ಬ್ರೇಕಿಂಗ್ ನ್ಯೂಸ್
29-10-25 02:33 pm Mangalore Correspondent ಕ್ರೈಂ
ಪುತ್ತೂರು, ಅ.29 : ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ವಂಚನೆ ನಡೆಸಿರುವ ವ್ಯಕ್ತಿಯೊಬ್ಬನ ವಿರುದ್ಧ ಮೂರ್ತೆದಾರರ ಸಹಕಾರಿ ಸಂಘ, ಪಡೀಲ್ ಪುತ್ತೂರು ಇದರ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸವಿತಾ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ವಿವಿಧ ದಿನಗಳಲ್ಲಿ ಒಟ್ಟು 101 ಗ್ರಾಮ್ ನಕಲಿ ಚಿನ್ನವನ್ನು ಅಡವಿಟ್ಟು 6 ಲಕ್ಷಕ್ಕೂ ಅಧಿಕ ಸಾಲ ಪಡೆದು ವಂಚಿಸಿದ್ದಾಗಿ ತಿಳಿಸಿದ್ದಾರೆ.
ಆಗಸ್ಟ್ 5ರಂದು ವಿನೋದ್ ಎಂಬಾತ 32 ಗ್ರಾಮ್ ಚಿನ್ನದ ಸರವನ್ನು ತಂದಿದ್ದು ಸರಾಫ ಶ್ರೀನಿವಾಸ ಆಚಾರ್ಯ ಪರಿಶೀಲಿಸಿದ ಬಳಿಕ ಎರಡು ಲಕ್ಷ ರೂ. ಸಾಲ ನೀಡಲಾಗಿತ್ತು. ಆನಂತರ, ಮರುದಿನ ಆಗಸ್ಟ್ 6ರಂದು 17 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್ ತಂದಿದ್ದು, ಸರಾಫರ ಪರಿಶೀಲನೆ ಬಳಿಕ 1.10 ಲಕ್ಷ ರೂ. ಸಾಲ ನೀಡಲಾಗಿತ್ತು.
ಆಗಸ್ಟ್ 26ರಂದು ಇದೇ ವ್ಯಕ್ತಿ ಒಂದು ಚೈನ್ ಮತ್ತು ಎರಡು ಬ್ರಾಸ್ಲೇಟ್ ಸೇರಿ 52 ಗ್ರಾಮ್ ತೂಕದ ಚಿನ್ನವನ್ನು ಅಡಮಾನ ಇರಿಸಲು ಬಂದಿದ್ದು ಸರಾಫ ಶ್ರೀನಿವಾಸ ಆಚಾರ್ಯ ಪರಿಶೀಲನೆ ಬಳಿಕ ಸೊಸೈಟಿಯಿಂದ 1.10 ಲಕ್ಷ ರೂ. ಸಾಲ ನೀಡಲಾಗಿತ್ತು. ಸೆ.4ರಂದು ಆರೋಪಿ ವಿನೋದ್ ಶಾಖೆಗೆ ಬಂದಿದ್ದು, ಆಗಸ್ಟ್ 5ರಂದು ಇಟ್ಟಿದ್ದ ಬಂಗಾರವನ್ನು ಬಿಡಿಸಲು ಎರಡು ಲಕ್ಷ ಅಸಲಿ ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಪಾವತಿಸಿದ್ದಾನೆ. ಆನಂತರ, ಅದೇ ಬಂಗಾರವನ್ನು ಮರಳಿ ಅಡವಿಟ್ಟು 2.10 ಲಕ್ಷ ಸಾಲ ಪಡೆದಿದ್ದಾನೆ.
ಈ ನಡುವೆ, ಅ.17ರಂದು ಆರೋಪಿ ವಿನೋದ್ ಬೇರೆ ಸಹಕಾರಿ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ತೆಗೆದಿರುವ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದಿರುವುದನ್ನು ನೋಡಿ, ನಮ್ಮ ಶಾಖೆಯಲ್ಲಿ ಇಟ್ಟಿರುವ ಚಿನ್ನವನ್ನು ಪುತ್ತೂರಿನ ಬಾಲಾಜಿ ಎಂಟರ್ ಪ್ರೈಸಸ್ ನಲ್ಲಿ ಪರಿಶೀಲನೆ ನಡೆಸಿದಾಗ ವಿವಿಧ ದಿನಗಳಲ್ಲಿ ಅಡಮಾನ ಇರಿಸಿರುವ 101.580 ಗ್ರಾಮ್ ತೂಕದ ಚಿನ್ನ ನಕಲಿ ಎಂದು ತಿಳಿದುಬಂದಿರುತ್ತದೆ ಎಂದು ದೂರು ನೀಡಿದ್ದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A case has been registered against a man who allegedly pledged fake gold ornaments to obtain loans from the Murthydarara Co-operative Society, Padil, Puttur. The society’s acting manager, Savitha, has lodged a formal complaint at the Puttur City Police Station.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am