಡುತ್ತಿದ್ದ ಕಾಮುಕ ವೈದ್ಯನ ಕರಾಳ ಮುಖವನ್ನು ಪತ್ನಿಯೇ ಬಟಾಬಯಲು ಮಾಡಿದ ಘಟನೆ ನಡೆದಿದೆ. ಮೈಸೂರಿನ ವೈದ್ಯ ಡಾ. ವಿನಯ್ ಕುಮಾರ್ ವಿರುದ್ಧ ಆತನ ಪತ್ನಿಯೇ ನೀಡಿದ ದೂರಿನ ಮೂಲಕ ಬೆಚ್ಚಿಬೀಳಿಸುವ ಪ್ರಕರಣವೊಂದು ಬಹಿರಂಗವಾಗಿದೆ.
ಹಿರಿಯ ವೈದ್ಯೆಯಾಗಿದ್ದ ಡಾ.ನಾಗಶ್ರೀ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೀವನವೇ ದುರಂತ ಅಂತ್ಯ ಕಾಣುವಂತಾಗಿದೆ. 2014ರಲ್ಲಿ ನಡೆದ ಘಟನೆ ಇದಾಗಿದ್ದು 12 ವರ್ಷಗಳ ಕಾಲ ಕೋಮಾದಲ್ಲೇ ‘ಜೀವಂತ ಶವ’ದಂತೆ ಬದುಕಿ ಕೊನೆಗೆ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಇದರ ಬೆನ್ನಲ್ಲೇ ಈ ಸೈಕೋ ವೈದ್ಯನ ಕ್ರೂರ ಕೃತ್ಯಗಳನ್ನ ಆತನ ಪತ್ನಿಯೇ ಬಾಯಿಬಿಟ್ಟಿದ್ದಾರೆ.
ಡಾ. ನಾಗಶ್ರೀ ಮೈಸೂರಿನ ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಜ್ಯೂನಿಯರ್ ವೈದ್ಯನಾಗಿದ್ದ ವಿನಯ್ ಕುಮಾರ್ ಪರಿಚಯವಾಗಿದ್ದ. ಪ್ರೀತಿ ಹೆಸರಿನಲ್ಲಿ ವಿಶ್ವಾಸ ಗಳಿಸಿದ ಬಳಿಕ ಮದುವೆಗೆ ಕುಟುಂಬ ಒಪ್ಪುವುದಿಲ್ಲವೆಂಬ ನೆಪದಲ್ಲಿ ಆತ್ಮಹತ್ಯೆ ನಾಟಕವಾಡಿ ಅವರನ್ನು ಮರುಳಾಗಿಸಿದ್ದನೆಂದು ಆರೋಪಿಸಲಾಗಿದೆ.
2014ರಲ್ಲಿ ಶ್ರೀರಂಗಪಟ್ಟಣದ ಲಾಡ್ಜ್‌ಗೆ ಕರೆದೊಯ್ದು ‘ಒಟ್ಟಿಗೆ ಸಾಯೋಣ’ ಎಂದು ನಂಬಿಸಿ, ಡಾ.ನಾಗಶ್ರೀ ಅವರಿಗೆ ನಿದ್ರೆ ಮಾತ್ರೆಗಳು ಹಾಗೂ ಅಧಿಕ ಪ್ರಮಾಣದ ಇಂಜೆಕ್ಷನ್ ನೀಡಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ನಾಟಕವಾಡಿದ ವಿನಯ್, ಅಚ್ಚರಿ ರೀತಿಯಲ್ಲಿ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದ. ಆದರೆ ಅಧಿಕ ಪ್ರಮಾಣದ ಔಷಧಿಯಿಂದ ನಾಗಶ್ರೀ ಕೋಮಾಕ್ಕೆ ಜಾರಿದ್ದು, 12 ವರ್ಷಗಳ ಕಾಲ ಅಸಹಾಯಕ ಸ್ಥಿತಿಯಲ್ಲಿ ಬದುಕಿ ಕೊನೆಗೂ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ 2014ರಲ್ಲಿಯೇ ನಾಗಶ್ರೀ ಅವರ ತಂದೆ, ಇದು ಆತ್ಮಹತ್ಯೆ ಪ್ರಯತ್ನವಲ್ಲ, ಕೊಲೆ ಯತ್ನವೆಂದು ಆರೋಪಿಸಿ ದೂರು ನೀಡಿದ್ದರು. ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದರೆ, ವಿನಯ್ ಮಾತ್ರ ತಕ್ಷಣ ಚೇತರಿಸಿಕೊಂಡದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತನಿಖೆಯಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದ್ದು, ಇದನ್ನು ಪ್ರಶ್ನಿಸಿ ಕಾನೂನು ಹೋರಾಟ ಮುಂದುವರಿದಿದೆ.
ಡಾ. ವಿನಯ್ ಕುಮಾರ್ ವಿರುದ್ಧ ಇದೇ ರೀತಿಯ ಆರೋಪಗಳು ಹಲವಾರು ಪ್ರಕರಣಗಳಲ್ಲಿ ಕೇಳಿಬಂದಿವೆ. ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಗೌತಮಿ ಹಿರೇಮಠ ಕೂಡ ಈತನಿಂದ ವಂಚನೆಗೊಳಗಾಗಿ ಪ್ರಾಣ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿಯೂ ಬಿ ರಿಪೋರ್ಟ್ ಸಲ್ಲಿಕೆಯಾಗಿರುವುದಾಗಿ ತಿಳಿದುಬಂದಿದೆ.
ಈ ಎಲ್ಲಾ ಘಟನೆಗಳ ಬಳಿಕ ವಿನಯ್ ಕುಮಾರ್ ಮತ್ತೊಬ್ಬರನ್ನು ಮದುವೆಯಾಗಿದ್ದ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆತನ ನಿಜಸ್ವರೂಪ ಹೊರಬಂದಿದ್ದು, ಮದ್ಯಪಾನ ಮಾಡಿ ಹಿಂಸೆ ನೀಡುವುದು, ಗನ್ ತೋರಿಸಿ ಬೆದರಿಸುವುದು, ಆಸ್ತಿ ಬರೆಸಿಕೊಳ್ಳುವ ಒತ್ತಡ ಹಾಕುವುದು ಸೇರಿದಂತೆ ಗಂಭೀರ ಆರೋಪಗಳನ್ನು ಪತ್ನಿ ಮಾಡಿದ್ದಾರೆ. “ಮದುವೆಯಾಗುವಾಗ ಆತನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮದುವೆ ಬಳಿಕ ಒಂದು ದಿನವೂ ಸುಖವಾಗಿರಲಿಲ್ಲ. ನನ್ನಂತೆಯೇ ಇನ್ನಾವ ಮಹಿಳೆಗೂ ಈ ಸ್ಥಿತಿ ಬರಬಾರದು” ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.
ಪ್ರಸ್ತುತ ಹುಣಸೂರು ತಾಲೂಕಿನ ಹನಗೂಡಿನಲ್ಲಿ ಕ್ಲಿನಿಕ್ ನಡೆಸುತ್ತಿರುವ ಈ ವೈದ್ಯನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸರಣಿ ಆರೋಪಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಯಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಪ್ರಕರಣವು ಕೇವಲ ವ್ಯಕ್ತಿಗತ ದುರಂತವಷ್ಟೇ ಅಲ್ಲ, ವೈದ್ಯಕೀಯ ವೃತ್ತಿಯ ನೈತಿಕತೆ ಮತ್ತು ಕಾನೂನು ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೂ ದೊಡ್ಡ ಪ್ರಶ್ನೆಯಾಗಿದೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am